Wednesday, December 4, 2024
Banner
Banner
Banner
Home » ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ : ಬ್ಯಾಂಕ್‌ಗಳಿಗೆ ಕೋಟ ಸಲಹೆ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ : ಬ್ಯಾಂಕ್‌ಗಳಿಗೆ ಕೋಟ ಸಲಹೆ

by NewsDesk

ಉಡುಪಿ : ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಿಕ ಸಿಬ್ಬಂದಿಗಳನ್ನು ನೇಮಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು.

ಅವರು ಉಡುಪಿ ಜಿಲ್ಲಾಡಳಿತ ಕೇಂದ್ರದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆ, ಸ್ವನಿಧಿ, ಮುದ್ರಾ ಮತ್ತು ಕೇಂದ್ರ ಸರಕಾರದ ಇತರ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಜನಸಾಮಾನ್ಯರ ಬ್ಯಾಂಕ್ ಆಗಿರಬೇಕು. ಆದರೆ ಸ್ಥಳೀಯ ಭಾಷಿಕರಲ್ಲದ ಸಿಬ್ಬಂದಿಗಳನ್ನು ನೇಮಿಸಿ ಜನಸಾಮಾನ್ಯರಿಂದ ದೂರವಾಗುತ್ತಿದೆ. ಈ ಬಗ್ಗೆ ಕೇಂದ್ರ ಹಣಕಾಸು ಮಂತ್ರಿಗಳಿಗೆ ಪತ್ರ ಬರೆದಿದ್ದು, ಹೊರ ರಾಜ್ಯದ ಸಿಬ್ಬಂದಿಗಳಾದರೂ ಅವರು ಸ್ಥಳೀಯ ಭಾಷೆಯನ್ನು ಕಲಿತ ಬಳಿಕ ನೇಮಿಸಿ. ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂದರು.

ಪಿಎಂ ವಿಶ್ವಕರ್ಮ ಯೋಜನೆ 18 ಕುಲಕಸುಬುಗಳಿಗೆ ಶಕ್ತಿ ತುಂಬುವ ಯೋಜನೆ ಇದಾಗಿದ್ದು, 12ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಮೀಸಲಿರಿಸಿದೆ. ಉಡುಪಿ ಜಿಲ್ಲೆಯಲ್ಲಿ 17ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು 8022 ಅರ್ಜಿಗಳು ಶಿಫಾರಸ್ಸುಗೊಂಡು 6338 ಅರ್ಜಿಗಳು ಶಿಫಾರಸ್ಸುಗೊಳ್ಳಲು ಬಾಕಿ ಇದೆ. 6338 ಅರ್ಜಿಗಳು ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿದ್ದು, 9 ನೋಂದಾಯಿತ ಸಂಸ್ಥೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಉದ್ಯೋಗ ಸೃಜನಾ ಯೋಜನೆಯಡಿ 203 ಫಲಾನುಭವಿಗಳಿಗೆ 2113.22ಲಕ್ಷ ರೂ. ಸಾಲವನ್ನು ಮಂಜೂರಾಗಿದೆ. ಮುದ್ರಾ ಯೋಜನೆಯಡಿ 18521 ಫಲಾನುಭವಿಗಳಿಗೆ 306.42 ಕೋಟಿ ಸಾಲ ವಿತರಿಸಲಾಗಿದೆ. ಸ್ವನಿಧಿ ಯೋಜನೆಯಡಿ, 4779 ಮಂದಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದು, 4690 ಫಲಾನುಭವಿಗಳಿಗೆ ಪ್ರಥಮ ಹಂತದಲ್ಲಿ 4.68 ಕೋಟಿ ಸಾಲ ಮಂಜೂರಾಗಿದೆ. ದ್ವಿತೀಯ ಹಂತದಲ್ಲಿ 3077 ಅರ್ಜಿ ಸ್ವೀಕರಿಸಲಾಗಿದ್ದು, 2853ಫಲಾನುಭವಿಗಳಿಗೆ 5.70 ಕೋಟಿ ಸಾಲ ಮಂಜೂರಾಗಿದೆ. ಮೂರನೇ ಹಂತದಲ್ಲಿ 1045 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 845 ಫಲಾನುಭವಿಗಳಿಗೆ 5.70 ಕೋಟ ಸಾಲ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb