205
ಬ್ರಹ್ಮಾವರ : ಉಪ್ಪೂರು ಶ್ರೀಗದ್ದಿಗೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಗಸ್ಟ್ 2 ರಂದು ಬೆಳಗಿನ ಜಾವ ಇಬ್ಬರು ಕಳ್ಳರು ದೇವಸ್ಥಾನದ ಎದುರಿನ ಬಾಗಿಲಿನ ಚಿಲಕವನ್ನು ಮುರಿದು ಒಳಗೆ ಪ್ರವೇಶಿಸಿ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ದೇವರ ಚಿನ್ನದ ದೃಷ್ಟಿ ಹಾಗೂ ಚಿನ್ನದ ಮೂಗು, ಬೆಳ್ಳಿಯ ತಂಬಿಗೆ ಸೇರಿದಂತೆ 80000ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.