ಉಡುಪಿ : ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ನಾಲ್ಕು ಮಂದಿಯನ್ನು ಸೆನ್ ಅಪರಾಧ ದಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಲಕ್ಷಾಂತರ ಮೌಲ್ಯದ ಮಾದಕ ವಸ್ತು ಸಹಿತ ಮಾರಾಟಕ್ಕೆ ಬಳಸಿದ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಉಡುಪಿ-ಕಾರ್ಕಳ ಹೆದ್ದಾರಿಯ ನೀರೆ ಎಂಬಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್ ಅನ್ನು ಮಾರಾಟ ಮಾಡಲು ಯತ್ನಿಸುತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪ್ರೇಮನಾಥ, ಶೈಲೇಶ, ಪ್ರಜ್ವಲ್, ರತನ್ ಈ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 37 ಗ್ರಾಂ 27 ಮಿಲಿ ಗ್ರಾಂ ತೂಕದ ಎಂಡಿಎಂಎ, 1ಕೆ.ಜಿ 112 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು, ಎಂಡಿಎಂಎ ಅಂದಾಜು ಮೌಲ್ಯ ರೂ. 2 ಲಕ್ಷ , ಗಾಂಜಾದ ಅಂದಾಜು ಮೌಲ್ಯ ರೂ. 87,500, ಆಗಿರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮೊಬೈಲ್ 5 ಪೋನ್, ಅಂದಾಜು ಮೌಲ್ಯ ರೂ. 41 ಸಾವಿರ , ಗಾಂಜಾವನ್ನು ಸಾಗಾಟ ಮಾಡಲು ಬಳಸಿದ ಬ್ಯಾಗ್ ಇನ್ನಿತರ ವಸ್ತುಗಳು ಸಹಿತ ನಗದು ರೂಪಾಯಿ 7130 ಅನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಎಂಡಿಎಂಎ ಪೌಡರ್ ಅನ್ನು ಬೆಂಗಳೂರಿನಿಂದ ಖರೀದಿಸಿರುವುದಾಗಿ ಆರೋಪಿ ಪ್ರೇಮ್ ತಿಳಿಸಿದ್ದಾನೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.