Udupi
ಮಲ್ಪೆ ಅಭಿವೃದ್ಧಿ ಸಮಿತಿ ಬರ್ಖಾಸ್ತು – ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ
ಉಡುಪಿ : ಕಳೆದ 20 ವರ್ಷಗಳಿಂದ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರೀಸ್ ದ್ವೀಪದ ನಿರ್ವಹಣೆಯನ್ನು ನಿರ್ವಹಿಸುತ್ತಾ ಬಂದಿರುವ ಮಲ್ಪೆ ಅಭಿವೃದ್ಧಿ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ. ಅದರ ಅಧಿಕಾರ ಹಾಗೂ ಅದು ನಿರ್ವಹಿಸುತ್ತಿರುವ ಎಲ್ಲಾ ಕಾರ್ಯಗಳನ್ನು ಮತ್ತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಇದನ್ನು ಪ್ರಕಟಿಸಿದರು.ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
20 ವರ್ಷಗಳ ಹಿಂದೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಮಲ್ಪೆ ಬೀಚ್ ಹಾಗೂ ಸೈಂಟ್ ಮೇರೀಸ್ ದ್ವೀಪದ ನಿರ್ವಹಣೆಯನ್ನು ಮಲ್ಪೆ ಅಭಿವೃದ್ಧಿ ಸಮಿತಿಗೆ ನೀಡಿತ್ತು. ಆದರೆ ಪ್ರಸ್ತುತ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಸಮಿತಿಯ ಕಾರ್ಯ ವ್ಯಾಪ್ತಿಗೆ ಇದು ಅಡೆತಡೆಯಾಗುತ್ತಿರುವುದರಿಂದ ಹಾಗೂ ಕಾನೂನು ವ್ಯಾಪ್ತಿಯಲ್ಲೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ನಿರ್ವಹಣೆಯ ಅಧಿಕಾರವನ್ನು ಹಿಂದಕ್ಕೆ ಪಡೆದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಮರಳಿ ನೀಡಲಾಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಸಿಎನ್ಜಿ ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಸಭೆ : ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಲು ಅದಾನಿ ಸಂಸ್ಥೆಗೆ ಕೋಟ ಸೂಚನೆ
ಉಡುಪಿ : ಅದಾನಿ ಮತ್ತು ಗೇಲ್ ಕಂಪೆನಿಗಳು ತಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು, ಅದಾನಿ ಕಂಪೆನಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಜಿಲ್ಲೆಯಲ್ಲಿ ಸಿಎನ್ಜಿ ಅನಿಲದ ಪೂರೈಕೆಗೆ ಬೇಕಾದ ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ಸೂಚನೆ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಿಎನ್ಜಿ ಅನಿಲದ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ, ವಿತರಕ ಸಂಸ್ಥೆಗಳು ಹಾಗೂ ಜಿಲ್ಲೆಯ ಸಿಎನ್ಜಿ ಗ್ಯಾಸ್ ಬಂಕ್ಗಳ ಮಾಲಕರ ಸಭೆಯಲ್ಲಿ ಅವರು ಚರ್ಚೆಯ ಬಳಿಕ ಈ ಸೂಚನೆಗಳನ್ನು ವಿತರಕ ಅದಾನಿ ಹಾಗೂ ಗೇಲ್ ಕಂಪೆನಿಗಳ ಅಧಿಕಾರಿಗಳಿಗೆ ನೀಡಿದರು.
ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಸಂಸದ ಕೋಟ, ಈ ಹಿಂದೆ ಕೂಡ ಹಲವು ಭಾರಿ ಸಮಸ್ಯೆಗಳು ಉಂಟಾಗಿದ್ದವು. ಅದು ಇನ್ನೂ ಕೂಡ ಮುಂದು ವರಿಯುತ್ತಿದೆ. ಇದಕ್ಕೆ ಕಾರಣಗಳೇನು ಎಂದು ವಿತರಕ ಕಂಪೆನಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅದಾನಿ ಪವರ್ಸ್ ಕಂಪೆನಿಯ ಕಿಶೋರ್ ಕುಮಾರ್, ಮಂಗಳೂರಿನ ಪಣಂಬೂರಿನಲ್ಲಿ ಕೆಐಓಸಿಯ ಸ್ಥಳದಲ್ಲಿ ಪೈಪ್ಲೈನ್ ಹಾದು ಹೋಗಬೇಕಿದೆ. ಇದಕ್ಕೆ ಅವರು ಅನುಮತಿ ನೀಡಲು ನಿರಾಕರಿಸುತ್ತಿರು ವುದರಿಂದ ಪೈಪ್ ಲೈನ್ ಮೂಲಕ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ವಾಹನಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ಇಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ವಿಳಂಬವಾಗುತ್ತಿದೆ ಎಂದರು.

ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ : ಪಲ್ಟಿಯಾದ ವಾಹನ, ಆರೋಪಿ ಚಾಲಕ ಪರಾರಿ
ಬೈಂದೂರು : ಮೀನು ಸಾಗಿಸುವ ಇನ್ಸುಲೇಟರ್ ವಾಹನವೊಂದು ಪಲ್ಟಿಯಾಗಿ, ಅದರ ಒಳಗೆ ಮೀನು ಬಾಕ್ಸ್ಗಳ ಜೊತೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಘಟನೆ ಶಿರೂರು ಕರಿಕಟ್ಟೆ ಬಳಿ ಪತ್ತೆಯಾಗಿದೆ. ವಾಹನದಲ್ಲಿ ಮೀನಿನ ಬದಲು ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ರಾತ್ರಿ ಹೊತ್ತು ಮಿನಿ ಇನ್ಸುಲೇಟರ್ ವಾಹನದೊಳಗೆ ಮೀನು ತುಂಬಿರುವ ಟ್ರೇಗಳನ್ನು ಇರಿಸಿಕೊಂಡು ಮದ್ಯದಲ್ಲಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್ ಹತ್ತಿರ ಪಲ್ಟಿಯಾಗಿದೆ. ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿ ಕಡಲತೀರದ 26.5 ಎಕರೆ ಜಾಗ ಪ್ರವಾಸೋದ್ಯಮ ಇಲಾಖೆಗೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಮಣಿಪಾಲ : ಕುಂದಾಪುರ ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ ಕೋಡಿ ಕಡಲ ತೀರದ ಸರ್ವೇ ನಂಬರ್ 310ರಲ್ಲಿ 26.50 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೋಡಿ ಕಡಲ ಕಿನಾರೆ ಪ್ರದೇಶವು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಡಾಲ್ಪಿನ್ಗಳು ಕಂಡುಬರುವ ಉಡುಪಿ ಜಿಲ್ಲೆಯ ಏಕೈಕ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದವರು ತಿಳಿಸಿದರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಹಾಗೂ ಅನುಕೂಲತೆಗಳನ್ನು ಹೆಚ್ಚಿಸುವ ಮೂಲಕ ಸ್ವಾಗತಾರ್ಹ ವಾತಾವರಣ ವನ್ನು ಕಲ್ಪಿಸಬೇಕು. ಈ ಮೂಲಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚಿಸಬೇಕು ಎಂದವರು ಸಲಹೆ ನೀಡಿದರು.
ಜಿಲ್ಲೆಗೆ ಕಳೆದ ಸಾಲಿನಲ್ಲಿ 4 ಕೋಟಿಗೂ ಹೆಚ್ಚು ಪ್ರವಾಸಿಗರು ಬಂದು ಹೋಗಿದ್ದಾರೆ. ಈ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೊರಗಿನಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರವಾಸಿ ತಾಣಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.
ಉಡುಪಿ : ಅಪೌಷ್ಠಿಕ ಮಕ್ಕಳ ಕುರಿತಂತೆ ತಾಯಂದಿರು ವಿಶೇಷ ಮುತುವರ್ಜಿ ವಹಿಸಬೇಕು. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇದ್ದಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ಕಂಡುಬರುವ ಸಾಧ್ಯತೆ ಇದ್ದು, ತಾಯಂದಿರು ಪೌಷ್ಠಿಕತೆ ಕುರಿತಂತೆ ವಿಶೇಷ ಗಮನ ನೀಡಿ ಮಗುವಿಗೆ ಸರಿಯಾದ ರೀತಿಯಲ್ಲಿ ಎದೆಹಾಲು ಹಾಗೂ ಆರೋಗ್ಯಯುತ ಆಹಾರವನ್ನು ನೀಡುವುದರಿಂದ ಅಪೌಷ್ಠಿಕತೆಯನ್ನು ನಿವಾರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಶುಕ್ರವಾರ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಗೂ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನವಜಾತ ಶಿಶುವಿನ ಅವಧಿಯು ಮಕ್ಕಳ ಜೀವನದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಮಗುವಿಗೆ ಎದೆಹಾಲು, ಪೌಷ್ಠಿಕ ಆಹಾರ, ಒಂದು ವರ್ಷದ ಅವಧಿಯೊಳಗೆ ನೀಡುವುದರೊಂದಿಗೆ ಉತ್ತಮವಾಗಿ ಆರೈಕೆ ಮಾಡಿದಲ್ಲಿ ಮಗುವಿನ ಭವಿಷ್ಯದ ಬೆಳವಣಿಗೆ ಸಹ ಉತ್ತಮವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಮಗು ಜನಿಸಿದ ಆರಂಭಿಕ ಹಂತದಲ್ಲಿ ಹೆಚ್ಚಿನ ಕಾಳಜಿ ಅತ್ಯವಶ್ಯಕವಾಗಿದ್ದು, ಹುಟ್ಟಿನಿಂದ ಮಕ್ಕಳಿಗೆ ನೀಡಬೇಕಾದ ಲಸಿಕೆಯ ಕುರಿತು ಯಾವುದೇ ನಿರ್ಲಕ್ಷ್ಯ ತೋರದೆ ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ನೀಡುವುದರ ಜೊತೆಗೆ ಮನೆಯ ವಾತಾವರಣ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅಬಕಾರಿ ಹಗರಣದ ಜೊತೆಗೆ ಮುಖ್ಯಮಂತ್ರಿ ಅವರ ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ? : ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನೆ
ಉಡುಪಿ : ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತದ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೆತ್ತಲೂ ನೈತಿಕತೆ ಇಲ್ಲದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ‘ಮನೆ ಮನೆಗೆ ಬಾರ್ ಭಾಗ್ಯವೇ’ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನಿಸಿದ್ದಾರೆ.
ಹಗರಣಗಳ ಸರಮಾಲೆಯನ್ನೇ ಧರಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ 700 ಕೋಟಿ ರೂಪಾಯಿ ಮೌಲ್ಯದ ಅಬಕಾರಿ ಹಗರಣದ ಮಧ್ಯೆಯೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂಗ್ರೆಸ್ ಮುಖಂಡ, ಬೋಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬೋಳ ಸೊಸೈಟಿಯ ನಿರ್ದೇಶಕ ಹಾಗೂ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಪರಮಾಪ್ತ ಎನಿಸಿಕೊಂಡಿರುವ ಬೋಳದ ಅವಿನಾಶ್ ಮಲ್ಲಿ ಮನೆಯಲ್ಲಿ ರೂ.70 ಲಕ್ಷಕ್ಕೂ ಅಧಿಕ ಮೌಲ್ಯದ 200ಕ್ಕೂ ಅಧಿಕ ವಿಸ್ಕಿ ಬಾಟಲಿಗಳ ಸಂಗ್ರಹ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅಬಕಾರಿ ಉಪ ಆಯುಕ್ತೆ ಬಿಂದು ಅವರ ನೇತೃತ್ವದಲ್ಲಿ ಅವಿನಾಶ್ ಮಲ್ಲಿ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪ್ರಕರಣ ರಾಜ್ಯ ಕಾಂಗ್ರೆಸ್ ಸರಕಾರದ ಸಾಚಾತನದ ಮುಖವಾಡವನ್ನು ಕಳಚಿದೆ.
ಅಬಕಾರಿ ಹಗರಣ ಸುಳ್ಳು ಎಂದು ಬೊಗಳೆ ಬಿಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಒಬ್ಬ ವ್ಯಕ್ತಿಯ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಮದ್ಯ ಬಾಟಲಿಗಳು ಕಳ್ಳಸಂಗ್ರಹಣೆಯಾಗಿದೆ ಎಂದರೆ ಅರ್ಥವೇನು? ಈ ರೀತಿ ದಾಸ್ತಾನು ಮಾಡುವುದಕ್ಕೆ ನೀವು ಅನಧಿಕೃತ ಪರವಾನಿಗೆ ನೀಡಿದ್ದೀರಾ? ಇಂತಹ ‘ದೋ ನಂಬರ್’ ಮದ್ಯದ ವಹಿವಾಟು ಎಷ್ಟು ಕೋಟಿ ರೂಪಾಯಿ ಮೊತ್ತದ ಹಗರಣ? ಇದು ಅನ್ಯ ರಾಜ್ಯದ ಚುನಾವಣೆಗೋಸ್ಕರವೋ ಅಥವಾ ತಮ್ಮದೇ ಪಕ್ಷದ ಶಾಸಕರ ಖರೀದಿಗೆ ನಡೆಸುತ್ತಿರುವ ಅಕ್ರಮ ಚಟುವಟಿಕೆಯೋ? ಕಾಂಗ್ರೆಸ್ ಸರಕಾರದಲ್ಲಿ ಮನೆ ಮನೆಗೆ ‘ಬಾರ್ ಭಾಗ್ಯ’ ಕೊಡುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಕರಣದ ಆರೋಪಿ ತಲೆ ಮರೆಸಿಕೊಂಡಿದ್ದು, ಕಾಂಗ್ರೆಸ್ ಮುಖಂಡರಿಂದ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಈಗಾಗಲೇ ಮುಡಾ ಹಗರಣ, ವಾಲ್ಮೀಕಿ ನಿಗಮದ ಕೋಟ್ಯಾಂತರ ರೂಪಾಯಿ ದುರ್ಬಳಕೆ ಪ್ರಕರಣದ ಸಹಿತ ವಿವಿಧ ಇಲಾಖೆಗಳಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಜೊತೆಗೆ ಮಠ ಮಂದಿರ, ದೇವಸ್ಥಾನ ಮತ್ತು ರೈತರ ಭೂ ಕಬಳಿಕೆ ಹುನ್ನಾರದ ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಪ್ರಕರಣಗಳಿಂದ ರೋಸಿ ಹೋಗಿರುವ ಜನತೆಗೆ ರಾಜ್ಯ ಕಾಂಗ್ರೆಸ್ ಸರಕಾರವನ್ನು ತೊಲಗಿಸಲು ಸರ್ವ ಸನ್ನದ್ಧರಾಗಿದ್ದು, ಪೊಲೀಸ್ ಇಲಾಖೆ ಸದ್ರಿ ಪ್ರಕರಣದ ಜಾಡು ಹಿಡಿದು ಕೂಲಂಕುಶ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಬೀಚ್ನಲ್ಲಿ ಝಂಬಾ ಸೆಷನ್ ಜಾಗೃತಿ
ಮಣಿಪಾಲ : ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಎಂಡೋಕ್ರೈನಾಲಜಿ (ಅಂತಃಸ್ರಾವಶಾಸ್ತ್ರ) ವಿಭಾಗದ ಸಹಯೋಗದೊಂದಿಗೆ ಮಲ್ಪೆ ಬೀಚ್ನಲ್ಲಿ ಝುಂಬಾ ಸೆಷನ್ ನಡೆಸಲಾಯಿತು.
ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಮಾತನಾಡಿ, ಝುಂಬಾ ಚಟುವಟಿಕೆಯಂತಹ ವ್ಯಾಯಾಮವು ಮಧುಮೇಹ ತಡೆಗಟ್ಟುವಿಕೆ ಮಾಡಲು ಜನರಿಗೆ ಸಹಾಯ ಮಾಡಲಿದೆ. ದೈನಂದಿನ ಚಟುವಟಿಕೆಗೂ ಇದು ಅತ್ಯಗತ್ಯವಾಗಿದೆ.
ಆರೋಗ್ಯಕರ, ಮಧುಮೇಹ-ಮುಕ್ತ ಭವಿಷ್ಯಕ್ಕೆ ಇದೊಂದು ಮಹತ್ತರ ಹೆಜ್ಜೆಯಾಗಿದೆ ಎಂದರು. ಎಂಡೋಕ್ರೈನಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ| ಸಹನಾ ಶೆಟ್ಟಿ ಮಾತನಾಡಿ, ಭಾರತದಲ್ಲಿ ಮಧುಮೇಹದ ಪ್ರಮಾಣ ಶೇ.11ರಷ್ಟು ಹೆಚ್ಚಾಗುತ್ತಿದೆ.ಮಧುಮೇಹವು ಹೃದ್ರೋಗಗಳು, ಮೂತ್ರಪಿಂಡ ವೈಫಲ್ಯ, ಪಾದದ ಹುಣ್ಣು ಮತ್ತು ವಯಸ್ಕರಲ್ಲಿ ದೃಷ್ಟಿ ದೋಷಕ್ಕೆ ಕಾರಣವಾಗಲಿದೆ. ಇದು ಮಾನಸಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಆರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆ ಜತೆಗೆ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಮಧುಮೇಹ ತಡೆಗಟ್ಟಬಹುದು ಎಂದು ಹೇಳಿದರು. ಜಾಗೃತಿ ಕಾರ್ಯಕ್ರಮದಲ್ಲಿ ನೂರಾರು ಯುವಕ ಯುವತಿಯರು ಭಾಗವಹಿಸಿದ್ದರು.
‘ಕೋವಿಡ್-19 ಬೋಧನಾ ಆಸ್ಪತ್ರೆಯಲ್ಲಿ ಬಿಕ್ಕಟ್ಟನ್ನು ನಿರ್ವಹಿಸುವ ಒಳನೋಟಗಳು’ ಬಿಡುಗಡೆ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ (ಎಂಎಹೆಚ್ಇ) ಘಟಕವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ (ಎಂಯುಪಿ) ಕಸ್ತೂರ್ಬಾ ಆಸ್ಪತ್ರೆಗಳ ಕಾರ್ಯಾಚರಣೆಗಳ ಸಹಾಯಕ ನಿರ್ದೇಶಕ ಜಿಬು ಥಾಮಸ್ ಬರೆದ ಕೋವಿಡ್-19 ಆಸ್ಪತ್ರೆಯಲ್ಲಿ ಬಿಕ್ಕಟ್ಟನ್ನು ನಿರ್ವಹಿಸುವ ಒಳನೋಟಗಳನ್ನು ಬಿಡುಗಡೆ ಮಾಡಿದೆ. ಈ ಪುಸ್ತಕವು ಕೋವಿಡ್-19 ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಆಸ್ಪತ್ರೆಯು ಜಾರಿಗೆ ತಂದ ಸವಾಲುಗಳು ಮತ್ತು ಹೊಂದಾಣಿಕೆಯ ಕಾರ್ಯತಂತ್ರಗಳ ಸಮಗ್ರ ವಿವರಣೆಯನ್ನು ಒದಗಿಸುತ್ತದೆ, ಇದು ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ನಡೆಸುವಲ್ಲಿ ಆರೋಗ್ಯ ನಿರ್ವಾಹಕರಿಗೆ ಅಮೂಲ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
ಎಂ. ಎ. ಎಚ್. ಇ. ಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶರು ಈ ಪುಸ್ತಕವನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದರು, ಕಸ್ತೂರ್ಬಾ ಆಸ್ಪತ್ರೆಯು ಹೇಗೆ ಮೀಸಲಾದ ಕೋವಿಡ್-19 ಚಿಕಿತ್ಸಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದರ ದಾಖಲೆಯಾಗಿ ಅದರ ಮಹತ್ವವನ್ನು ಒತ್ತಿ ಹೇಳಿದರು, ಮೊದಲ ಪ್ರಕರಣದಿಂದ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮಾದರಿ ಸೌಲಭ್ಯವಾಗಿದೆ. “ಈ ಪುಸ್ತಕವು ತೃತೀಯ ಆಸ್ಪತ್ರೆಯನ್ನು ಯಶಸ್ವಿ ಕೋವಿಡ್-19 ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯಾಣವನ್ನು ನಿರೂಪಿಸುವ ಪ್ರಮುಖ ಸಂಪನ್ಮೂಲವಾಗಿದೆ” ಎಂದು ಅವರು ಹೇಳಿದರು. ಇದು ಭವಿಷ್ಯದ ಸಾಂಕ್ರಾಮಿಕ ರೋಗಗಳ ನಿರ್ವಹಣೆಯಲ್ಲಿ ಆಸ್ಪತ್ರೆಗಳಿಗೆ ಉಪಯುಕ್ತ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಮಾಹೆಯ ಸಹಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಾಂಕ್ರಾಮಿಕ ರೋಗದ ಆಳವಾದ ಪರಿಣಾಮವನ್ನು ಪ್ರತಿಬಿಂಬಿಸಿದರು ಮತ್ತು ಆರೋಗ್ಯ ವೃತ್ತಿಪರರು ಮತ್ತು ನಿರ್ವಾಹಕರು ತೋರಿಸಿದ ಸಮರ್ಪಣೆಯನ್ನು ಶ್ಲಾಘಿಸಿದರು. ಈ ಪುಸ್ತಕವು ಅಭೂತಪೂರ್ವ ಸಂದರ್ಭಗಳಲ್ಲಿ ಸಂಭವಿಸಿದ ಪ್ರಯತ್ನಗಳು ಮತ್ತು ನಾವೀನ್ಯತೆಗಳ ನಿರ್ಣಾಯಕ ದಾಖಲೆಯಾಗಿದ್ದು, ಭವಿಷ್ಯದ ಬಿಕ್ಕಟ್ಟಿನ ನಿರ್ವಹಣೆಗೆ ಪಾಠ ಮತ್ತು ಸ್ಫೂರ್ತಿ ಎರಡನ್ನೂ ನೀಡುತ್ತದೆ ಎಂದು ಅವರು ಬಣ್ಣಿಸಿದರು.
ಲೇಖಕ ಶ್ರೀ ಜಿಬು ಥಾಮಸ್ ಅವರು ಮಾತನಾಡಿ ಇದು ತಮ್ಮ ಎರಡನೇ ಪುಸ್ತಕವಾಗಿದ್ದು, ಸಾಂಕ್ರಾಮಿಕ ಸಮಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮತ್ತು ಟಿಎಂಎ ಪೈ ಆಸ್ಪತ್ರೆ ಮಾಡಿದ ಅನುಭವಗಳು, ಸವಾಲುಗಳು ಮತ್ತು ನೀತಿ ರೂಪಾಂತರಗಳ ಅಧಿಕೃತ ದಾಖಲೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದಾರೆ ಎಂದರು.
ಅತಿಥಿಗಳನ್ನು ಸ್ವಾಗತಿಸಿದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ನ (ಎಂಯುಪಿ) ಮುಖ್ಯ ಸಂಪಾದಕ (ಉಸ್ತುವಾರಿ) ಡಾ. ಶ್ರೀನಿವಾಸ ಆಚಾರ್ಯ ಅವರು ಎಂಯುಪಿಯ 294 ನೇ ಪ್ರಕಟಣೆಯನ್ನು ಬಿಡುಗಡೆ ಮಾಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಶೈಕ್ಷಣಿಕ ಪ್ರಕಟಣೆಗೆ ಮಾಹೆಯ ಬದ್ಧತೆಯಲ್ಲಿ ಬೇರೂರಿರುವ ಎಂ. ಯು. ಪಿ. ಯ 13 ವರ್ಷಗಳ ಪ್ರಯಾಣವನ್ನು ಅವರು ಎತ್ತಿ ತೋರಿಸಿದರು ಮತ್ತು ಹೊಸ ಪುಸ್ತಕವು ಐತಿಹಾಸಿಕ ದಾಖಲೆ ಮತ್ತು ಅಗತ್ಯ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ, ಸಾಂಕ್ರಾಮಿಕ ರೋಗದಿಂದ ನಿರ್ಣಾಯಕ ಪಾಠಗಳನ್ನು ಸೆರೆಹಿಡಿಯುತ್ತದೆ ಮತ್ತು ಮಾಹೆಯ ಆರೋಗ್ಯ ತಂಡಗಳ ಸಹಯೋಗದ ಪ್ರಯತ್ನಗಳನ್ನು ಆಚರಿಸುತ್ತದೆ ಎಂದು ಒತ್ತಿ ಹೇಳಿದರು.
ಶರತ್ಕುಮಾರ್ ರಾವ್, ಆರೋಗ್ಯ ವಿಜ್ಞಾನಗಳ ಉಪಕುಲಪತಿ ಡಾ | ನಾರಾಯಣ ಸಭಾಹಿತ್, ರಿಜಿಸ್ಟ್ರಾರ್ ಡಾ | ಪಿ. ಗಿರಿಧರ್ ಕಿನಿ, ಆಡಳಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ | ರವಿರಾಜಾ ಎನ್. ಎಸ್., ರೇಡಿಯೋ ಡಯಾಗ್ನೋಸಿಸ್ ಮತ್ತು ಇಮೇಜಿಂಗ್ ವಿಭಾಗದ ಪ್ರಾಧ್ಯಾಪಕ ಡಾ | ಆನಂದ್ ವೇಣುಗೋಪಾಲ, ವೈದ್ಯಕೀಯ ಅಧೀಕ್ಷಕ ಮತ್ತು ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ | ಅವಿನಾಶ್ ಶೆಟ್ಟಿ, ಆಡಳಿತ ಸಲಹೆಗಾರ ಸಿ. ಜಿ. ಮುತ್ತಣ, ಮೂತ್ರಶಾಸ್ತ್ರ ವಿಭಾಗದ ಡೀನ್ ಮತ್ತು ಪ್ರಾಧ್ಯಾಪಕ ಡಾ | ಪದ್ಮರಾಜ್ ಹೆಗ್ಡೆ, ಸಮುದಾಯ ಔಷಧ ವಿಭಾಗದ ಡೀನ್ ಮತ್ತು ಪ್ರಾಧ್ಯಾಪಕ ಡಾ | ಬಿ. ಉನ್ನಿಕೃಷ್ಣನ್, ಪಿಎಆರ್ ಮತ್ತು ಸಂವಹನ ವಿಭಾಗದ ಉಪ ನಿರ್ದೇಶಕ ಶ್ರೀ ಸಚಿನ್ ಕಾರಂತ್, ಅಂಗರಚನಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ವಿಭಾಗ ಸಂಯೋಜಕ ಡಾ | ಬಿನ್ಸಿ ಎಂ ಜಾರ್ಜ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾಹೆ ಪ್ರಾಯೋಜಕತ್ವದಲ್ಲಿ ಯುವಕರಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿಸಲು ಇನ್ಸ್ಪೈರ್ ಜೂನಿಯರ್ 2024
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಹೆಚ್ಇ) ಶುಕ್ರವಾರ ಕೆಎಂಸಿ-ಗ್ರೀನ್ಸ್ ಮಣಿಪಾಲದಲ್ಲಿ “ಇನ್ಸ್ಪೈರ್ ಜೂನಿಯರ್ 2024” ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದು ಎಂಟರಿಂದ ಹನ್ನೆರಡು ತರಗತಿಗಳ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಬಗ್ಗೆ ಉತ್ಸಾಹವನ್ನು ಮೂಡಿಸುವ ಎರಡು ದಿನಗಳ ಕಾರ್ಯಕ್ರಮವಾಗಿದೆ. ನವೆಂಬರ್ 16 ರವರೆಗೆ ಮುಂದುವರಿಯುವ ಈ ಉಪಕ್ರಮವು ಯುವ ಮನಸ್ಸುಗಳಿಗೆ ವಿವಿಧ ವೈಜ್ಞಾನಿಕ ಕ್ಷೇತ್ರಗಳನ್ನು ಅನ್ವೇಷಿಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ, ಇದು ಉಡುಪಿ ಜಿಲ್ಲೆಯಾದ್ಯಂತ ಮತ್ತು ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ರೋಮಾಂಚಕ ಸಂಶೋಧನಾ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾಹೆಯ ಪ್ರೋ ಚಾನ್ಸಲರ್ ಡಾ ಎಚ್. ಎಸ್. ಬಲ್ಲಾಳ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಯುವಕರಲ್ಲಿ ಬೌದ್ಧಿಕ ಕುತೂಹಲವನ್ನು ಬೆಳೆಸುವ ಮಹತ್ವವನ್ನು ಒತ್ತಿ ಹೇಳಿದ ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್. ಎಸ್. ಬಲ್ಲಾಳ್ “ನಮ್ಮ ರಾಷ್ಟ್ರದ ಭವಿಷ್ಯವು ನಾವು ಇಂದು ಪೋಷಿಸುತ್ತಿರುವ ಬೌದ್ಧಿಕ ಬಂಡವಾಳದ ಮೇಲೆ ಅವಲಂಬಿತವಾಗಿದೆ. ಜೂನಿಯರ್ ಅನ್ನು ಪ್ರೇರೇಪಿಸುವುದು ಮುಂದಿನ ಪೀಳಿಗೆಗೆ ವಿಮರ್ಶಾತ್ಮಕವಾಗಿ ಯೋಚಿಸಲು, ಧೈರ್ಯದಿಂದ ಅನ್ವೇಷಿಸಲು ಮತ್ತು ವಿಜ್ಞಾನ ಜಗತ್ತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅಧಿಕಾರ ನೀಡುವ ಒಂದು ಹೆಜ್ಜೆಯಾಗಿದೆ” ಎಂದು ಹೇಳಿದರು.
ಮಾಹೆ ಪ್ರೋ ವೈಸ್ ಚಾನ್ಸಲರ್ ಶರತ್ ರಾವ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದ ಆರಂಭದಲ್ಲಿ ಆರೋಗ್ಯ ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಲು ಇನ್ಸ್ಪೈರ್ ಜೂನಿಯರ್ ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿ, ಆರೋಗ್ಯ ವಿಜ್ಞಾನದಲ್ಲಿ ವೃತ್ತಿಜೀವನದ ಪರಿಣಾಮಕಾರಿ ಸ್ವರೂಪದ ಬಗ್ಗೆ ಅವರಿಗೆ ಮೊದಲ ನೋಟವನ್ನು ನೀಡುತ್ತದೆ. “ನಾಳೆ ಇನ್ಸ್ಪೈರ್ ಜೂನಿಯರ್ನ ಎರಡನೇ ದಿನಕ್ಕೆ ಸೇರಲು ಪ್ರದೇಶದಾದ್ಯಂತದ ಎಲ್ಲಾ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ” ಎಂದು ಅವರು ಹೇಳಿದರು. ಮುಂಬರುವ ಅಧಿವೇಶನಗಳು ಇನ್ನೂ ಹೆಚ್ಚು ರೋಮಾಂಚಕಾರಿ ಅನುಭವಗಳು ಮತ್ತು ವಿಶಿಷ್ಟ ಒಳನೋಟಗಳನ್ನು ನೀಡುತ್ತವೆ, ಇದು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಆವಿಷ್ಕಾರದ ಜಗತ್ತಿನಲ್ಲಿ ಸಾಟಿಯಿಲ್ಲದ ನೋಟವನ್ನು ಒದಗಿಸುತ್ತದೆ “ಎಂದು ಹೇಳಿದರು.
ಮಾಹೆಯ ಮತ್ತೋರ್ವ ಪ್ರೋ ವೈಸ್ ಚಾನ್ಸಲರ್ ನಾರಾಯಣ ಸಭಾಹಿತ್ ಅವರು ತಂತ್ರಜ್ಞಾನ ಮತ್ತು ವಿಜ್ಞಾನ, ಕಾರ್ಯಕ್ರಮದ ಅಂತರಶಿಕ್ಷಣ ಗಮನವನ್ನು ಎತ್ತಿ ತೋರಿಸುತ್ತಾ, “ಅಂತರಶಿಕ್ಷಣ ಸಹಯೋಗ ಮತ್ತು ವೈಜ್ಞಾನಿಕ ವಿಚಾರಣೆ ನಾವೀನ್ಯತೆಯ ಮೂಲಾಧಾರಗಳಾಗಿವೆ. ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಗಡಿಗಳನ್ನು ಮೀರಿ ನೋಡಲು ಮತ್ತು ವಿಶ್ವದ ಸವಾಲುಗಳನ್ನು ಎದುರಿಸುವ ಹೊಸ ಮಾರ್ಗಗಳನ್ನು ಕಲ್ಪಿಸಿಕೊಳ್ಳಲು ಸ್ಫೂರ್ತಿ ಜೂನಿಯರ್ ಒಂದು ಅವಕಾಶವಾಗಿದೆ” ಎಂದು ಹೇಳಿದರು.
ಮಾಹೆಯ ಚೀಫ್ ಆಪರೇಟಿಂಗ್ ಆಫೀಸರ್ ರವಿರಾಜ ಎನ್ ಸೀತಾರಾಮ್ ಅವರು ವಿಶಾಲ ದೃಷ್ಟಿಕೋನವನ್ನು ಒತ್ತಿಹೇಳುತ್ತಾ, “ಎಲ್ಲಾ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸುಲಭವಾಗಿ ಮತ್ತು ಉತ್ತೇಜಕವಾಗಿಸುವುದು ನಮ್ಮ ಗುರಿಯಾಗಿದೆ. ಇನ್ಸ್ಪೈರ್ ಜೂನಿಯರ್ ಉಡಾವಣಾ ತಾಣವಾಗಿ ಕಾರ್ಯನಿರ್ವಹಿಸುತ್ತದೆ, ಕುತೂಹಲವನ್ನು ಹುಟ್ಟುಹಾಕುತ್ತದೆ ಮತ್ತು ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದರು.
ಮಾಹೆಯ ಅತ್ಯಾಧುನಿಕ ಪ್ರಯೋಗಾಲಯಗಳ ಮಾರ್ಗದರ್ಶಿ ಪ್ರವಾಸಗಳು, ವೈಜ್ಞಾನಿಕ ಉಪಕರಣಗಳೊಂದಿಗಿನ ಚಟುವಟಿಕೆಗಳು ಮತ್ತು ನವೀನ ಪ್ರಯೋಗಗಳನ್ನು ಪ್ರದರ್ಶಿಸುವ ಪ್ರದರ್ಶನಗಳು ಸೇರಿದಂತೆ ಸಂವಾದಾತ್ಮಕ ಕಲಿಕೆಯ ಅನುಭವಗಳ ಒಂದು ಶ್ರೇಣಿಯನ್ನು ಇನ್ಸ್ಪೈರ್ ಜೂನಿಯರ್ ಒಳಗೊಂಡಿದೆ. ಮಾದರಿಗಳೊಂದಿಗೆ ಸಂವಹನ ನಡೆಸಲು, ನೇರ ಪ್ರದರ್ಶನಗಳನ್ನು ವೀಕ್ಷಿಸಲು ಮತ್ತು ಮಾಹೆಯ ಗೌರವಾನ್ವಿತ ಸಂಶೋಧಕರು ಮತ್ತು ಬೋಧನಾ ವಿಭಾಗದ ಸದಸ್ಯರಿಂದ ನೇರವಾಗಿ ಕಲಿಯಲು ವಿದ್ಯಾರ್ಥಿಗಳಿಗೆ ಒಂದು ಅನನ್ಯ ಅವಕಾಶವಿದೆ. ಬೋಧಕವರ್ಗದ ಸದಸ್ಯರನ್ನು ತಮ್ಮ ಮಕ್ಕಳನ್ನು ಕರೆತರಲು ಪ್ರೋತ್ಸಾಹಿಸಲಾಗುತ್ತದೆ, ಈ ಕಾರ್ಯಕ್ರಮವನ್ನು ಇಡೀ ಮಾಹೆ ಸಮುದಾಯಕ್ಕೆ ಅಂತರ್ಗತ ಅನುಭವವನ್ನಾಗಿ ಮಾಡುತ್ತದೆ.
ಉಡುಪಿ ಮತ್ತು ನೆರೆಯ ದಕ್ಷಿಣ ಕನ್ನಡ ಜಿಲ್ಲೆಗಳ ಪಾಲ್ಗೊಳ್ಳುವವರೊಂದಿಗೆ, ಇನ್ಸ್ಪೈರ್ ಜೂನಿಯರ್ 2024 ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಗಳಿಸಿದೆ. ಈ ಪ್ರದೇಶದ 50ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಸೇರಿದ್ದು, ಸುಮಾರು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸ್ತವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ವಿಶಾಲವಾದ ಭಾಗವಹಿಸುವಿಕೆಯು ವೈಜ್ಞಾನಿಕ ಪರಿಶೋಧನೆ ಮತ್ತು ಸಂಶೋಧನೆ-ಆಧಾರಿತ ಕಲಿಕೆಯಲ್ಲಿ ಬಲವಾದ ಪ್ರಾದೇಶಿಕ ಆಸಕ್ತಿಯನ್ನು ಒತ್ತಿಹೇಳುತ್ತದೆ.
ಯುವಕರಲ್ಲಿ ಸಂಶೋಧನಾ-ಆಧಾರಿತ ಸಂಸ್ಕೃತಿಯನ್ನು ನಿರ್ಮಿಸಲು ಮತ್ತು ವಿಜ್ಞಾನ ಮತ್ತು ಸಂಶೋಧನೆಯಲ್ಲಿ ವೃತ್ತಿಜೀವನವನ್ನು ಮುನ್ನಡೆಸುವ ಬಗ್ಗೆ ಉತ್ಸುಕರಾಗಿರುವ ವಿದ್ಯಾರ್ಥಿಗಳು ಮತ್ತು ಬೋಧನಾ ವಿಭಾಗದ ಸದಸ್ಯರ ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಇದು ಪ್ರಯತ್ನಿಸುತ್ತದೆ. ಅಂತರಶಿಕ್ಷಣ ಸಹಯೋಗ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವ ಮೂಲಕ, ಈ ಕಾರ್ಯಕ್ರಮವನ್ನು ಬದಲಾವಣೆಗೆ ವೇಗವರ್ಧಕವಾಗಿ ವಿನ್ಯಾಸಗೊಳಿಸಲಾಗಿದೆ, ಇದು ಭವಿಷ್ಯದ ಸಂಶೋಧನಾ ಉತ್ಕೃಷ್ಟತೆಗೆ ಅಡಿಪಾಯ ಹಾಕುತ್ತದೆ. ತಮ್ಮ ಬೋಧನೆ ಮತ್ತು ಸಂಶೋಧನೆಯನ್ನು ಸಮೃದ್ಧಗೊಳಿಸಲು ಉತ್ತಮ-ಗುಣಮಟ್ಟದ ಸಂಪನ್ಮೂಲಗಳನ್ನು ಗುರುತಿಸಲು ಮತ್ತು ಹತೋಟಿಗೆ ತರಲು ಸಹಾಯ ಮಾಡಲು ಬೋಧಕರಿಗೆ ತರಬೇತಿ ಅವಧಿಗಳನ್ನು ಸಹ ಇನ್ಸ್ಪೈರ್ ಜೂನಿಯರ್ ನೀಡುತ್ತದೆ, ಇದು ವಿದ್ಯಾರ್ಥಿಗಳು ಮತ್ತು ವಿಶಾಲವಾದ ವೈಜ್ಞಾನಿಕ ಸಮುದಾಯಕ್ಕೆ ಪ್ರಯೋಜನವಾಗುವ ತರಂಗ ಪರಿಣಾಮವನ್ನು ಸೃಷ್ಟಿಸುತ್ತದೆ.
ಇನ್ಸ್ಪೈರ್ ಜೂನಿಯರ್ 2024 ನಡೆಯುತ್ತಿರುವುದರಿಂದ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಉತ್ಸಾಹವು ಸ್ಪಷ್ಟವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಶೋಧನಾ ಉತ್ಕೃಷ್ಟತೆಯ ಸಂಸ್ಕೃತಿಯನ್ನು ಬೆಳೆಸುವ ಮಾಹೆಯ ಬದ್ಧತೆಯು ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಮೂಲಕ ಸ್ಪಷ್ಟವಾಗಿದೆ. ಇಂಸ್ಪೈರ್ ಜೂನಿಯರ್ ವಿಜ್ಞಾನ ಮತ್ತು ಸಂಶೋಧನೆಯ ಭವಿಷ್ಯವನ್ನು ರೂಪಿಸುವ ಮಾಹೆಯ ಸಮರ್ಪಣೆಗೆ ಸಾಕ್ಷಿಯಾಗಿದೆ,
