Saturday, January 18, 2025
Banner
Banner
Banner
Home » ಅಗ್ನಿಶಾಮಕ ಠಾಣೆಯ ಸ್ವಂತ ಕಟ್ಟಡ ಕಾಮಗಾರಿ ಪೂರ್ಣ.. ಶೀಘ್ರವೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ : ವಿನಾಯಕ ಕಲ್ಗುಟ್ಕರ್‌

ಅಗ್ನಿಶಾಮಕ ಠಾಣೆಯ ಸ್ವಂತ ಕಟ್ಟಡ ಕಾಮಗಾರಿ ಪೂರ್ಣ.. ಶೀಘ್ರವೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ : ವಿನಾಯಕ ಕಲ್ಗುಟ್ಕರ್‌

by NewsDesk

ಬೈಂದೂರು : ಅಗ್ನಿಶಾಮಕ ಠಾಣೆಯ ಸ್ವಂತ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಮೇಲಧಿಕಾರಿಗಳ ಆದೇಶದ ಬಳಿಕ ಶೀಘ್ರವೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ವಿನಾಯಕ ಕಲ್ಗುಟ್ಕರ್‌ ಹೇಳಿದರು.

ತಾಲೂಕು ಕೇಂದ್ರವಾದ ಬೈಂದೂರಿಗೆ ಅಗ್ನಿಶಾಮಕ ಠಾಣೆ ಕಟ್ಟಡ ಬೇಕು ಎಂಬ ಬೇಡಿಕೆ ಈಡೇರಿದೆ. ಸರಕಾರದಿಂದ ಮಂಜೂರಾದ ಮೂರು ಕೋಟಿ ರೂ. ಅನುದಾನದಲ್ಲಿ ಯೋಜನಾ ನಗರದ ಒಂದು ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲಿದೆ.

ಬೈಂದೂರಿನಲ್ಲಿ ಅಗ್ನಿ ಶಾಮಕ ಠಾಣೆ ಕಾರ್ಯಾರಂಭ ಮಾಡಿ ನಾಲ್ಕು ವರ್ಷವಾಗಿದೆ. ಆದರೆ, ಸ್ವಂತ ಕಟ್ಟಡ ಇರಲಿಲ್ಲ. ಈಗ ಕರ್ನಾಟಕ ಪೋಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನೂತನ ಕಟ್ಟಡ ನಿರ್ಮಿಸಿದೆ. ಈ ಕಟ್ಟಡದಲ್ಲಿ ಎರಡು ವಾಹನಗಳ ನಿಲುಗಡೆಗೆ ಅವಕಾಶವಿದೆ. ಜತೆಗೆ ವಿಶ್ರಾಂತಿ ಕೊಠಡಿ, ನಿಸ್ತಂತು ಕೊಠಡಿ, ಸಂಗ್ರಹಣಾ ಕೊಠಡಿ ಹಾಗೂ ಠಾಣಾಧಿಕಾರಿ ಕಚೇರಿಗಳನ್ನು ಒಳಗೊಂಡಿದೆ. ಪ್ರಸ್ತುತ ಒಂದೇ ವಾಹನವಿದ್ದು, ಇನ್ನೊಂದು ವಾಹನದ ಬೇಡಿಕೆಯಿದೆ.

ಆರಂಭಿಸಲು ಹತ್ತಾರು ವರ್ಷಗಳಿಂದ ಹೋರಾಟ ನಡೆದಿದೆ. 2015-16ರ ಸುಮಾರಿಗೆ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಯೋಜನಾ ನಗರದ ಬಳಿ ಸುಮಾರು ಒಂದು ಏಕ್ರೆ ಜಾಗ ಗುರುತಿಸಿ, ಸರ್ಕಾರದಿಂದ ಮಂಜೂರಾತಿ ಒದಗಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಸರ್ಕಾರದ ಅನುಮೋದನೆ ವಿಳಂಬವಾಯಿತು.

ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ
2020ರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪ್ರಯತ್ನದಿಂದ ಬೈoದೂರಿಗೆ ಅಗ್ನಿಶಾಮಕ ಠಾಣೆ ಮಂಜೂರಾಗಿ ಕಳೆದ ನಾಲ್ಕು ವರ್ಷದಿಂದ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದಕ್ಕಿಂತ ಮೊದಲು ಬೈಂದೂರಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೆ 40-50 ಕಿ.ಮೀ ದೂರದ ಕುಂದಾಪುರ ಅಥವಾ ಭಟ್ಕಳದಿಂದ ಅಗ್ನಿಶಾಮಕದಳದವರು ಆಗಮಿಸಬೇಕಾಗಿತ್ತು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb