ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಧಾರಾಕಾರ ಮಳೆಯಾಗಿದ್ದು ಇಲ್ಲಿನ ಪಟ್ಟಣ ಪಂಚಾಯತ್ ನಿರ್ಲಕ್ಷ್ಯದಿಂದಾಗಿ ಯಡ್ತರೆ ಗ್ರಾಮದ ಬಂಕೇಶ್ವರ ಅಂಗನವಾಡಿ ಕೇಂದ್ರಕ್ಕೆ ಕೃತಕ ನೆರೆ ನೀರು ನುಗ್ಗಿದೆ. ವಿಷಯ ತಿಳಿದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣ ಪಂಚಾಯತ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಶಾಸಕರು, ಪಟ್ಟಣ ಪಂಚಾಯತ್ ಚರಂಡಿ ಅವ್ಯವಸ್ಥೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಂಗನವಾಡಿಯ ಆಹಾರ ಸಾಮಗ್ರಿ ದಾಸ್ತಾನಿಗೂ ಮಳೆ ನೀರು ನುಗ್ಗಿದ್ದು ಎರಡು ದಿನದ ಒಳಗೆ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಶಾಸಕರು ಸೂಚನೆ ನೀಡಿದರು. ಮಳೆ ನೀರು ನುಗ್ಗಿದ ಪರಿಣಾಮ ಇವತ್ತು ಅಂಗನವಾಡಿ ಮಕ್ಕಳಿಗೆ ರಜೆ ನೀಡಲಾಗಿತ್ತು.






















