ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಬೀಚ್‌ನಲ್ಲಿ ಅಪರಿಚಿತ ಶವವೊಂದು ತೇಲಿಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೈಂದೂರು ಪೊಲೀಸರು ಸ್ಥಳೀಯರ ಸಹಾಯದಿಂದ ಶವವನ್ನು ಮೇಲಕ್ಕೆತ್ತಿ ಶವಾಗಾರದಲ್ಲಿರಿಸಿದ್ದಾರೆ. ಮೃತರಿಗೆ ಸಂಬಂದಿಸಿದ ವ್ಯಕ್ತಿಗಳು ಇದ್ದರೆ ಗಂಗೊಳ್ಳಿ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ವಿನಂತಿ ಮಾಡಿದ್ದಾರೆ. ಮಧ್ಯ ವಯಸ್ಸು ದಾಟಿದ ಗಂಡಸಿನ ಶವ ಇದಾಗಿದ್ದು ಗುರುತು ಸಿಗದಷ್ಟು ಬಾತು ಹೋಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.