ಉಡುಪಿ : ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪುಂದ ವೆಂಕಟ ಖಾರ್ವಿ ಇವರ ಮನೆಗೆ “ಸ್ವಾತಂತ್ರ್ಯ ಹೋರಾಟಗಾರರ ಮನೆ” ನಾಮ ಫಲಕ ಅನಾವರಣಗೊಳಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿ ಪೂವ೯ ಕಾಲೇಜು ಬೈಂದೂರು, ಹಸ್ತ ಚಿತ್ರ ಫೌಂಡೇಶನ್ ವತಿಯಿಂದ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ, ಸಮೃದ್ಥ ಜನಸೇವಾ ಚಾರಿಟೇಬಲ್ ಟ್ರಸ್ಟ್ ರಿ ಬೈಂದೂರು ಸಹಯೋಗದಲ್ಲಿ ಸ್ವರಾಜ್ಯ 75 ತಂಡದ 33ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯನ್ನು ಅರುಣ ಶಿರೂರು ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣ್ಯರು ಪುಷ್ಪಾರ್ಚನೆಗೈದರು. ಆದರ್ಶ ಕೆಲ ನಾಮಫಲಕ ಅನಾವರಣಗೊಳಿಸಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ಉಪ್ಪುಂದ ವೆಂಕಟ ಖಾರ್ವಿ ಸ್ವಾತಂತ್ರ್ಯ ಹೋರಾಟದ ವಿಚಾರವನ್ನು ಕುಮಾರಿ ಕವಿತಾ ಆಚಾರ್ಯ ಮುದೂರು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದ ಅಧ್ಯಯನ ಕೇಂದ್ರದ ಉಪ್ಪುಂದ ಚಂದ್ರಶೇಖರ ಹೊಳ್ಳರು ವಹಿಸಿದ್ದರು. ಗಣ್ಯರಾಗಿ ಪ್ರಸನ್ನ ಮಯ್ಯ, ಶ್ರೀಮತಿ ಅಕ್ಷತಾ ಗಿರೀಶ್ ಐತಾಳ್, ಆಶಾಲತಾ ಮರವಂತೆ, ಗಣೇಶ್ ಖಾರ್ವಿ ಕಿರಿಮಂಜೇಶ್ವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು, ಕುಟುಂಬಸ್ಥರು, ಊರ ಹತ್ತು ಸಮಸ್ತರು ಭಾಗಿಯಾಗಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾರ್ಯಕ್ರಮ ಸಂಚಾಲಕರಾದ (ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷೆ ತಿಳಿಸಿದರು. ಪ್ರಸಾದ್ ಮೊಗವೀರ ಕಾರ್ಯಕ್ರಮ ನಿರೂಪಿಸಿದರು. ರಮಿತ್ ಕುಮಾರ್ ವಂದಿಸಿದರು.