ಕಾರ್ಕಳ : ಕೆಲಸ ಸಿಗದ ಚಿಂತೆಯಲ್ಲಿ ಇಂಜಿನಿಯರ್ ಪದವೀಧರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಣೂರು ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಸಾಣೂರು ಗ್ರಾಮದ ಸುರೇಶ ಎಂಬವರ ಮಗ ಸುಮಂತ್(22) ಎಂದು ಗುರುತಿಸಲಾಗಿದೆ. ಇವರು ಇಂಜಿನಿಯರಿಂಗ್ ವಿದ್ಯಾಬ್ಯಾಸ ಮುಗಿಸಿದ್ದು ಕೆಲಸ ಸಿಗಲಿಲ್ಲ ಎಂಬ ಕೊರಗಿನಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
			        


 
			         
                        
 
                        

 
                        
 
                        

 
                        
 
                        
 
                        
 
                         
                        
 
                        