ಮಣಿಪಾಲ : ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು 20 ಸಾವಿರ ರೂ. ನಗದು ಹಾಗೂ ಚಾಕಲೇಟ್ಗಳನ್ನು ಕಳವು ಮಾಡಿದ ಘಟನೆ ತಡರಾತ್ರಿ ನಡೆದಿದೆ.
ಇಬ್ಬರು ಕಳ್ಳರ ಈ ಕರಾಮತ್ತು ಅಂಗಡಿಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಕ್ಯಾಶ್ ಕೌಂಟರ್ನಲ್ಲಿರಿಸಿದ್ದ 20 ಸಾವಿರ ರೂ. ನಗದು ಕಳವುಗೈದ ಕಳ್ಳರು ಅನಂತರ ಚಾಕಲೇಟ್ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೇ ಅವರಿಗೆ ಬೇಕಿದ್ದ ಬ್ರಷ್ ಸಹಿತ ಕೆಲವೊಂದು ವಸ್ತುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.