ಉಡುಪಿ : Autism Society of Udupi, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಉಡುಪಿ, ಮತ್ತು ರೋಟರಿ ಕ್ಲಬ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಸಂವೇದ ಪೋಷಕರ ಮಾಸಿಕ ಸಭೆ – 4 ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಉದ್ಘಾಟನೆ ಕಾರ್ಯಕ್ರಮವನ್ನು ರೇವ್. ಡಾಮಿನಿಕ್ ಸುನಿಲ್ ಲೋಬೊ, ಪ್ರಾಂಶುಪಾಲರು, ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ, ನೆರವೇರಿಸಿದರು. ಅಧ್ಯಕ್ಷತೆಯನ್ನು ಡಾ. ಪಿ.ವಿ. ಭಂಡಾರಿ ವಹಿಸಿದರು. ಡಾ. ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕ ಮಾತು ನೀಡಿದರು. ಸ್ವಾಗತ ಭಾಷಣವನ್ನು ಶ್ರೀಮತಿ ಶಾಹಿನ್ ಮಾಡಿದರು,
Autism Society of Udupi : ಪ್ರಥಮ ಸುದ್ದಿಪತ್ರ ಬಿಡುಗಡೆ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, Autism Society of Udupi ತನ್ನ ಮೊದಲ ಸುದ್ದಿಪತ್ರವನ್ನು ಬಿಡುಗಡೆ ಮಾಡಿತು. ಈ ಸುದ್ದಿಪತ್ರವನ್ನು ASU ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅಮಿತಾ ಪೈ ,ಶ್ರೀ ಟೇಡ್ಡಿ ಆಂಡ್ರ್ಯೂಸ್(HOD, ಪ್ರಸನ್ನ ಶಾಲೆ ಆಫ್ ಪಬ್ಲಿಕ್ ಹೆಲ್ತ್) ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಭೆಯಲ್ಲಿ ರೋಟರಿ ಕ್ಲಬ್ ಮಣಿಪಾಲದ Rtn. ನಾಗರಾಜ್ ಶೆಟ್ಟಿ, ಡಾ. ಮಾನಸ್ ಈ.ಆರ್. ಮುಂತಾದವರು ಪಾಲ್ಗೊಂಡು ತಮ್ಮ ಮಾತುಗಳನ್ನು ಹಂಚಿಕೊಂಡರು.
ಶ್ರೀ ಕೀರ್ತೇಶ್ ಎಸ್ ಮತ್ತು ಶ್ರೀಮತಿ ಸೌಜನ್ಯ ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಸಂವೇದ ಪೋಷಕರ ಈ ಮಾಸಿಕ ಸಭೆ ಮಕ್ಕಳ ಬೆಳವಣಿಗೆ ಮತ್ತು ತಾಂತ್ರಿಕ ಸಹಾಯದ ಕುರಿತು ಪ್ರಾಮುಖ್ಯತೆಯಿಂದ ಚರ್ಚೆ ಮಾಡಿತು.
ಕಾರ್ಯಕ್ರಮದ ಅಂತಿಮವಾಗಿ, ವಂದನೆಯನ್ನು ಶ್ರೀಮತಿ ರೆಹನಾ (ಸಂವೇದ ಸದಸ್ಯೆ) ಅರ್ಪಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ವೃತ್ತಿಪರ ಚಿಕಿತ್ಸಕಿ ಶ್ರೀಮತಿ ಪೂರ್ಣಿಮಾ ಎಸ್. ಯಶಸ್ವಿಯಾಗಿ ಮಾಡಿದರು.