Sushanth Brahmavar A top-graduate from Poorna Prajna Evening college and Vice-President of Bharthiya Janatha Party OBC Morcha Udupi City of RSS Background Who has brought international Fame Award for completing Entire Bhagvadgits”s Verses in 5.30 hours has been nominated for one more National Fame Award of India Books of Awards, which has brought great privilage to the party in the city but the intresting part does not end here he has also taken the steps for getting the farmers ahead by giving great innovative margin profits to the farmers of the state promoting Indian Produce.Mr.Sushanth’s work has not only empowered local farmers but also set new benchmarks in sustainable agri-business.His entrepreneurial spirit and passion for excellence make him a true inspiration in many fields. Let us all applause his dedication and extend our heartfelt appreciation for his contribution to the nations’ economic and agricultural growth.
Trending
ಅನುಮಾನಾಸ್ಪದ ವ್ಯಕ್ತಿಗಳು, ಬೋಟ್ಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ
ಮಲ್ಪೆ : ಯಾವುದೇ ಅನುಮಾನಾಸ್ಪದ ಬೋಟುಗಳ ಚಲನವಲನ, ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಅನುಮಾನಾಸ್ಪದ ವ್ಯಕ್ತಿ, ಬೋಟ್ಗಳು ಕಂಡು ಬಂದಲ್ಲಿ ತತ್ಕ್ಷಣ ಇಂಡಿಯನ್ ನೇವಿ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್ ಸಹಿತ ವಿವಿಧ ರಕ್ಷಣ ಸಿಬಂದಿಗಳಿಗೆ ಮಾಹಿತಿ ನೀಡಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಮೀನುಗಾರರಿಗೆ ತಿಳಿಸಿದ್ದಾರೆ.
ಮೀನುಗಾರರಿಗೆ ಈ ಬಗ್ಗೆ ಮಾಹಿತಿ ನೀಡಿ ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ ಜನರು ಕಾಣಿಸಿಕೊಂಡಲ್ಲಿ ತತ್ಕ್ಷಣ ಮಾಹಿತಿ ನೀಡಬೇಕು, ಇಲಾಖೆಯಿಂದ ಅಳವಡಿಸಿದ ಟ್ರಾನ್ಸ್ಫಾಂಡರ್ಗಳನ್ನು ಚಾಲನೆಯಲ್ಲಿಟ್ಟುಕೊಂಡು ನಭಾಮಿತ್ರ ಅಪ್ಲಿಕೇಶನ್ ಮುಖಾಂತರ ಮಾಹಿತಿ ನೀಡಬೇಕು.
ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಸಮುದ್ರದಲ್ಲಿ 2ರಿಂದ 3ಬೋಟುಗಳು ಗುಂಪಿನಲ್ಲಿ ಮೀನುಗಾರಿಕೆ ಮಾಡುವುದು ಸೂಕ್ತ, ರಾತ್ರಿ ವೇಳೆ ಮೀನುಗಾರಿಕೆ ಮಾಡುವಾಗ, ಲಂಗರು ಹಾಕಿರುವಾಗ ನ್ಯಾವಿಗೇಶನಲ್ ಲೈಟನ್ನು ಆನ್ ಮಾಡಿಕೊಳ್ಳಬೇಕು.
ಸಮುದ್ರದಲ್ಲಿ ರಕ್ಷಣ ಪಡೆಯವರು ತಪಾಸಣೆ ಮಾಡಿದ್ದಲ್ಲಿ ಎಲ್ಲರೂ ಸಹಕರಿಸುವುದು ಉತ್ತಮ. ಎಲ್ಲರೂ ಕ್ಯೂಆರ್ ಕೋಡೆಡ್ ಆಧಾರ್ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಗಿ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಳ್ಳತಕ್ಕದ್ದು. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ತೆರಳದಿರುವುದು ಸೂಕ್ತ ಎಂದು ತಿಳಿಸಿದ್ದಾರೆ.
ಟೈಮಿಂಗ್ ವಿಚಾರದಲ್ಲಿ ಗಲಾಟೆ; ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…!
ಉಡುಪಿ : ಮಣಿಪಾಲದ ಟೈಗರ್ ಸರ್ಕಲ್ ಖಾಸಗಿ ಬಸ್ ನಿಲ್ದಾಣದ ಬಳಿ ಟೈಮಿಂಗ್ ವಿಚಾರಕ್ಕೆ ಗಲಾಟೆ ನಡೆದು ಕಂಡಕ್ಟರ್ ಹಾಗೂ ಡ್ರೈವರ್ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎ.2ರಂದು ಸಂಜೆ 4:30 ಗಂಟೆ ಸುಮಾರಿಗೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಟೈಮಿಂಗ್ ವಿಚಾರದಲ್ಲಿ ಆನಂದ್ ಬಸ್ನ ಕಂಡಕ್ಟರ್ ವಿಜಯ ಕುಮಾರ್ ಹಾಗೂ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್ ಆಲ್ಪಾಜ್ ನಡುವೆ ಗಲಾಟೆ ನಡೆದಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!
ಉಡುಪಿ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಯಾಗಿರುವ ಮತ್ತು ಆರ್.ಎಸ್.ಎಸ್ ಕಾರ್ಯಕರ್ತನಾಗಿರುವ ಸುಶಾಂತ್, ಪೂರ್ಣಪ್ರಜ್ಞಾ ಸಂಜೆ ಕಾಲೇಜಿನ ಪದವೀಧರನಾಗಿದ್ದು, ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷರಾಗಿ ಉಡುಪಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024 ಡಿಸೆಂಬರ್ 22ರಂದು, ವಿಶ್ವಪ್ರಸಿದ್ಧ ಉಡುಪಿ ಕೃಷ್ಣ ಮಠದ ಪುತ್ತಿಗೆ ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಪತಂಜಲಿ ಗುರುಕುಲದ ವಿದ್ಯಾರ್ಥಿಗಳು 8.00 ಗಂಟೆಗಳಲ್ಲಿ ಸಂಪೂರ್ಣ ಭಗವದ್ಗೀತೆಯ ಶ್ಲೋಕಗಳನ್ನು ಬರೆದು ನಿರ್ಮಿಸಿದ್ದ ದಾಖಲೆಗಳನ್ನು ಮೀರಿಸಿ, ಸುಶಾಂತ್ ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯಗಳು ಮತ್ತು 700 ಶ್ಲೋಕಗಳ ಬರಹವನ್ನು ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸ್ವಾಮೀಜಿಯವರ ಆಶೀರ್ವಾದದಿಂದ ಈ ಮಹತ್ವದ ಸಾಧನೆಯನ್ನು ಮಾಡಿ, ಸಾವಿರಾರು ಜನರಿಂದ ಅಭಿನಂದನೆಗೆ ಪಾತ್ರರಾದರು. ಅಲ್ಲದೆ, ಈ ಸಾಧನೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗಿದ್ದು, ವಿಶ್ವದಾಖಲೆಯಾಗಿ ಗುರುತಿಸಲ್ಪಟ್ಟಿದೆ.
ಈ ಅಪೂರ್ವ ಸಾಧನೆಗೆ ಸಮಾಜದ ಎಲ್ಲೆಡೆ ಮೆಚ್ಚುಗೆ ದೊರಕಬೇಕೆಂಬ ನಿರೀಕ್ಷೆ ಇದ್ದು, ಭಾರತದ ಪ್ರಥಮ ನಾಗರಿಕರಾದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಹಾಗೂ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ದಾಮೋದರದಾಸ್ ಮೋದಿ ಅವರಿಂದ ಈ ಮಹಾನ್ ಕಾರ್ಯಕ್ಕೆ ಮಾನ್ಯತೆ ದೊರಕುವ ಆಶಯವಿದೆ. ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ಸುಶಾಂತ್ ಅವರ ಈ ಅದ್ಭುತ ಸಾಧನೆಯನ್ನು ಗಮನಿಸಿ, ಅವರು ಹೆಚ್ಚಿನ ಮಟ್ಟದ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಪಡೆದು, ಪಕ್ಷದ ಕಲ್ಯಾಣಕ್ಕಾಗಿ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.
ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ : ಪ್ರತಿಭಟನಾ ಸಭೆಯಲ್ಲಿ ಗದ್ದಲ, ರಾಜಕೀಯ ಭಾಷಣಕ್ಕೆ ವಿರೋಧ
ಉಡುಪಿ : ಮಲ್ಪೆ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯಲ್ಲಿ ಗದ್ದಲ ಉಂಟಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರು ಭಾಷಣ ಮಾಡುವಾಗಗ ಮೀನುಗಾರರು ವಿರೋಧ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡಬಾರದು ಎಂದು ಆಕ್ಷೇಪಿಸಿದರು.
ರಮೇಶ್ ಕಾಂಚನ್ ತಮ್ಮ ಭಾಷಣದಲ್ಲಿ ಪ್ರಮೋದ್ ಮಧ್ವರಾಜ್ಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮೀನುಗಾರರ ಆಕ್ರೋಶ ವ್ಯಕ್ತಪಡಿಸಿದರು. ರಮೇಶ್ ಕಾಂಚನ್ ಭಾಷಣ ನಿಲ್ಲಿಸದಿದ್ದಾಗ, ಮೀನುಗಾರರು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು. ಬಂಧಿತ ಮೀನುಗಾರ ಮಹಿಳೆಯರು ಜೈಲಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಮಾತನಾಡಬೇಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ತಡೆಯಲು ಮುಖಂಡರು ಹರಸಾಹಸ ಪಡಬೇಕಾಯಿತು. ನಂತರ, ಪೊಲೀಸ್ ಭದ್ರತೆಯಲ್ಲಿ ರಮೇಶ್ ಕಾಂಚನ್ ಅವರು ಸಭೆಯಿಂದ ನಿರ್ಗಮಿಸಿದರು.
ಮಲ್ಪೆ ಬಂದರಿನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಾವಿರಾರು ಮೀನುಗಾರರು ಮೀನುಗಾರಿಕೆಗೆ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ : ಮೀನುಗಾರ ಮಹಿಳೆಯರ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ
ಉಡುಪಿ : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣದಲ್ಲಿ ಅಮಾಯಕ ಮೀನುಗಾರ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಸಾವಿರಾರು ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದರು. ಬಂಧಿತ ಮಹಿಳೆಯರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ದಾಖಲಿಸಿರುವ ಜಾತಿ ನಿಂದನೆ ಪ್ರಕರಣವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಲ್ಪೆ ಮೀನುಗಾರರ ಸಂಘದ ನೇತೃತ್ವದ ಪ್ರತಿಭಟನೆಯಲ್ಲಿ, “ಈ ಪ್ರಕರಣದಲ್ಲಿ ಅಮಾಯಕ ಮಹಿಳೆಯರನ್ನು ಬಂಧಿಸಲಾಗಿದೆ. ಪೊಲೀಸರು ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಬಂದರಿನಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕಳ್ಳತನ ನಡೆದರೂ, ಮೀನುಗಾರ ಸಂಘದ ನೇತೃತ್ವದಲ್ಲೇ ಪ್ರಕರಣಗಳನ್ನು ಪರಿಹರಿಸಬೇಕು. ಪೊಲೀಸ್ ಇಲಾಖೆ ಸಂಘದ ಅನುಮತಿ ಇಲ್ಲದೆ ಬಂದರಿನ ಸಮಸ್ಯೆಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಕರಣಕ್ಕೆ ಮೂಲ ಕಾರಣರಾದ ಹೆಡ್ ಕಾನ್ಸ್ಟೇಬಲ್ ಲೋಕೇಶ್ ಮತ್ತು ಲಕ್ಷ್ಮಣ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಮೀನುಗಾರರು ಒತ್ತಾಯಿಸಿದರು.
ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ನಾಲ್ಕು ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯೊಳಗೆ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮೀನುಗಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ್ ಸುವರ್ಣ ಭಾಗವಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಫಾಸ್ಟ್ಟ್ಯಾಗ್ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!
ಟೋಲ್ ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುವುದಾದರೆ ಇಂದಿನಿಂದ ಜಾರಿಯಾಗುವ ಫಾಸ್ಟ್ಟ್ಯಾಗ್ನ ಹೊಸ ನಿಯಮವನ್ನು ತಿಳಿದಿರಬೇಕು.
ಫಾಸ್ಟ್ಟ್ಯಾಗ್ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕಪ್ಪುಪಟ್ಟಿ ಅಥವಾ ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲಾಗುತ್ತದೆ. ಜೊತೆಗೆ ಬ್ಲ್ಯಾಕ್ ಲಿಸ್ಟ್ಗೆ ಸೇರ್ಪಡೆಯಾದ ಫಾಸ್ಟ್ಟ್ಯಾಗ್ಗಳಿಗೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ.
ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್ಟ್ಯಾಗ್ ಸಕ್ರಿಯವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬೇಕು. ವಾಹನವು ಟೋಲ್ ದಾಟುವ ಮೊದಲು 60 ನಿಮಿಷಗಳಿಗಿಂತ ಹೆಚ್ಚು ಕಾಲ ಮತ್ತು ಟೋಲ್ ದಾಟಿದ ನಂತರ 10 ನಿಮಿಷಗಳ ಕಾಲ ಫಾಸ್ಟ್ಟ್ಯಾಗ್ ನಿಷ್ಕ್ರಿಯವಾಗಿದ್ದರೆ ದುಪ್ಪಟ್ಟು ಹಣ ಪಾಪತಿಸಬೇಕಾಗುತ್ತದೆ.
ಫಾಸ್ಟ್ಟ್ಯಾಗ್ನ ಹೊಸ ನಿಯಮಗಳು ಈ ಕೆಳಗಿನಂತಿವೆ :
💥ಫಾಸ್ಟ್ಟ್ಯಾಗ್ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು.
💥ಟೋಲ್ ಹತ್ತಿರ ಬಂದಮೇಲೆ ರಿಚಾರ್ಜ್ ಮಾಡೋಣ ಅಂದರೆ ಸಮಸ್ಯೆಯಾಗಲಿದೆ. ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್ಟ್ಯಾಗ್ ಆಕ್ಟೀವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.
💥ಕೆವೈಸಿ ಮಾಡಿಲ್ಲ ಎಂದಾದರೆ ನಿಮ್ಮ ಫಾಸ್ಟ್ಟ್ಯಾಗ್ ಅನ್ನು ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ.
💥ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್ಟ್ಯಾಗ್ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.
💥ಟೋಲ್ಗೇಟ್ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.
ಉಡುಪಿ : ಇದೇ ಮೊದಲ ಬಾರಿಗೆ ಹಿರಿಯ ನಟಿ ಉಮಾಶ್ರೀ ಯಕ್ಷಗಾನವೊಂದರಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ.
ಹೊನ್ನಾವರದಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಉಮಾಶ್ರೀ ಅಭಿನಯಿಸಿದರು. ಅದರಲ್ಲಿ ಮಂಥರೆಯಾಗಿ ಅಭಿನಯಿಸಿದ ನಟಿ, ಯಕ್ಷಪ್ರೇಮಿಗಳ ಗಮನ ಸೆಳೆದರು.
ಉಡುಪಿ ಜಿಲ್ಲೆಯ ಪೆರ್ಡೂರು ಮೇಳದಿಂದ ಈ ಯಕ್ಷಗಾನ ಆಯೋಜನೆಗೊಂಡಿತ್ತು.
ರಾಜಕಾರಣಿ ಕಂ ಖ್ಯಾತ ನಟಿಯಾಗಿರುವ ಉಮಾಶ್ರೀ, ಯಕ್ಷಗಾನ ರಂಗದಲ್ಲಿ ಸವಾಲಿನ ಪಾತ್ರ ಎಂದೇ ಪರಿಗಣಿಸಲಾಗುವ ಮಂಥರೆಯ ವೇಷ ಧರಿಸಿದ್ದು ಯಕ್ಷಪ್ರೇಮಿಗಳನ್ನು ಪುಳಕಗೊಳಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ – ಸುನಿಲ್ ಕುಮಾರ್ ವ್ಯಂಗ್ಯ
ಕಾರ್ಕಳ : ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸರ್ಕಾರದ ನಕ್ಸಲ್ ಪ್ಯಾಕೇಜ್ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಫೇಸ್ಬುಕ್ನಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವವರು, ಈಗ ಬಂದೂಕು ಹಿಡಿದು ಗುಂಡಿಟ್ಟು ಭಯ ಸೃಷ್ಟಿಸುವವರಿಗೆ ಹೂಗುಚ್ಚ ಕೊಟ್ಟು ಸ್ವಾಗತಿಸಿ ಸಮೋಸಾ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಅರ್ಬನ್ ನಕ್ಸಲರ ಪಾಲಿಟ್ ಬ್ಯೂರೋ ಆಗಿ ಬದಲಾಗಿದೆ. ಖುದ್ದು ಸಿದ್ದರಾಮಯ್ಯನವರೇ ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ತತ್ವ-ಸಿದ್ಧಾಂತ ಅರ್ಬನ್ ನಕ್ಸಲರು ಹೈಜಾಕ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಶರಣಾದ ರೀತಿ, ಪ್ಯಾಕೇಜ್ ಘೋಷಣೆ ವಿಧಾನ, ಪ್ರಕರಣ ರದ್ಧತಿ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪವಿದೆ. ಸಿದ್ದರಾಮಯ್ಯನವರ ಕೋರ್ ಕಮಿಟಿ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಅರಚಿದರೂ ನಾವು ಹೆದರುವುದಿಲ್ಲ. ಅಷ್ಟಕ್ಕೂ ಬೇಕಾಬಿಟ್ಟಿ ಪ್ಯಾಕೇಜ್ ಘೋಷಿಸುವುದಕ್ಕೆ ರಾಜ್ಯದ ಬೊಕ್ಕಸದ ಹಣ ಯಾರದೋ ಜಮೀನು ನುಂಗಿ-ನೀರು ಕುಡಿದು ಸಂಪಾದಿಸಿದ ಸ್ವಯಾರ್ಜಿತ ಸೈಟಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶರಣಾಗತಿ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ಅರ್ಬನ್ ನಕ್ಸಲರು ಶರಣಾಗತಿ ಪ್ರಕ್ರಿಯೆ ಬಗ್ಗೆ ನಡೆಸಿದ ಪ್ರಹಸನದಲ್ಲಿ ಸಿಎಂ ನಿರ್ದೇಶನದ ಭಾಗವೆಷ್ಟು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಒಂದೆಡೆ ನಕ್ಸಲ್ ಶರಣಾಗತಿ ಬಗ್ಗೆ ಮಾತನಾಡುವ ಸರ್ಕಾರ, ಅರಣ್ಯ ವಾಸಿಗಳಿಗ ಪುನರ್ಸತಿ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಮಹಾತ್ಮಾಗಾಂಧಿ ರಾಷ್ಟ್ರಪಿತ ಅಲ್ಲ ಎಂದ ಮೀನಾಕ್ಷಿ ಶೆಹ್ರಾವತ್ ವಿರುದ್ಧ ಸುಮೊಟೋ ಕೇಸ್
ಉಡುಪಿ : ಉಡುಪಿಯ ಪಿಪಿಸಿ ಆಡೋಟೋರಿಯಂನಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಡೆಹ್ರಾಡೂನ್ನ ಭಾಷಣಕಾರ್ತಿ, ಚಿಂತಕಿ ಮೀನಾಕ್ಷಿ ಶೆಹ್ರಾವತ್ ಸೇರಿದಂತೆ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಮೀನಾಕ್ಷಿ ಶೆಹ್ರಾವತ್ ಕಾರ್ಯಕ್ರಮದಲ್ಲಿ ‘ಬಾಂಗ್ಲಾ ಪಾಠ’ ಎಂಬ ವಿಷಯವನ್ನು ಉದ್ದೇಶಿಸಿ ಮಾತನಾಡಿ, ಗಾಂಧೀಜಿ ಜಿನ್ನಾ ಜೊತೆಗೆ ಸೇರಿಕೊಂಡು ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ, ನಾವು ಮಹಾತ್ಮಾ ಗಾಂದೀಜಿಯನ್ನು ರಾಷ್ಟ್ರಪಿತ ಎಂದು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಹೀಗೆ ಅವರು ತಮ್ಮ ಭಾಷಣದಲ್ಲಿ ದೇಶದ ಬೇರೆ ಬೇರೆ ಧರ್ಮಗಳ ನಡುವೆ ಘರ್ಷಣೆ ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವುದಾಗಿ ದೂರಲಾಗಿದೆ.
ಅದರಂತೆ ಮೀನಾಕ್ಷಿ ಶೆಹ್ರಾವತ್ ಮತ್ತು ಕಾರ್ಯಕ್ರಮದ ಆಯೋಜಕ ಗೋವಿಂದರಾಜು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 353(2) ಜೊತೆಗೆ 3(5)ರಡಿಯಲ್ಲಿ ಪ್ರಕರಣ ದಾಖಲಾಗಿದೆ.