63
ಮಲ್ಪೆ : ಪೊಲೀಸ್ ಠಾಣೆ ವ್ಯಾಪ್ತಿಯ ಪಡುಕೆರೆ ರಸ್ತೆಯಲ್ಲಿರುವ ಎಂ.ಡಿ ಬಾರ್ ಹಿಂಭಾಗ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಗರ್, ರಮೇಶ, ಮಲ್ಲಪ್ಪ ರಾಮಪ್ಪ ಮಾಯಕೊಂಡ, ಹನುಮಂತ, ಸುರೇಶ, ಮಹೇಶ, ಬಾಶಾ ಸಾಬ್, ಯಮುನಪ್ಪ, ತಿಪ್ಪಯ್ಯ, ಬಸವರಾಜ, ಜುಲೇಶ್ ತೇಜಪ್ಪ ಕಾರಬಾರಿ, ಪ್ರಕಾಶ್ ಬಂಧಿತರು. ಬಂಧಿತರಿಂದ ರೂ. 27,070 ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ.
ಮಲ್ಪೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.