ಉಡುಪಿ : ಉಡುಪಿ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಮೇಲ್ಸೇತುವೆಗೆ ಮೇಲ್ಛಾವಣಿ ವ್ಯವಸ್ಥೆಯಿಲ್ಲದೆ, ಪ್ರಯಾಣಿಕರು ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಅಸಹಾಯಕ ಪರಿಸ್ಥಿತಿ ಎದುರಾಗಿದೆ.

ಇತ್ತೀಚಿನ ದಿನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಇಂದ್ರಾಳಿ ರೈಲು ನಿಲ್ದಾಣದ ಮೇಲ್ಸೇತುವೆಯನ್ನು ಸಂಚರಿಸಲು ಬಳಸುತ್ತಾರೆ. ಸೇತುವೆಗೆ ಮಾಡಿಲ್ಲದೆ ಸುಡು ಬಿಸಿಲಿನಲ್ಲಿ ನಡೆದು ಸಾಗಬೇಕಾಗಿದೆ. ಮಳೆಗಾಲದಲ್ಲಿ ನೆನೆದು ಪೂರ್ಣ ಒದ್ದೆಯಾಗ ಬೇಕಾಗುತ್ತದೆ. ಒಮ್ಮೊಮ್ಮೆ ರೈಲು ನಿಲ್ದಾಣದಲ್ಲಿ ರೈಲಿನ ನಿಲುಗಡೆ ವ್ಯತ್ಯಾಸ ಕಂಡು ಬಂದಾಗ, ನಿಲ್ದಾಣ ನಿಯಂತ್ರಕರ ಸೂಚನೆ ಮೆರೆಗೆ ಪ್ಲಾಟ್ ಫಾರ್ಮ್ ಬದಲಿಸ ಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. ಆಯಾಯ ಕಾಲಮಾನದಲ್ಲಿ ಪ್ರಕಟವಾಗುವ ಮಳೆ, ಬಿಸಿಲಿನಲ್ಲಿಯೇ ಪ್ರಯಾಣಿಕರು ಸೇತುವೆಯಲ್ಲಿ ಸಾಗಬೇಕಾಗುತ್ತದೆ. ಚಿಕ್ಕ ಮಕ್ಕಳನ್ನು ಹೊತ್ತು ಸಾಗುವ ಮಾತೆಯರ, ಮತ್ತು ಕುಂಟುತ್ತ ನಡೆದು ಸಾಗುವ ಹಿರಿಯ ನಾಗರಿಕರ ಪರಿಸ್ಥಿತಿ ಅಯೋಮಯ ಅನಿಸುತ್ತಿದೆ.
ಜಿಲ್ಲಾಡಳಿತ, ಶಾಸಕರು, ಸಂಸದರು, ರೈಲ್ವೆ ಅಧಿಕಾರಿಗಳು ಸಮಸ್ಯೆಯನ್ನು ಗಮನಿಸಿ, ಮೇಲ್ಸೇತುವೆಗೆ ತುರ್ತಾಗಿ ಮಾಡಿನ ವ್ಯವಸ್ಥೆಗೊಳಿಸುವಂತೆ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಕೆ. ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.