ಉಡುಪಿ : ನಾಗರಿಕ ಸಮಿತಿ ಬಂಟಕಲ್ಲು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ ಬಂಟಕಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಅವರಿಗೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಹಸ್ತಾಂತರಿಸಿದರು.
ಬಳಿಕ ಮಾತನಾಡುತ್ತಾ ಉಡುಪಿ ತಾಲೂಕಿನಲ್ಲಿ ಈಗಾಗಲೇ 65 ಗ್ರಂಥಾಲಯಗಳು ಮನೆ, ಅಂಗಡಿ, ಆಸ್ಪತ್ರೆ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣಗೊಂಡಿವೆ. 100 ದಿನಗಳಲ್ಲಿ ನೂರು ಗ್ರಂಥಾಲಯ ನಿರ್ಮಾಣಗೊಳ್ಳುವ ಆಶಯವನ್ನು ಹೊಂದಿದ್ದು, ಕಸಾಪ ಕಾಪು ತಾಲೂಕು ಘಟಕ ಈ ಅಭಿಯಾನದಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ ಆಚಾರ್ಯ, ಸದಸ್ಯರಾದ ವೈಲೆಟ್ ಕಾಸ್ತಲಿನೂ, ಉಮೇಶ್ ರಾವ್, ಡೆನೀಸ್ ಡಿ ಸೋಜ, ವಿನ್ಸಂಟ್ ಕಾಸ್ತಲಿನೂ, ಅಶೋಕ, ಹರೀಶ್, ವಿರೇಂದ್ರ ಪಾಟ್ಕರ್, ವಿಶ್ವನಾದ್ ಬಾಂದೇಲ್ಕರ್, ಸುನೀಲ್, ಕಸಾಪ ಉಡುಪಿ ತಾಲೂಕು ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಮನೆಯೇ ಗ್ರಂಥಾಲಯ ಇದರ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ದೀಪಾ ಚಂದ್ರಕಾಂತ್ ಮೊದಲಾದವರಿದ್ದರು.