ಉಡುಪಿ : ವಿಕಲಚೇತನರ ಪರವಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸೋನಿಯಾ ನೇತೃತ್ವದ ಪೀಸ್ ಫೌಂಡೇಶನ್ ನ್ಯಾಶನಲ್ ಎನ್‌ಜಿಓ ಹಾಗೂ ಉಡುಪಿ ಜಿಲ್ಲಾ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಾವಿರ ಗಿಡಗಳನ್ನು ನೆಡುವ ಪರಸರ ಸ್ನೇಹಿ ಕಾರ್ಯಕ್ರಮಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ಶ್ರೀಮತಿ ವಾರಿಜಾಕ್ಷಿ ದೀಪ ಬೆಳಗಿಸಿ ಉದ್ಘಾಟಿಸಿದರು.
ನಗರದ ಅದಿ ಉಡುಪಿ ಬಳಿಯಿರುವ ವಲಯ ಅರಣ್ಯ ಕಚೇರಿಯಲ್ಲಿ ನಡೆದ ಕಾರ್ಯಕಮದಲ್ಲಿ ಮಾತನಾಡಿದ ಅವರು ಪೀಸ್ ಫೌಂಡೇಶನ್ ಜಿಲ್ಲೆಯ ವಿವಿಧ ಶಾಲೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಸ್ಪೂರ್ತಿ ತರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲರಾದ ಜಯಪ್ರಕಾಶ್ ಕೆದ್ಲಾಯ ಮಾತನಾಡಿ ಹಸಿರೇ ನಮ್ಮ ಉಸಿರು ,ಇವತ್ತು ಹಸಿರು ಕ್ರಾಂತಿ ಇಡೀ ದೇಶದಲ್ಲೇ ಅಗಬೇಕಾಗಿದೆ.ವಿಶೇಷವಾಗಿ ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವಂತಹ ಕೆಲಸ ಅಗಬೇಕಾಗಿದೆ.ಅದಷ್ಟು ಶಾಲಾ ಕಾಲೇಜು ,ಖಾಲಿಜಾಗದಲ್ಲಿ ಮರಗಳನ್ನುನೆಟ್ಟು ಬೆಳಸಿದ್ದಲ್ಲಿ ನಮ್ಮ ಜೀವನ ಸಾರ್ಥಕ ಎನಿಸುತ್ತದೆ. ಇವತ್ತು ವೀಕಲಚೇತನರೆಲ್ಲರೂ ಒಗ್ಗೂಡಿ ಸಾವಿರ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿರುವುದು ಸಂತೋಷದ ವಿಚಾರ ಎಂದರು.
ಬಳಿಕ ಅದಿ ಉಡುಪಿ ಶಾಲಾ ವಾಠಾರದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯೂಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಜಾಗೂ ಹಿರಿಯ ನಾಗರಿಕ ಸಬಳೀಕರಣ ಇಲಾಖೆ ಯೋಜನಾ ಸಹಾಯಕರಾದ ಶಿವಾಜಿ,ಪೀಸ್ ಪೌಂಡೇಶನ್ ಸಂಸ್ಥೆಯ ಜಗದೀಶ್ ಭಟ್, ಉದ್ಯಮಿಗಳಾದ ಸ್ಟಾನ್ಲಿ, ಪತ್ರಕರ್ತರಾದ ಜನಾರ್ಧನ್ ಕೊಡವೂರು,ಶಿಜಿತ್,ಕಲಾವಿದರಾದ ಸಂದೇಶ್,ಯುವ ಉದ್ಯಮಿಗಳಾದ ಕೆ ಸಂದೀಪ್ ಉಪಸ್ಥಿತರಿದ್ದರು.ಅರಣ್ಯ ಇಲಾಖೆ ಸಿಬಂದಿ ಕೇಶವ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.