ಕೋಟ : ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಸರದಲ್ಲಿ ಹೆಜ್ಜೇನು ದಾಳಿಯಿಂದ ಇರ್ವರ ಸ್ಥಿತಿ ಗಂಭೀರವಾಗಿದೆ.
ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷೆ ಸರಸ್ವತಿ ಹಾಗೂ ಪುತ್ರಿ ಸೌಜನ್ಯ ಮೇಲೆ ಗುರುವಾರ ಹೆಜ್ಜೇನು ದಾಳಿ ಮಾಡಿದೆ.
ಇವರು ಮೂಲ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಹೆಜ್ಜೇನು ಪೂರ್ಣಪ್ರಮಾಣದಲ್ಲಿ ದಾಳಿಗೈದಿದ್ದು ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರ ಸ್ಥಳೀಯರು ಧಾವಿಸಿ ಜೀವದ ಹಂಗು ತೋರೆದು ಜೇನು ದಾಳಿಗೊಳಗಾದವರ ಮೈಮೇಲೆ ಗೋಣಿಚೀಲ ಹಾಗೂ ಬಟ್ಟೆ ಹಾಕಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.
ಮುಂಜಾನೆ ಕೋಟತಟ್ಟು ತುಂಗರ ಮನೆ ಸಮೀಪವಿರುವ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ತಾಯಿ ಸರಸ್ವತಿ ಹಾಗೂ ಪುತ್ರಿ ಸೌಜನ್ಯ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕಿರುಚುತ್ತಾ ಓಡೋಡಿ ಬಂದ ಈರ್ವರನ್ನು ಕಂಡು ಸ್ಥಳೀಯರೇ ಆಂತಕಕ್ಕೆ ಒಳಗಾದರು. ಈ ವೇಳೆ ಅದೇ ದಾರಿಯಲ್ಲಿ ಸಂಚರಿಸಿಕೊಂಡು ಬರುತ್ತಿದ್ದ ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ತಮ್ಮ ಜೀವ ಲೆಕ್ಕಿಸದೆ ಅವರ ಸಹಾಯಕ್ಕೆ ನಿಂತಿದ್ದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಕೋಟದ ನಾಗರಾಜ್ ಪುತ್ರನ್ ಜೀವನ್ ಮಿತ್ರ ಆಂಬ್ಯುಲೇನ್ಸ್ ಮೂಲಕ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ
ಸಾವಿರಾರು ಜೇನುಗಳು ಆ ಪರಿಸರದ ಮರದ ಗೊಂಬೆಯಲ್ಲಿ ಗೂಡು ಕಟ್ಟಿಕೊಂಡದ್ದ ಜೇನುಗಳು ಏಕಾಏಕಿ ಪಾರ್ಥನೆ ಸಲ್ಲಿಸುವವರ ಮೇಲೆ ದಾಳಿ ಮಾಡಿದೆ. ಮೈತುಂಬ ಕಂಚಿಕೊಂಡ ಜೇನುಗಳನ್ನು ತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು. ರಕ್ಷಣೆಗೆ ನಿಂತ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮೇಲೆ ಸಾಕಷ್ಟು ಜೇನುಗಳು ದಾಳಿ ಮಾಡಿವೆ.