192
ಉಡುಪಿ : ಕುಸಿದುಬಿದ್ದ ವೃದ್ಧರು ತಲೆಗಾದ ಗಂಭೀರ ಗಾಯದಿಂದ ಅಧಿಕ ರಕ್ತಸ್ತ್ರಾವಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೀಡಿನಗುಡ್ಡೆಯ ಶಾರದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಮನೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯು ರಾಮ ಭಟ್ (69ವ), ತೆಂಕಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 45 ವರ್ಷಗಳ ಕಾಲ ಅರ್ಚಕಾಗಿ ಸೇವೆ ಸಲ್ಲಿಸಿದವರೆಂದು ತಿಳಿದುಬಂದಿದೆ.