ಬ್ರಹ್ಮಾವರ : ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ 14ಕೋಟಿ ರೂ. ವಂಚನೆಯ ವಿರುದ್ಧ ರೈತರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಧರಣಿ ನಿರತ ರೈತರ ಎಲ್ಲ ಬೇಡಿಕೆಗಳನ್ನೂ ಸರ್ಕಾರ ಒಪ್ಪಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಧರಣಿ ಸ್ಥಳಕ್ಕೆ ನಿನ್ನೆ ಸಂಜೆ ಬಂದು ಮಾಹಿತಿ ನೀಡಿದ್ದಾರೆ.
ಪ್ರಕರಣದ ಎಲ್ಲ ಆಪಾದಿತರ ವಿರುದ್ಧ ನ್ಯಾಯಾಲಯದ ವಿಚಾರಣೆಗೆ ಸರ್ಕಾರ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದಲ್ಲದೇ, ವಿಶೇಷ ಪ್ರಾಸಿಕ್ಯೂಟರ್ ನೇಮಕದ ಬೇಡಿಕೆಯನ್ನೂ ಈಡೇರಿಸಿದೆ.
ಈ ಹಿನ್ನೆಲೆಯಲ್ಲಿ, ಶುಕ್ರವಾರ ಸಂಜೆ 3.30ಕ್ಕೆ ಧರಣಿ ಚಪ್ಪರದಲ್ಲಿ, ಹೋರಾಟದಲ್ಲಿ ಪಾಲ್ಗೊಂಡವರಿಗೆ ಕೃತಜ್ಞತಾ ಸಭೆಯೊಂದಿಗೆ ಧರಣಿ ಮುಕ್ತಾಯಗೊಳ್ಳಲಿದೆ ಎಂದು ತಿಳಿದುಬಂದಿದೆ. ಒಟ್ಟು 49 ದಿನಗಳ ಕಾಲ ಧರಣಿ ನಡೆದಂತಾಗಿದೆ. ಜಿಲ್ಲಾ ರೈತ ಸಂಘದ ಅಡಿ, ವಿಧಾನ ಪರಿಷತ್ ಮಾಜೀ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾರ್ಗದರ್ಶನದಲ್ಲಿ ಈ ಧರಣಿ ನಡೆಯುತ್ತಿತ್ತು. ಧರಣಿ ಸ್ಥಳಕ್ಕೆ ಡಿಸಿಎಂ ಶಿವಕುಮಾರ್, ಸ್ಪೀಕರ್ ಖಾದರ್ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.