ಉಡುಪಿ : ಇತ್ತೀಚಿನ ದಿನಗಳಲ್ಲಿ ಉಭಯ ಜಿಲ್ಲೆಗಳ ಕಂಬಳ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಶನಿವಾರ ಅಸುನೀಗಿದೆ.
ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯ ನಾಗು ಎಂಬ ಕೋಣ ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ನಾಲ್ಕು ವರ್ಷಗಳ ಹಿಂದೆ ಹಲಗೆ ಸೀನಿಯರ್ ವಿಭಾಗಕ್ಕೆ ಎಂಟ್ರಿ ನೀಡಿದ್ದ ನಾಗು ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.