ಉಡುಪಿ : ಮಾಜಿ ಗೃಹ ಸಚಿವ, ನವ ಉಡುಪಿಯ ನಿರ್ಮಾತೃ ಕೀರ್ತಿಶೇಷ ಡಾ. ವಿ.ಎಸ್. ಆಚಾರ್ಯ ಅವರ ಪುಣ್ಯ ಸಂಸ್ಮರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಸಂಕೀರ್ಣ ಮಣಿಪಾಲದ ರಜತಾದ್ರಿಯ ಮುಂಭಾಗದಲ್ಲಿರುವ ಡಾ.ವಿ.ಎಸ್. ಆಚಾರ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಉಡುಪಿ ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಪ್ ಡಿಸೋಜ, ಪ್ರಮುಖರಾದ ನಳಿನಿ ಪ್ರದೀಪ್ ರಾವ್, ವೀಣಾ ಎಸ್. ಶೆಟ್ಟಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಅಶೋಕ್ ನಾಯ್ಕ್, ಕಲ್ಪನಾ ಸುಧಾಮ, ಡೇನಿಸ್ ಪೆರಂಪಳ್ಳಿ, ಶ್ರಿವತ್ಸ, ಮಂಜುಳಾ ಪ್ರಸಾದ್, ಆನಂದ್ ಸುವರ್ಣ, ಕಿಶೋರ್ ಕರಂಬಳ್ಳಿ, ಸಂತೋಷ್ ಆಚಾರ್ಯ, ನಿತಿನ್ ಪೈ, ಸಂತೋಷ್ ಪ್ರಭು, ಧನುಷ್ ಶೆಟ್ಟಿ, ಭೂಷಣ್ ಮುಂತಾದವರು ಉಪಸ್ಥಿತರಿದ್ದರು.
