ಉಡುಪಿ : ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಪಶು ಚಿಕಿತ್ಸಾಲಯ ಮಲ್ಪೆ/ಜಿಲ್ಲಾ ಪಂಚಾಯತ್ ಉಡುಪಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಡುಪಿ ಯುವಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ (ರಿ.) ಕೊಡವೂರು, ಲಯನ್ಸ್ & ಲಿಯೂ ಕ್ಲಬ್ ಪರ್ಕಳ ಹಾಗೂ ಗಣೇಶೋತ್ಸವ ಸಮಿತಿ ಕೊಡುವೂರು ಇವರ ಜಂಟಿ ಆಶ್ರಯದಲ್ಲಿ ಕೊಡವೂರಿನಲ್ಲಿ 6 ನೇ ಬಾರಿಗೆ ಸಾಕು / ಬೀದಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಅ.06 ರಂದು ಸ್ಥಳ ಕೊಡವೂರು ಶಾಲಾ ವಠಾರದಲ್ಲಿ ಸಮಯ ಬೆಳಿಗ್ಗೆ 9.30 ರಿಂದ 11-30 ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 8660984279 ನ್ನು ಸಂಪರ್ಕಿಸಬಹುದು.
Udupi
ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಭಟ್ ರಾಜ್ಯಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ : ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಬಾಪೂಜಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ ಭಟ್ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಉಚ್ಚಿಲ ದಸರಾ ಮಹೋತ್ಸವದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪೊಣ್ಣು ಪಿಲಿನಲಿಕೆ ಸ್ಪರ್ಧೆ : ಯಶ್ಪಾಲ್ ಸುವರ್ಣ
ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಹೆಣ್ಣು ಮಕ್ಕಳಿಗೆ ಪೊಣ್ಣು ಪಿಲಿನಲಿಕೆ-2024 ಕಾರ್ಯಕ್ರಮ ಆಯೋಜಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಅಕ್ಟೋಬರ್ 5 ಶನಿವಾರ ಮಧ್ಯಾಹ್ನ 2 ಗಂಟೆಗೆ ಉಚ್ಚಿಲ ಮೊಗವೀರ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ.
ಅಕ್ಟೋಬರ್ 6 ರವಿವಾರ ಮಧ್ಯಾಹ್ನ 2 ಗಂಟೆಗೆ ಶ್ರೀಮತಿ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಪೊಣ್ಣು ಪಿಲಿನಲಿಕೆ ಸ್ಪರ್ಧೆ ನಡೆಯಲಿದೆ.
ಗುಂಪು ವಿಭಾಗದಲ್ಲಿ ಪ್ರಥಮ ಬಹುಮಾನ 25,000, ದ್ವಿತೀಯ ಬಹುಮಾನ 20,000, ತೃತೀಯ ಬಹುಮಾನ 15,000 ಹಾಗೂ ವೈಯುಕ್ತಿಕ ವಿಭಾಗದಲ್ಲಿ ಪ್ರಥಮ 6,000, ದ್ವಿತೀಯ 4,000, ತೃತೀಯ 3,000 ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಎಲ್ಲಾ ತಂಡಗಳಿಗೆ ರೂ. 5,000 ಪ್ರೋತ್ಸಾಹ ಧನ ನೀಡಲಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಅಪಘಾತ ತಡೆಗಟ್ಟಲು ಕಟ್ಟು ನಿಟ್ಟಿನ ನಿರ್ದೇಶನವನ್ನು ಜಾರಿಗೊಳಿಸಲು ಸಂಚಾರಿ ಠಾಣಾ ಪೊಲೀಸರಿಗೆ ಮನವಿ
ಕುಂದಾಪುರ : ಕುಂದಾಪುರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಟಿಪ್ಪರ್ ಹಾಗೂ ಲಾರಿಗಳು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು ಇದಕ್ಕೆ ಮೊನ್ನೆ ನಡೆದ ಕೋಟೇಶ್ವರದ ಪದವಿ ವಿದ್ಯಾರ್ಥಿಯ ಟಿಪ್ಪರ್ ಅಪಘಾತವೇ ಸಾಕ್ಷಿಯಾಗಿದ್ದು ಎಲ್ಲಾ ಚಾಲಕರಿಗೂ ನಗರ ಸಂಚಾರಿ ಪೊಲೀಸ್ ಠಾಣೆಯಿಂದ ಕಟ್ಟು ನಿಟ್ಟಿನ ನಿರ್ದೇಶನವನ್ನು ನೀಡಿ ಕುಂದಾಪುರ ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಅಪಘಾತಗಳನ್ನು ನಿಯಂತ್ರಣ ಮಾಡುವಲ್ಲಿ ಸಂಚಾರಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕೆಂದು ಕುಂದಾಪುರದ ಸಂಚಾರಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಪ್ರಸಾದ್ ಕೆ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಮಾನವಾಧಿಕಾರ ಮತ್ತು ಲೋಕಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಇಕ್ಬಾಲ್ ಕುಂಜಿಬೆಟ್ಟು, ಉಪಾಧ್ಯಕ್ಷ ಸುಧೀರ್ ಜಿ ಕಾಳಾವರ, ಕಾರ್ಯದರ್ಶಿ ಸದಾಶಿವ ಕೋಟೇಗಾರ್, ಸಂಚಾಲಕ ಲಕ್ಷಣ್ ಖಾರ್ವಿ, ಶ್ರೀರಾಮ ವಿದ್ಯಾ ಕೇಂದ್ರ ಸಂಚಾಲಕರಾದ ನಾಗೇಶ್ ಕಾಮತ್, ಸುಜೀರ್ ದೇವೇಂದ್ರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಟಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ
ಬೈಂದೂರು : ಜಿಲ್ಲೆಯ ಪ್ರತಿಷ್ಠಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಇಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಸಹಾಯಕ ಆಯುಕ್ತರಾದ ಮಹೇಶ್ಚಂದ್ರ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕರಾದ ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕನಾಯ್ಕ್, ಶ್ರೀಮತಿ ಧನಾಕ್ಷಿ, ಶ್ರೀಮತಿ ಸುಧಾ ಕೆ, ಕೆ. ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ. ವಿ, ಯು. ರಾಜೇಶ್ ಕಾರಂತ್, ರಘುರಾಮ ದೇವಾಡಿಗ ಉಪಸ್ಥಿತರಿದ್ದರು.

ಉಪ್ಪುಂದದಲ್ಲಿ ಕುಡಿಯುವ ನೀರು ಕಲುಷಿತಗೊಂಡು ಸಾವಿರಕ್ಕೂ ಮಿಕ್ಕಿ ಜನರು ಅಸ್ವಸ್ಥ
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಲುಷಿತಗೊಂಡ ಪರಿಣಾಮ ನೂರಾರು ಜನರು ಅಸ್ವಸ್ಥಗೊಂಡ ಘಟನೆ ಸಂಭವಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್ನಲ್ಲಿ ಕುಡಿಯುವ ನೀರು ಕಲುಷಿತಗೊಂಡ ಪರುಣಾಮ ಕರ್ಕಿ ಕಳ್ಳಿ ಮತ್ತು ಮಡಿಕಲ್ ಎನ್ನುವ ಪ್ರದೇಶದಲ್ಲಿ ಗ್ರಾಮಸ್ಥರು ಸಂಪೂರ್ಣ ಅಸ್ವಸ್ಥರಾಗಿದ್ದಾರೆ.
ಕಾಸಿನಾಡಿ ಎಂಬಲ್ಲಿರುವ ನೀರಿನ ಟ್ಯಾಂಕ್ನಿಂದ ಈ ಕಲುಷಿತ ನೀರನ್ನು ಗ್ರಾಮಸ್ಥರು ಕುಡಿದಿದ್ದರು. ಇದರ ಪರಿಣಾಮವಾಗಿ ಕರ್ಕಿಕಳಿಯಲ್ಲಿ ಸುಮಾರು 500 ಜನ, ಮಡಿಕಲ್ ನಲ್ಲಿ 600 ಜನ ಅಸ್ವಸ್ಥಗೊಂಡಿದ್ದಾರೆ. ಇಲ್ಲಿನ ವಾರ್ಡ್ನ ಪ್ರತಿ ಮನೆಯಲ್ಲೂ 3ಕ್ಕೂ ಅಧಿಕ ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. 80ರ ವಯೋವೃದ್ಧರಿಗೆ ರಕ್ತಭೇದಿ ಹಿನ್ನಲೆಯಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಕುಂದಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಾಸಿನಾಡಿಯ ಓವರ್ ಹೆಡ್ ನೀರಿನ ಟ್ಯಾಂಕ್ ನೀರು ಸರಬರಾಜನ್ನು ಬಂದ್ ಮಾಡಲಾಗಿದ್ದು ಸೂಕ್ತ ತನಿಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಉಡುಪಿ : ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಉಡುಪಿಯ ರಥಬೀದಿ ಸಾಂಸ್ಕೃತಿಕ ಸಂಘಟನೆ, ಗಾಂಧೀಜಿ ಉಡುಪಿ ಭೇಟಿ -90″ ಎಂಬ ಕಾರ್ಯಕ್ರಮವನ್ನು ಆಯೋಜಿಸಿತು.
ಮಹಾತ್ಮಾ ಗಾಂಧೀಜಿ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ 1933ರಲ್ಲಿ ಹರಿಜನ ಯಾತ್ರೆ ಆರಂಭಿಸಿದ್ದರು. 1934ರಲ್ಲಿ ಉಡುಪಿಗೆ ಗಾಂಧೀಜಿ ಭೇಟಿಕೊಟ್ಟು ಎರಡು ದಿನ ತಂಗಿದ್ದರು. ಗಾಂಧೀಜಿ ಭೇಟಿಗೆ 90 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಂಜಿಎಂ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು. ವಿನೀತ ರಾವ್ ಆ ದಿನಗಳನ್ನು ತೆರೆದಿಟ್ಟರು.
ಗಾಂಧೀಜಿ ಭೇಟಿಗೂ ಮುನ್ನ ತಯಾರಿಗಳು, ಭೇಟಿಕೊಟ್ಟ ಸಂದರ್ಭ, ಅಜ್ಜರಕಾಡು ಮೈದಾನದ ಭಾಷಣ, ದೇಣಿಗೆ ಸಂಗ್ರಹ, ಜನರ ಭೇಟಿ ಚರ್ಚೆಯಾದ ವಿಚಾರಗಳ ಬಗ್ಗೆ ಪತ್ರಿಕಾ ವರದಿ, ಅಧ್ಯಯನ, ಸಂದರ್ಶನಗಳ ದಾಖಲೆ ಸಮೇತ ಮಾಹಿತಿ ನೀಡಿದರು. ದಲಿತರಿಗೆ ಪ್ರವೇಶ ಇರದ ಯಾವ ದೇವಸ್ಥಾನಗಳಿಗೂ ಗಾಂಧೀಜಿಯವರು ಯಾತ್ರೆ ಸಂದರ್ಭದಲ್ಲಿ ಭೇಟಿ ಕೊಟ್ಟಿಲ್ಲ ಎಂದರು. ಉಡುಪಿಯಲ್ಲಿ ಅಸ್ಪೃಶ್ಯತೆ ನಿವಾರಣಾ ದೇಣಿಗೆಯಾಗಿ 1200 ರುಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ವಿನೀತ್ ರಾವ್ ಮಾಹಿತಿ ನೀಡಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷ ನೋಡಬೇಡಿ, ವ್ಯಕ್ತಿಗಳನ್ನು ನೋಡಿ ಮತದಾನ ಮಾಡಿ – ಕೆ. ರಘುಪತಿ ಭಟ್
ಉಡುಪಿ : ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆಧಾರದ ಮೇಲೆ ಮತದಾನ ಮಾಡಬೇಕೆಂದಿಲ್ಲ. ವ್ಯಕ್ತಿಗಳ ಸಾಧನೆ ನೋಡಿ ಮತದಾನ ಮಾಡಿ. ಈ ಚುನಾವಣೆಯಿಂದ ಸರ್ಕಾರಗಳು ನಿರ್ಧಾರವಾಗುವುದಿಲ್ಲ. ಹೀಗಾಗಿ ಕರಾವಳಿಯ ಸಮಸ್ಯೆಗಳ ಬಗ್ಗೆ ಅನುಭವ ಇರುವವರನ್ನು ಆಯ್ಕೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳುತ್ತೇನೆ. ಆದರೆ ಇದು ವಿಧಾನಪರಿಷತ್ ಚುನಾವಣೆ, ಇಲ್ಲಿ ಪಕ್ಷ ನೋಡಬೇಡಿ ಎಂದರು.
ಬಿಜೆಪಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಯುವ ನಾಯಕನಿಗೆ ಅವಕಾಶ ನೀಡಿದೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಕೂಡ ಚೆನ್ನಾಗಿದ್ದಾರೆ. ನನ್ನ ಅಧಿಕಾರ ಅವಧಿಯ ಸಮಯದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಸಹಕಾರಿ ಧುರಿಣರಾಗಿ ಅನುಭವ ಹೊಂದಿದ್ದಾರೆ. ಒಳ್ಳೆ ಅಭ್ಯರ್ಥಿ ಯಾರು ಎಂದು ಗಮನಿಸಿ ಮತದಾನ ಮಾಡಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಉಡುಪಿಗೆ ತಪ್ಪಿದ ಪ್ರಾತಿನಿಧ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಡುಪಿಯಲ್ಲಿ ಅನೇಕ ಮಂದಿ ಅಭ್ಯರ್ಥಿಗಳಾಗಲು ಸಮರ್ಥರಿದ್ದರು. ವಿಧಾನ ಪರಿಷತ್ ಪದವೀಧರ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ಸರಿಯಾಗಿರಲಿಲ್ಲ. ಅಂದು ಸರಿಯಾದ ಮಾನದಂಡ ಪಾಲಿಸಿರಲಿಲ್ಲ. ಆ ಕಾರಣಕ್ಕೆ ನಾನು ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಆ ಚುನಾವಣೆಯಲ್ಲಿ ಕರಾವಳಿಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಹಿರಿಯರನ್ನು ಕಡೆಗಣಿಸಿ ಅವಕಾಶ ವಂಚಿಸಲಾಗಿತ್ತು. ಆದರೆ ಈ ಬಾರಿ ಪಕ್ಷ ಮಾನದಂಡ ಇಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಿದೆ. ಹಿಂದುಳಿದ ವರ್ಗದ ಸಣ್ಣ ಜಾತಿಯ ವ್ಯಕ್ತಿಗೆ ಅವಕಾಶ ನೀಡಿದ್ದಾರೆ. ಈ ಆಯ್ಕೆಯನ್ನು ನಾನು ಗೌರವಿಸುತ್ತೇನೆ. ಅನೇಕರು ನಳಿನ್ ಕುಮಾರ್ ಕಟೀಲ್ಗೆ ಅವಕಾಶ ನೀಡಬೇಕಿತ್ತು ಎನ್ನುತ್ತಾರೆ. ಕಾರ್ಯಕರ್ತರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊರಗೆ ನಿಂತು ನೋಡಿದಾಗ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದರು.
ಬಿಜೆಪಿಗೆ ಮರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಈತನಕ ಯಾರು ಸಂಪರ್ಕ ಮಾಡಿಲ್ಲ. ನನ್ನನ್ನು ಯಾರು ಮಾತನಾಡಿಸಿಲ್ಲ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ನನ್ನ ಪಾಡಿಗೆ ಸಾಮಾಜಿಕ ಕೆಲಸ ಮಾಡಿಕೊಂಡಿದ್ದೇನೆ. ಬಿಜೆಪಿ ಸದಸ್ಯತ್ವ ಅಭಿಯಾನ ಆಗುತ್ತಿದೆ. ನಾನು ಮಿಸ್ ಕಾಲ್ ಕೊಟ್ಟು ಬಿಜೆಪಿಯ ಸದಸ್ಯ ಆಗಿದ್ದೇನೆ. ಈ ವಿಚಾರದಲ್ಲಿ ಯಾರ ನಿರ್ಬಂಧನೆ ಇಲ್ಲ. ಸ್ಥಾನೀಯ ಸಂಸ್ಥೆಯವರು ಅದನ್ನು ಅನುಮೋದಿಸಬೇಕು. ಅನುಮೋದಿಸ್ತಾರಾ ಇಲ್ವಾ ಗೊತ್ತಿಲ್ಲ. ಪಕ್ಷ ನನ್ನನ್ನು ಕರೆದರೆ ಸೇರ್ಪಡೆಗೆ ಸಿದ್ಧನಿದ್ದೇನೆ. ನನಗೆ ಯಾರು ಕರೆದಿಲ್ಲ ಹಾಗಾಗಿ ಸುಮ್ಮನಿದ್ದೇನೆ ಎಂದರು.
Chiranthana Charitable Trust: A Legacy of Geriatric Care, Community Health, Education, and Cultural Promotion
Chiranthana Charitable Trust, based in Suratkal, has been a distinguished name in the field of geriatric healthcare for over 25 years. In addition to its remarkable contributions to elderly care, the trust has also made significant strides in areas such as community health, education, and cultural promotion.
A key facet of Chiranthana’s community engagement is its dedication to promoting Indian art and music. Over the years, the trust has organized numerous national-level music festivals, concerts, workshops, and lecture-demonstration programs. These events have featured performances by renowned artists including Pt. Yogesh Samsi, Pt. Ram Deshpande, Pandita Ashwini Bhide Deshpande, Pt. Pravin Godkhindi, Pt. Vinayak Torvi, Pt. Ganapathi Bhat Hasanagi, Pt. Parameshwar Hegde, Pt. Ramdas Palsule, Pt. Venkatesh Kumar, Pandita Shubhada Paradkar, and Pt. Tejendra Mujumdar.
In collaboration with Maaxmedia, Udupi, Chiranthana has been actively promoting Indian art and tradition through projects such as Abhinava Khayal—a YouTube series documenting valuable compositions by Pt. Narayan Pandit, as well as initiatives like Alaap, Aarohi, and Ranga Nayaka.
Their latest joint venture, Swar-Swaad: An Evening with Three Melodies, is set to delight music lovers in Udupi. This event will feature performances by:
- Anuradha Bhat (Udupi) – Vocal Melody
- Sri Arnab Chakrabarty – Sarod Melody
- Pt. Partha Bose (Kolkata) – Sitar Melody
The event will take place at Yakshagana Kalakendra – Infosys Hall, Udupi, on 26th October, from 4 PM to 8 PM.
With its unwavering commitment to healthcare and cultural enrichment, Chiranthana Charitable Trust continues to make a lasting impact on society, enriching lives through both service and the arts.
ಶ್ರೀ ಸಿದ್ದೇಶ್ವರಿ ದೇವಿಗೆ ರಜತ ಪ್ರಭಾವಳಿ ಮತ್ತು ಯಾಗ ಮಂಟಪ ತಗಡಿನ ಚಪ್ಪರ ಸಮರ್ಪಣೆ
ಮಣಿಪಾಲ : ಶ್ರೀ ಉಮಾಮಹೇಶ್ವರ ಸಿದ್ದೇಶ್ವರಿ ದೇವಿಯ ಸನ್ನಿಧಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಪ್ರತಿ ದಿನ ಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವಿರುವುದು.

ದಿನಾಂಕ 3.10.2024ರಂದು ಪ್ರಥಮ ದಿನ ದೇವಿಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ಸೇವೆ ಸಂಪನ್ನಗೊಂಡ ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಂದ ರಚಿಸಲ್ಪಟ್ಟ ರಜತ ಪ್ರಭಾವಳಿಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಶ್ರೀ ಎಚ್ಎಸ್ ಬಲ್ಲಾಳ್ ರವರು ದೀಪ ಬೆಳಗಿಸುವುದರ ಮೂಲಕ ಶ್ರೀ ಸಿದ್ದೇಶ್ವರಿ ದೇವಿಗೆ ಸಮರ್ಪಿಸಿದರು. ತಗಡಿನ ಚಪ್ಪರ ನಿರ್ಮಿಸಿ ಕೊಡುಗೆಯಾಗಿ ನೀಡಿದ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಪ್ರಭು ದಂಪತಿಯನ್ನು ಗೌರವಿಸಲಾಯಿತು.
ಉಡುಪಿ ಕ್ಷೇತ್ರದ ಮಾಜಿ ಶಾಸಕ ಶ್ರೀ ಕೆ ರಘುಪತಿ ಭಟ್, ಗೋವಾದ ಉದ್ಯಮಿ ಶ್ರೀ ಮುಕುಂದ ಗಣಪತಿ ಪ್ರಭು, ಆಡಳಿತ ಮೊಕ್ತೆಸರ ಸುಭಾಕರ ಸಾಮಂತ್, ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಕೆ ಕೆ ಡಿ ಜಿ ಬಿ ವಿದ್ಯಾ ಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್, ಸಂಘದ ಅಧ್ಯಕ್ಷ ರಾಧಾಕೃಷ್ಣ ಸಾಮಂತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ಸ್ವಾಗತ ಕೋರಿ, ದಿನೇಶ್ ಪ್ರಭು ವಂದಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.