Sushanth Brahmavar A top-graduate from Poorna Prajna Evening college and Vice-President of Bharthiya Janatha Party OBC Morcha Udupi City of RSS Background Who has brought international Fame Award for completing Entire Bhagvadgits”s Verses in 5.30 hours has been nominated for one more National Fame Award of India Books of Awards, which has brought great privilage to the party in the city but the intresting part does not end here he has also taken the steps for getting the farmers ahead by giving great innovative margin profits to the farmers of the state promoting Indian Produce.Mr.Sushanth’s work has not only empowered local farmers but also set new benchmarks in sustainable agri-business.His entrepreneurial spirit and passion for excellence make him a true inspiration in many fields. Let us all applause his dedication and extend our heartfelt appreciation for his contribution to the nations’ economic and agricultural growth.
Udupi District
ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಮರಳು ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು – ಸಂಸದ ಕೋಟ
ಉಡುಪಿ : ಜಿಲ್ಲೆಯಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಮನೆ, ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗಬೇಕು. ಅಷ್ಟರೊಳಗೆ ಕೇಂದ್ರ ಕಚೇರಿ ಅನುಮತಿ, ಟೆಂಡರ್ ಪ್ರಕ್ರಿಯೆ ಇತ್ಯಾದಿ ಪೂರ್ಣಗೊಳಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಜಿಲ್ಲೆಯ ಮರಳು ಸಮಸ್ಯೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮರಳು ನಿರ್ವಹಣೆ ಸಮಿತಿ ಅಥವಾ ಏನೇ ವ್ಯವಸ್ಥೆಯಿದ್ದರೂ ಶಾಸಕರಿಗೆ ಯಾವುದೇ ಮಾಹಿತಿ ನೀಡದೇ ಕಾರ್ಯನಿರ್ವಹಿಸುವುದು ಸರಿಯಲ್ಲ. ಇಲಾಖೆಯಿಂದ ಶಾಸಕರಿಗೆ ಈ ಬಗ್ಗೆ ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕು. ಹಾಗೆಯೇ ಸ್ಥಳೀಯವಾಗಿ ಸಮಸ್ಯೆಗಳಿದ್ದರೆ ಜನ ಪ್ರತಿನಿಧಿಗಳ ಗಮನಕ್ಕೆ ತಂದು ಬಗೆಹರಿಸಬೇಕು ಎಂದರು.
ಜಿಲ್ಲೆಯ ನಾನ್ ಸಿಆರ್ಝಡ್ ವ್ಯಾಪ್ತಿಯ 28 ಕಡೆ ಮರಳು ತೆಗೆಯಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 9 ಕಡೆ ಮರಳು ತೆಗೆಯುತ್ತಿಲ್ಲ. ಗುತ್ತಿಗೆ ಮಂಜೂರಾದ 14 ಬ್ಲಾಕ್ಗಳಲ್ಲಿ 11 ಕಡೆ ಕೆಲಸ ನಡೆಯುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮರಳು ತೆಗೆಯಲು 101 ಕಡೆಗುರುತಿಸಿದ್ದು, ಅದರಲ್ಲಿ 11 ಕಡೆ ಟೆಂಡರ್ ಪೂರ್ಣಗೊಂಡಿದೆ. 14 ಕಡೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್ ತಿಳಿಸಿದರು.
ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ್ ಗಂಟಿಹೊಳೆಯವರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್ಪಿ ಡಾ| ಅರುಣ್ ಕೆ. ಉಪಸ್ಥಿತರಿದ್ದರು.
ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪಂಚಮಿ ಟ್ರಸ್ಟ್ ಹಾಗೂ ಗಾಂಧಿ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಬ್ರಹ್ಮಗಿರಿ ನಾಯರ್ಕೆರೆಯಲ್ಲಿ ಸ್ಥಾಪಿಸಲಾದ ಸೂಚನಾ ಫಲಕದ ಅನಾವರಣ ಕಾರ್ಯಕ್ರಮ ಗುರುವಾರ ನಡೆಯಿತು.
ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ನಾಮಫಲಕವನ್ನು ಅನಾವರಣಗೊಳಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಪ್ರತಿಯೊಂದು ಸಂದರ್ಭದಲ್ಲೂ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರು ಕಾಲಕಾಲಕ್ಕೆ ತಮ್ಮ ಆರೋಗ್ಯವನ್ನು ತಪಾಸಣೆ ಮಾಡುವುದು ಅತೀ ಅಗತ್ಯವಾಗಿದೆ. ಅದೇ ರೀತಿ ಪ್ರಥಮ ಚಿಕಿತ್ಸೆಯ ಕುರಿತು ಕೂಡ ಪತ್ರಕರ್ತರಿಗೆ ತರಬೇತಿ ನೀಡುವುದು ಮುಖ್ಯ. ಇದಕ್ಕೆಲ್ಲ ನಮ್ಮ ಸಂಸ್ಥೆಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಾಂಧಿ ಆಸ್ಪತ್ರೆಯ ವತಿಯಿಂದ ಭಾರತೀಯ ಸೇನೆಗೆ ನೀಡಲಾದ 55,555ರೂ. ಮೊತ್ತದ ದೇಣಿಗೆಯ ಚೆಕ್ನ್ನು ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಅವರ ಮೂಲಕ ಉಡುಪಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಡಾ.ಸುರೇಶ್ ಶೆಣೈ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಪತ್ರಕರ್ತ ಜನಾರ್ದನ ಕೊಡವೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸೂಚನಾ ಫಲಕದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮುಖ್ಯ ಕಚೇರಿ, ಉಡುಪಿ ಪತ್ರಿಕಾ ಭವನ(ಪ್ರೆಸ್ಕ್ಲಬ್), ಐಎಂಎ ಭವನ, ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಹೋಗುವ ಮಾರ್ಗಯನ್ನು ಸೂಚಿಸಲಾಗಿದೆ.
ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ, ಉದ್ಯಮ ಮತ್ತು ಆಹಾರ ಮೇಳ
ಉಡುಪಿ : ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಮೇ 18ರಂದು ಬ್ರಾಹ್ಮ ಸಭಾಭವನದಲ್ಲಿ ಪ್ರಥಮ ಬಾರಿಗೆ ವಿಪ್ರ ಬಾಂಧವರಿಗಾಗಿ ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ – ಜಾನಪದ ನೃತ್ಯ ಸಂಭ್ರಮ 2025 ಅನ್ನು ಹಮ್ಮಿಕೊಂಡಿದೆ. 40ರ ಒಳಗಿನ ಹಾಗೂ 40ರ ಮೇಲಿನ ಹರೆಯದವರಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಸಹಿತ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅದೇ ದಿನ ಮುಂಜಾನೆಯಿಂದ ವಿಪ್ರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಧವಿಧ ವಿಪ್ರ ಉದ್ಯಮಗಳ ಮಳಿಗೆಗಳಿಗೆ ಉಚಿತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಎಲ್ಲದಕ್ಕಿಂತಲೂ ಮುಖ್ಯವಾಗಿ ಅದೇ ದಿನ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ರುಚಿ ಶುಚಿಯಾದ ಆಹಾರ ಖಾದ್ಯಗಳ ಮೇಳವನ್ನು ಕೂಡ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಈ ಉದ್ಯಮ ಮೇಳ ಮತ್ತು ಆಹಾರ ಮೇಳ ಮುಂಜಾನೆ 9 ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಸಾರ್ವಜನಿಕರೆಲ್ಲರೂ ಈ ಕಾರ್ಯಕ್ರಮದಲ್ಲಿ ಮನೆಯವರು ಹಾಗೂ ಗೆಳೆಯರೊಂದಿಗೆ ಭಾಗವಹಿಸಿ ಅದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದೆ. ಚಂದ್ರಕಾಂತ್ ಕೆ.ಎನ್., ವಿಷ್ಣು ಪ್ರಸಾದ್ ಪಾಡಿಗಾರ್, ರಘುಪತಿ ರಾವ್, ಚೈತನ್ಯ ಎಂ. ಜಿ ಮತ್ತು ರವಿರಾಜ್ ಉಪಸ್ಥಿತರಿದ್ದರು.
ಕೋಟ : ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತಪಟ್ಟ ಘಟನೆ ಆಗುಂಬೆ ಸಮೀಪದ ಕೊಪ್ಪ ಬಳಿ ಸಂಭವಿಸಿದ್ದು, ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ವ್ಯಕ್ತಿಯನ್ನು ಯಕ್ಷಗಾನ ಕಲಾವಿದ ರಂಜಿತ್ ಬನ್ನಾಡಿ ಎಂದು ಗುರುತಿಸಲಾಗಿದೆ.
ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಯಕ್ಷಗಾನ ಪ್ರದರ್ಶನ ಮಳೆಯಿಂದ ರದ್ದಾಗಿದ್ದು, ಸ್ಕೂಟರ್ನಲ್ಲಿ ವಾಪಾಸಾಗುತ್ತಿದ್ದ ವೇಳೆ ಆಗುಂಬೆ ಕೊಪ್ಪ ಸಮೀಪ ವಿದ್ಯುತ್ ತಂತಿ ಮೈಮೇಲೆ ಬಿದ್ದಿದೆ. ದ್ವಿಚಕ್ರ ವಾಹನ ಬಿಡುತ್ತಿದ್ದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಸ್ಥಳೀಯರ ಸಹಕಾರದಿಂದ ಮಣಿಪಾಲ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಹ ಸವಾರ ವಿನೋದ್ ರಾಜ್ ಘಟನೆಯಲ್ಲಿ ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ ಇದರ ಮೂಲಕ ಸಂಜೀವಿನಿ ಗುಂಪಿನ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ‘ಉಡುಪಿ ಸಂಜೀವಿನಿ’ ಬ್ರಾಂಡ್ ಹೆಸರಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಿಪಂನ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಸಂಜೀವಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಜಿಲ್ಲೆಯ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ವಿವಿಧ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ದೊರಕುವಂತಾಗಬೇಕು. ಮೊದಲ ಹಂತದಲ್ಲಿ ಆಯ್ದ 25ರಿಂದ 30 ಉತ್ಪನ್ನಗಳನ್ನು ಮಾತ್ರ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಎಲ್ಲಾ ಉತ್ಪನ್ನಗಳನ್ನು ಉಡುಪಿ ಸಂಜೀವಿನಿ ಬ್ರಾಂಡ್ ಅಡಿಯಲ್ಲಿ ತರಲಾಗುವುದು ಎಂದು ಕೋಟ ಈ ಸಂದರ್ಭದಲ್ಲಿ ನುಡಿದರು.
ಇದೇ ಸಂದರ್ಭದಲ್ಲಿ ಅಮವಾಸೆಬೈಲ್ ಗ್ರಾಮದ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ ಹಾಗೂ ಹಳ್ಳಿಹೊಳೆ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಕೃತಕ ಆಭರಣಗಳನ್ನು ಬಿಡುಗಡೆ ಮಾಡಲಾಯಿತು.
ಮೃತ ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎಂದು ಬಿಂಬಿಸಲು ವ್ಯವಸ್ಥಿತ ಹುನ್ನಾರ – ಸುನಿಲ್ ಕುಮಾರ್
ಕಾರ್ಕಳ : ಹಿಂದುತ್ವಕ್ಕಾಗಿ ಬದುಕಿದ ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎಂದು ಬಿಂಬಿಸಲು ವ್ಯವಸ್ಥಿತ ಹುನ್ನಾರ ಮಾಡಲಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಆಪಾದಿಸಿದ್ದಾರೆ.
ಪೊಲೀಸ್ ವ್ಯವಸ್ಥೆ, ಸ್ಥಳೀಯಾಡಳಿತ, ಮುಖ್ಯಮಂತ್ರಿ, ಗೃಹ ಸಚಿವರು, ಉಸ್ತುವಾರಿ ಸಚಿವರು ಒಂದಾಗಿ, ಹೇಳಿಕೆಯಲ್ಲಿ, ಭಾಷಣದಲ್ಲಿ, ಜಾಲತಾಣದಲ್ಲಿ ಇದನ್ನೇ ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ಇದು ಸುಹಾಸ್ಗೆ ಮಾತ್ರವಲ್ಲ, ಜೆಹಾದಿ ಮನಃಸ್ಥಿತಿಯ ವಿರುದ್ಧ ಯಾರೆಲ್ಲ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದಾರೋ ಅವರೆಲ್ಲರಿಗೂ ಇದೇ ಹಣೆಪಟ್ಟಿ ಕಟ್ಟುವ ಪ್ರಯತ್ನ ನಡೆಸಲಾಗಿದೆ. ಸುಹಾಸ್ನಂಥವರ ಕೊಲೆಗೆ ಸಂಚು ರೂಪಿಸುವ ಪಿಎಫ್ಐ ಉಗ್ರರಿಗೆ ಸಂಪುಟ ಉಪಸಮಿತಿ ಶಿಫಾರಸ್ಸಿನ ಮೇರೆಗೆ ಪ್ರಕರಣ ವಾಪಾಸ್ ಭಾಗ್ಯ ನೀಡಲಾಗಿದೆ ಎಂದು ಟೀಕಿಸಿದ್ದಾರೆ.
ಸುಹಾಸ್ ಬದುಕಿದ್ದರೆ ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರು. ಆದರೆ ಅದಕ್ಕೆ ಅವಕಾಶ ನೀಡದೆ ಏಕಮುಖವಾಗಿ ರೌಡಿ ಶೀಟರ್ಪಟ್ಟವನ್ನು ಕಾಂಗ್ರೆಸ್ಸಿಗರು ನೀಡಿದ್ದಾರೆ ಎಂದು ಪ್ರಕಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗಾಗಿ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ 02, ಪುರಸಭೆ ಮತ್ತು ಪಟ್ಟಣ ಪಂಚಾಯತ್ಗಳಲ್ಲಿ ತಲಾ 01 ರಂತೆ ಮಾಸಿಕ ರೂ. 9000 ಗೌರವಧನದ ನೆಲೆಯಲ್ಲಿ “ನಗರ ಪುನರ್ವಸತಿ ಕಾರ್ಯಕರ್ತರ” (ಯು.ಆರ್.ಡಬ್ಲ್ಯೂ) ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 01 ರಂತೆ ಮಾಸಿಕ 9,000 ಗೌರವಧನದ ನೆಲೆಯಲ್ಲಿ “ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ” (ವಿ.ಆರ್.ಡಬ್ಲ್ಯೂ) ನೇಮಕಾತಿ ಮಾಡಿಕೊಳ್ಳಲು ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿ.ಆರ್.ಡಬ್ಲ್ಯೂ ನೇಮಕಾತಿಗಾಗಿ ಬಾಕಿ ಇರುವ ಗ್ರಾಮ ಪಂಚಾಯತ್ಗಳ ವಿವರ: ಉಡುಪಿ ತಾಲೂಕಿನ ಕಡೆಕಾರು ಹಾಗೂ ಮಣಿಪುರ, ಬ್ರಹ್ಮಾವರ ತಾಲೂಕಿನ 38 ಕಳತ್ತೂರು ಹಾಗೂ ಹೆಗ್ಗುಂಜೆ, ಹೆಬ್ರಿ ತಾಲೂಕಿನ ಹೆಬ್ರಿ, ಶಿವಪುರ ಹಾಗೂ ಬೆಳ್ವೆ, ಕಾಪು ತಾಲೂಕಿನ ಬೆಳಪು, ಮಜೂರು ಹಾಗೂ ಹೆಜಮಾಡಿ, ಕುಂದಾಪುರ ತಾಲೂಕಿನ ಕೆರಾಡಿ ಮತ್ತು ಕಾರ್ಕಳ ತಾಲೂಕಿನ ಕಲ್ಯಾ. ಯು.ಆರ್.ಡಬ್ಲ್ಯೂ ನೇಮಕಾತಿಗಾಗಿ ಖಾಲಿ ಇರುವ ಸ್ಥಳೀಯ ಸಂಸ್ಥೆ – ಕುಂದಾಪುರ ಪುರಸಭೆ.
ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರುವ, ಶೇ.40 ಕ್ಕಿಂತ ಮೇಲ್ಪಟ್ಟು ವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಾಧಿಕಾರದಿಂದ ನೀಡಲ್ಪಟ್ಟಿರುವ ವಿಕಲಚೇತನರ ವಿಶಿಷ್ಟ ಗುರುತುಚೀಟಿ (ಯು.ಡಿ.ಐ.ಡಿ ಕಾರ್ಡ್) ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವ ವಿಕಲಚೇತನರು ತಮ್ಮ ವಾಸಸ್ಥಳ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯತ್ ಅಥವಾ ಗ್ರಾಮ ಪಂಚಾಯತ್ನಿಂದ ಪಡೆದ ವಾಸ್ತವ್ಯ ದೃಢೀಕರಣ ಪತ್ರ ಹಾಗೂ 3 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಇವರಿಗೆ ಮೇ 20ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಮುಖ್ಯಸ್ಥರ ಆಯ್ಕೆ ಸಮಿತಿ ಮೂಲಕ ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುವುದು.
ಉಡುಪಿ : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿದರು. ಶಾಸಕರಾದ ರಾಜೇಶ್ ನಾಯ್ಕ್ರವರೊಂದಿಗೆ ಭೇಟಿ ನೀಡಿದ ಸಂಸದ ಕೋಟ, ಸುಹಾಸ್ ಶೆಟ್ಟಿ ಅವರ ತಂದೆ ತಾಯಿ ಮತ್ತು ಅವರ ಸಹೋದರರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಅವರ ತಾಯಿ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಸರ್ಕಾರವು ತನ್ನ ಮಗನನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ತೋಡಿಕೊಂಡರು. ಸುಮಾರು 20 ದಿನಗಳಿಂದ ಸುಭಾಸ್ ಶೆಟ್ಟಿಯನ್ನು ಪದೇ ಪದೇ ಪರಿಶೀಲಿಸಿ ಆತನ ಕಾರು ತಪಾಸಣೆ ಮಾಡಿ ಆತನನ್ನು ನಿಶಸ್ತ್ರಗೊಳಿಸುವಂತೆ ಮಾಡಿದ್ದರು. ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಳ್ಳದ ಹಾಗೆ ಪ್ರಯಾಣಿಸುವ ಬಗ್ಗೆ ಸರ್ಕಾರವು ತನ್ನ ಮಗನನ್ನು ಕೊಲ್ಲಲು ಪರೋಕ್ಷವಾಗಿ ಸಹಕರಿಸಿದೆ. ಠಾಣೆಗೆ ಕರೆಸಿ ಯಾವುದೇ ಕಾರಣಕ್ಕೂ ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡರೆ ಜೈಲಿಗೆ ಅಟ್ಟುತ್ತೇವೆ ಎಂಬ ಬೆದರಿಕೆಯನ್ನು ಪೊಲೀಸರ ಮೂಲಕ ಸರ್ಕಾರವು ಹಾಕಿತ್ತು. ಹೀಗಾಗಿ ಆತನನ್ನು ಕೊಲೆ ಮಾಡಲು ಹಂತಕರಿಗೆ ಸುಲಭವಾಯಿತು. ಕನಿಷ್ಠ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಮನೆಗೆ ಬಾರದೆ ಒಂದು ಸಾಂತ್ವನ ಹೇಳುವ ಕನಿಷ್ಠ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಮುಸ್ಲಿಂ ಮುಖಂಡರು ಹೇಳಿದಂತೆ ಸರ್ಕಾರ ಕುಣಿಯುತ್ತಿದೆ ಎಂದು ಸುಹಾಸ್ ಕುಟುಂಬಸ್ಥರು ಬೇಸರ ತೋಡಿಕೊಂಡರು.
ಎಲ್ಲಾ ಹೇಳಿಕೆಗಳನ್ನು ಗಮನಿಸಿದ ಸಂಸದರು ನಿಶ್ಚಯವಾಗಿ ಈ ಪ್ರಕರಣವನ್ನು ಎನ್ಐಎಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಉಡುಪಿ : ಉಡುಪಿಯಲ್ಲಿ ರಾಘವೇಂದ್ರ ಮಠದ ಯಾತ್ರಿಕರ ವಸತಿ ನಿಲಯದ ಶಂಕುಸ್ಥಾಪನೆಗಾಗಿ ಆಗಮಿಸಿದ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರನ್ನು ಕೃಷ್ಣಮಠದಲ್ಲಿ ಸಾಂಪ್ರದಾಯಿಕವಾಗಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿಲಾಯಿತು. ಮಂತ್ರಾಲಯ ಶ್ರೀಗಳು ಕೃಷ್ಣನ ದರ್ಶನ ಪಡೆದರು.
ಈ ಸಂದರ್ಭ ಗೀತಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರಾಲಯ ಶ್ರೀಗಳಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಮತ್ತು ಕಿರಿಯಪಟ್ಟ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಸಾಂಪ್ರದಾಯಿಕ ಗಂಧೋಪಚಾರ ಮಾಲಿಕೆ ಮಂಗಳಾರತಿ ಮಾಡಿ ಮಠದ ಗೌರವ ಸಲ್ಲಿಸಿದರು. ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಬಳಿಕ ಮಂತ್ರಾಲಯ ಮಠದ ವತಿಯಿಂದ ಉಡುಪಿ ರಥಬೀದಿ ಪರಿಸರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯಾತ್ರಿಕರ ನೂತನ ವಸತಿ ನಿಲಯಕ್ಕೆ ಮಂತ್ರಾಲಯ ಶ್ರೀಪಾದರ ಅಪೇಕ್ಷೆಯಂತೆ ಪರ್ಯಾಯ ಪುತ್ತಿಗೆ ಹಿರಿಯ ಶ್ರೀಪಾದರು ತಮ್ಮ ಶಿಷ್ಯರೊಂದಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.