ಕಾರ್ಕಳ : ಹೆಬ್ರಿಯ ಅಮೃತ ಭಾರತಿ ಶಾಲೆಯಲ್ಲಿ ಇಸ್ರೋದವರು ಆಯೋಜಿಸಿದ್ದ ‘ವರ್ಲ್ಡ್ ಸ್ಪೇಸ್ ವೀಕ್-2024’ ಕ್ವಿಜ್ನಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅರುಷಿ ಮತ್ತು ರೋಹನ್ ಕೆ. ಶಿವರುದ್ರಪ್ಪ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಶಿಕ್ಷಕ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
Education
ಗಂಗೊಳ್ಳಿ : ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ ಅಂಗವಾಗಿ ನಾಗೂರಿನಲ್ಲಿ ಏರ್ಪಡಿಸಿದ್ದ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆಯ ಆರು ಮತ್ತು ಏಳನೇ ತರಗತಿಯ ವಿಭಾಗದಲ್ಲಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಮ್ ದೇವಾಡಿಗ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಂಜಿತ್ ಎಮ್ ದೇವಾಡಿಗ ಸ್ಯಾಕ್ಸೋಫೋನ್ ಕಲಾವಿದ ಮಾದವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್ ದಂಪತಿ ಪುತ್ರ.
ಉಡುಪಿ : ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೃಷ್ಣಾನಂದ ಪ್ರಭು ಆರ್.ವಿ. ಮಾರ್ಗದರ್ಶನದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ. ಸೈರೋಝ್ ಮಂಡಿಸಿದ “ಸೆರುಮ್ ಮೈಕ್ರೋ ನ್ಯೂಟ್ರಿನ್ಟ್ಸ್, ಥೈರಾಯ್ಡ್ ಪ್ರೊಫೈಲ್ ಆ್ಯಂಡ್ ಪ್ಲೆಸೆಂಟಲ್ ಥೈರಾಯ್ಡ್ ಹಾರ್ಮೋನ್ ರಿಸೆಪ್ಟರ್ ಎಕ್ಸ್ಪ್ರೆಶನ್ ಇನ್ ಪ್ರಗ್ನೆನ್ಸಿ ಔಟ್ ಕಮ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಮಾಹೆ ವಿಶ್ವ ವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಇವರು ಮೂಳೂರಿನ ರಜಬ್ ಬ್ಯಾರಿ ಹಾಗೂ ಹಫ್ಸಾ ದಂಪತಿ ಪುತ್ರಿ. ಇವರ ಪಿಎಚ್ಡಿ ಸಂಶೋಧನೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಅನುದಾನ ನೀಡಿದೆ.
ಉಡುಪಿ : ಜಿಲ್ಲಾ ಮಟ್ಟದ 2024-25ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 15 ಮಂದಿ ಶಿಕ್ಷಕರುಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು : ಮಾಲಿನಿ ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಚ್ಚೂರು ಕಾರ್ಕಳ ವಲಯ, ಖಾತುನ್ ಬಿ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾರು ಉರ್ದು ಉಡುಪಿ ವಲಯ, ರವಿರಾಜ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಹಿ ಪ್ರಾ ಶಾಲೆ ಹೈಕಾಡಿ ಬ್ರಹ್ಮಾವರ ವಲಯ, ಶ್ರೀನಿವಾಸ ಶೆಟ್ಟಿ ಸಹಶಿಕ್ಷಕರು ಸಕಿಪ್ರಾ ಶಾಲೆ ಗೋಪಾಡಿ ಪಡು ಕುಂದಾಪುರ ವಲಯ, ಅಮಿತಾ ಬಿ ಸಹಶಿಕ್ಷಕರು ಸಕಿಪ್ರಾಶಾಲೆ ಬಾರಂದಾಡಿ ಬೈಂದೂರು ವಲಯ.
ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು: ಭಾಸ್ಕರ ಪೂಜಾರಿ ಸಹ ಶಿಕ್ಷಕರು ಕೆಪಿಎಸ್ ಕೊಕ್ಕರ್ಣೆ ಬ್ರಹ್ಮಾವರ ವಲಯ, ರಾಮಕೃಷ್ಣ ಭಟ್ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರು ಕೊಪ್ಲ ಉಡುಪಿ ವಲಯ, ಶ್ರೀಮತಿ ಶೆಟ್ಟಿ ಶಶಿಕಲಾ ನಾರಾಯಣ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈರಬೆಟ್ಟು ಕಾರ್ಕಳ ವಲಯ, ಜಯಾನಂದ ಪಟಗಾರ, ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರಂಜಾಲು ಬೈಂದೂರು ವಲಯ, ಸೀತಾರಾಮ ಶೆಟ್ಟಿ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಂಗಳೂರು ಕುಂದಾಪುರ ವಲಯ.
ಪ್ರೌಢ ಶಾಲಾ ಶಿಕ್ಷಕರು: ಕಮಲ್ ಅಹ್ಮದ್ – ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಶಿವಪುರ ಕಾರ್ಕಳ ವಲಯ, ಮಂಜುನಾಥ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಬೈಂದೂರು ವಲಯ, ಜ್ಯೋತಿ ಕೃಷ್ಣ ಪೂಜಾರಿ, ಸಹಶಿಕ್ಷಕರು ಸೋಮ ಬಂಗೇರ ಸರಕಾರಿ ಪ್ರೌಢ ಶಾಲೆ ಕೋಡಿಕನ್ಯಾನ ಬ್ರಹ್ಮಾವರ ವಲಯ, ಮಾಲತಿ ವಕ್ವಾಡಿ ಸಹಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ ಉಡುಪಿ ವಲಯ, ಕರುಣಾಕರ ಶೆಟ್ಟಿ, ಮುಖ್ಯ ಶಿಕ್ಷಕರು ಕೆಪಿಎಸ್ ಬಿದ್ಕಲ್ ಕಟ್ಟೆ ಕುಂದಾಪುರ ವಲಯ.
ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪಿ. ವಿ. ಆನಂದ ಸಾಲಿಗ್ರಾಮ ಆಯ್ಕೆ
ಉಡುಪಿ : ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಹೆಬ್ರಿ ತಾಲೂಕಿನ ಮುದ್ರಾಡಿಯ ಎಂ ಎನ್ ಡಿ ಎಸ್ ಎಂ ಖಾಸಗಿ ಪ್ರೌಢಶಾಲೆ ಶಾಲೆಯ ಶಿಕ್ಷಕ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಖ್ಯಾತ ಯಕ್ಷಗಾನ ಪ್ರಸಂಗಕರ್ತ ಪಿ. ವಿ. ಆನಂದ ಸಾಲಿಗ್ರಾಮ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಕಾರ್ಕಳ, ಕಾರ್ಯದರ್ಶಿಯಾಗಿ ರಾಜೀವ್ ಪೂಜಾರಿ, ಸರಕಾರಿ ಪದವಿಪೂರ್ವ ಕಾಲೇಜು ತೆಕ್ಕಟ್ಟೆ ಕುಂದಾಪುರ, ಕೋಶಾಧಿಕಾರಿಯಾಗಿ ಸುಭಿಕ್ಷಾ, ಸರಕಾರಿ ಪ್ರೌಢಶಾಲೆ ಕಾವಡಿ, ಬ್ರಹ್ಮಾವರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಪರ್ಣ ಬಾಯಿ ಕೆ. ಸರಕಾರಿ ಪ್ರೌಢಶಾಲೆ ಬೀಜಾಡಿ ಕುಂದಾಪುರ, ಮಂಜುನಾಥ್ ಕುಲಾಲ, ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ, ಸವಿತಾ ಜಿ. ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು, ಬೈಂದೂರು, ಕಾರ್ಕಳ ತಾಲೂಕು ಸಂಚಾಲಕರಾಗಿ ಜಾಲ್ಸೂರು ಗಣೇಶ್ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಕಾರ್ಕಳ, ಉಡುಪಿ ತಾಲೂಕು ಸಂಚಾಲಕರಾಗಿ ಗಣಪತಿ ಭಟ್, ಸರಕಾರಿ ಸಂಯುಕ್ತ ಪ್ರೌಢಶಾಲೆ, ಒಳಕಾಡು, ಬ್ರಹ್ಮಾವರ ತಾಲೂಕು ಸಂಚಾಲಕರಾಗಿ ಜ್ಯೋತಿ ಕೃಷ್ಣ ಪೂಜಾರಿ, ಸರಕಾರಿ ಪ್ರೌಢಶಾಲೆ ಕೋಡಿಕನ್ಯಾನ, ಕುಂದಾಪುರ ತಾಲೂಕು ಸಂಚಾಲಕರಾಗಿ ರಮೇಶ್ ಕುಲಾಲ ಎನ್. ಸರಕಾರಿ ಪ್ರೌಢಶಾಲೆ ಕೆದೂರು, ಹೆಬ್ರಿ ತಾಲೂಕು ಸಂಚಾಲಕರಾಗಿ ಮಹೇಶ್ ಹೈಕಾಡಿ, ಅಮೃತಭಾರತಿ ವಿದ್ಯಾಲಯ ಹೆಬ್ರಿ, ಬೈಂದೂರು ತಾಲೂಕು ಸಂಚಾಲಕರಾಗಿ ಗಣೇಶ್ ದೇವಾಡಿಗ, ಸರಕಾರಿ ಪ್ರೌಢಶಾಲೆ ಆಲೂರು, ಕಾಪು ತಾಲೂಕು ಸಂಚಾಲಕರಾಗಿ ಶಕುಂತಲಾ, ಪೂರ್ಣಪ್ರಜ್ಞಾ ಪ್ರೌಢ ಶಾಲೆ, ಅದಮಾರು ಆಯ್ಕೆಯಾದರು.
ಮಂಗಳೂರು : ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರು ನೀಡುವ 2024ರ ರಾಜ್ಯ ಮಟ್ಟದ “ಹಸಿರು ನೈರ್ಮಲ್ಯ ಅಭ್ಯುದಯ” ಪ್ರಶಸ್ತಿ ಮಂಗಳೂರಿನ ಬೈಕಂಪಾಡಿ ಮೀನಕಳಿಯದ ಸರಕಾರಿ ಪ್ರೌಢಶಾಲೆಗೆ ಲಭಿಸಿದೆ.
ಮುದ್ದೇನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಟ್ರಸ್ಟಿನ ಸಂಸ್ಥಾಪಕರಾದ ಶ್ರೀ ಸದ್ಗುರು ಮಧುಸೂಧನ ಸಾಯಿ ಇವರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷ್ಮೀನಾರಾಯಣ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಉತ್ತಮ ಶಾಲಾ ನೈರ್ಮಲ್ಯ, ಶಾಲಾ ಕೈತೋಟ, ಹಸಿರುವನ, ಪ್ರಯೋಗಾಲಯ, ವೈವಿಧ್ಯಮಯ ಪಠ್ಯಪೂರಕ ಚಟುವಟಿಕೆಗಳ ಆಧಾರದ ಮೇಲೆ ಟ್ರಸ್ಟ್ ಪ್ರತ್ಯಕ್ಷ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿ ಶಾಲೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. ಈ ಪ್ರಶಸ್ತಿಯು ರೂ.10000 ನಗದು ಬಹುಮಾನ, ಪ್ರಶಸ್ತಿ ಫಲಕ, ಶಿಕ್ಷಕರ ಡೈರಿ ಹಾಗೂ ಶಾಲಾ ವಿದ್ಯಾರ್ಥಿಗಳ ಮೌಲ್ಯಾಧಾರಿತ ಗ್ರಂಥಾಲಯ ಪುಸ್ತಕಗಳನ್ನು ಒಳಗೊಂಡಿದೆ.
ಮಣಿಪಾಲ : ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ 2024-25ರ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ಮನೋಜ್ ಕುಮಾರ್, ನಾಗಸಂಪಿಗೆ ಕಾರ್ಯದರ್ಶಿಯಾಗಿ ಡಾ. ನವೀನ್ ಕುಮಾರ್ ಕೊಡಮರ ಇವರಿಗೆ ಜು.9 ರಂದು ಶಾರದ ಸಭಾಂಗಣ ಎಂ.ಸಿ.ಹೆಚ್.ಪಿ ಮಣಿಪಾಲದಲ್ಲಿ ರೋಟರಿ ಮಾಜಿ ಗವರ್ನರ್ ಮೇಜರ್ ಡೋನರ್ ಬಿ.ಎನ್ ರಮೇಶ್ ಪದ ಪ್ರದಾನಗೈದರು.
ಸಮಾಜ ಸೇವೆ, ಸಾಮಾಜಿಕ ಜಾಗೃತಿ, ಆರೋಗ್ಯ, ಶಿಕ್ಷಣ, ಪರಿಸರ ಇದರ ಬಗ್ಗೆ ಕಾಳಜಿ, ಅರಿವು ಸಹಕಾರ ಇಂತಹ ಮನುಕುಲದ ಸೇವೆಗೈಯುವಲ್ಲಿ ರೋಟರಿಯ ಪಾತ್ರ ಮಹತ್ವವಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಮಾಹೆಯು ಸಿ.ಓ.ಓ ಡಾ.ರವಿರಾಜ್ ಎನ್.ಎಸ್ ಮಾತನಾಡಿ ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಾಹೆ ಒಂದೇ ನಾಣ್ಯದ ಎರಡು ಮುಖದಂತೆ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳು ಸೇರಿ ಸ್ಕಿನ್ ಬ್ಯಾಂಕ್, ಚೈಲ್ಡ್ ಕ್ಯಾನ್ಸರ್ ಎಂಡೋಮೆಂಟ್ ಫಂಡ್ ಆರೋಗ್ಯದ ಬಗ್ಗೆ ಮ್ಯಾರಥಾನ್ ನಂತಹ ಮಹತ್ ಕಾರ್ಯಗಳು ಮೂಡಿ ಬಂದಿರುವುದು ಹಾಗೂ ಕ್ಲಬ್ ನಡೆಸುತ್ತಿರುವ ಕಾರ್ಯವನ್ನು ಶ್ಲಾಘಿಸಿ ಶುಭಕೋರಿದರು, ಕಾರ್ಯಕ್ರಮದಲ್ಲಿ ರೋಟರಿ ವಲಯ 4ರ ಸಹಾಯಕ ಗವರ್ನರ್ ಜಗನ್ನಾಥ ಕೋಟೆ, ವಲಯ ಸೇನಾನಿ ನಾಗರಾಜ ಶೆಟ್ಟಿ ಉಪಸ್ಥಿತರಿದ್ದು, ಕ್ಲಬ್ನ ಸೇವೆಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕ್ಲಬ್ ಈ ವರ್ಷ ದಶಮಾನೋತ್ಸವವನ್ನು ಆಚರಿಸುತ್ತಿದ್ದು, ಈ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕ್ಲಬ್ಗೆ ಸಹಕಾರವಿತ್ತ ಎಲ್ಲರ ಸೇವೆ ಸ್ಮರಿಸಿ ಗೌರವಿಸಲಾಯಿತು.
ಕ್ಲಬ್ನ ಒಂದು ವರ್ಷದ ಚಟುವಟಿಕಾ ವರದಿಯನ್ನು ನಿರ್ಗಮನ ಕಾರ್ಯದರ್ಶಿ ಡಾ. ದೀಪಕ್ ರಾಮ್ ಬಾಯರಿ ಮಂಡಿಸಿ, ನಿರ್ಗಮನ ಅಧ್ಯಕ್ಷರಾದ ಶ್ರೀಧರ್ ಹೆಚ್ರವರು ಸ್ವಾಗತಿಸಿ ಒಂದು ವರ್ಷದ ಕಾರ್ಯಕ್ಕೆ ಸಹಕರಿಸಿದವರೆಲ್ಲರನ್ನು ಸ್ಮರಿಸಿ ಅಭಿನಂದಿಸಿದರು.
ಈ ಶುಭ ಸಂದರ್ಭದಲ್ಲಿ ರೋಟರಿ ಸೇವಾಕಾರ್ಯಕ್ಕೆ ಸಹಕಾರಿಯಾಗಿ ಮಾಜಿ ಅಧ್ಯಕ್ಷರು ಶ್ರೀ ಗಣೇಶ್ ನಾಯಕ್ ಮನೆಕಟ್ಟುವ ಬಡ ಕುಟುಂಬಕ್ಕೆ ರೂ.3 ಲಕ್ಷದ ಮೊತ್ತ ನೀಡಿದರು ಹಾಗೂ ಶೋಭಾ ನಾಗಸಂಪಿಗೆ ರವರು 4 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಸಹಕಾರವಿತ್ತರು.
ಶ್ರೀಮತಿ ಪಾವನಗಂಗಾ ರವರು ಪ್ರಾರ್ಥಿಸಿ, ನೂತನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ವಂದಿಸಿದರು, ನಿತ್ಯಾನಂದ ನಾಯಕ್ ನರಸಿಂಗೆ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ : ಉದ್ಯಾವರ ಪದವಿ ಪೂರ್ವ ಕಾಲೇಜು ಇದರ ಪ್ರತಿಭಾ ಪುರಸ್ಕಾರ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಾಂಕೇತಿಕವಾಗಿ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಗ್ರಾಮ ಪಂಚಾಯತ್ ಸದಸ್ಯರಾದ ಜಿತೇಂದ್ರ ಶೆಟ್ಟಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಉದ್ಯಾವರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಯು. ಅಜಿತ್ ಕುಮಾರ್ ಶಣೈ, ಉದ್ಯಾವರ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾದ ಶಿವರಾಜ್, ಪ್ರಾಂಶುಪಾಲರಾದ ಕೃಷ್ಣ ಮೂರ್ತಿ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಆಶಲತಾ ಕುಮಾರಿ, ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಗುರುಪ್ರಸಾದ್ ಉಪಸ್ಥಿತರಿದ್ದರು.
ಕಾರ್ಕಳ : ಯಕ್ಷ ದ್ರುವ ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಇದರ ವತಿಯಿಂದ ಪಳ್ಳಿ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಜೂ. 19ರಂದು ನಡೆಯಿತು.
ಬಹುಮೇಳಗಳ ವ್ಯವಸ್ಥಾಪಕ ಪಳ್ಳಿ ಕಿಶನ್ ಹೆಗ್ಡೆ ದೀಪ ಬೆಳಗಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಗದೀಶ್ ಹೆಗ್ಡೆ ಪಳ್ಳಿ ಪೇಜಕೊಡಂಗೆ, ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಅಂಚನ್, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪ್ರಭಾಕರ್ ಬಂಗೇರ, ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಅಧ್ಯಕ್ಷ ಸುನಿಲ್ ಬಿ. ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಪ್ರಭು, ಮನೋಹರ್ ಶೆಟ್ಟಿ, ರಘುನಾಥ್ ಶೆಟ್ಟಿ, ಜಯರಾಮ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕಾಂತೆಶ್ ಶೆಟ್ಟಿ, ವಿಜಯ ಎಂ. ಶೆಟ್ಟಿ ಮತ್ತು ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ ಹಾಗೂ ಯಕ್ಷ ಗುರು ಮಹಾವೀರ್ ಪಾಂಡಿ ಉಪಸ್ಥಿತರಿದ್ದರು.