Saturday, March 15, 2025
Banner
Banner
Banner
Home » ‘ವಿಶ್ವಕರ್ಮ ಯೋಜನೆ’ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಸಂಸದ ಕೋಟ

‘ವಿಶ್ವಕರ್ಮ ಯೋಜನೆ’ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಸಂಸದ ಕೋಟ

by NewsDesk

ಉಡುಪಿ : ವಿಶ್ವಕರ್ಮ ಯೋಜನೆ ಮತ್ತು ಪಿಎಇಜಿಪಿ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಜತಾದ್ರಿಯ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಜರಗಿತು.

ಮೊದಲು ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಅಧಿಕಾರಿಗಳಿಂದ ಯೋಜನೆಯ ಪ್ರಗತಿಯ ವಿವರಗಳನ್ನ ಪಡೆದರು. ಒಟ್ಟು 18809 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 5676 ಪರೀಶೀಲನೆಗೆ ಯೋಗ್ಯವಾಗಿದೆ. 4865 ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. 18809 ಅರ್ಜಿಗಳಲ್ಲಿ ಟೈಲರಿಂಗ್, ಬಡಗಿ ಮತ್ತು ಗಾರೆ ಕೆಲಸಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದು, ಈ ಅರ್ಜಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಸಂಸದ ಕೋಟ ಮಾತನಾಡಿ, ಈ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮಾತುಕತೆ ನಡೆಸಿದ್ದೇನೆ. ಉಡುಪಿ ಜಿಲ್ಲೆಯಲ್ಲಿ ಟೈಲರಿಂಗ್, ಬಡಗಿ ಮತ್ತು ಗಾರೆ ಕೆಲಸಕ್ಕೆ 12ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೈಲರಿಂಗ್ ಒಂದಕ್ಕೆ 22ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ಹೀಗೆ ಆದಾಗ ಬೇರೆಲ್ಲಾ ಕಸುಬುದಾರರಿಗೆ ಸಮಸ್ಯೆಯಾಗುತ್ತದೆ. ಎಲ್ಲ ಕಸುಬುದಾರರಿಗೂ ಅವಕಾಶ ಸಿಗಬೇಕು ಎನ್ನುವ ದೃಷ್ಟಿಯಿಂದ ತಡೆಹಿಡಿಯಲಾಗಿದೆ. ಪರಿಶೀಲನೆ ನಡೆಸಿ ಇನ್ನೆರಡು ಮೂರು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಟೈಲರಿಂಗ್‌ಗೆ ಹಣ ನೀಡುತ್ತಿಲ್ಲ ಎಂದು ಕೆಲವರು ಮೀನಿನಬಲೆ ತಯಾರಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇಂತಹ ಹಲವಾರು ಪ್ರಕರಣಗಳು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು. ಸೂಕ್ತವಾಗಿ ಪರೀಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಅರ್ಜಿ ಪರಿಶೀಲನೆ ವಿಳಂಬವಾಗುತ್ತಿರುವುದನ್ನು ಕಂಡ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಬರುತ್ತಿರುವ 2000 ಅರ್ಜಿ ವಿಲೇ ಮಾಡುವುದಕ್ಕೆ ವಿಳಂಬ ಏಕೆ ಎಂದು ಪ್ರಶ್ನಿಸಿದರು.

ಮಂಗಳೂರಿನ ತರಬೇತಿ ಸಂಸ್ಥೆಗಳು ಜಿಲ್ಲೆಯ ಫಲಾನುಭವಿಗಳನ್ನು ಅರ್ಧ ದಿನದ ತರಬೇತಿ ನೀಡಿ ಪ್ರಮಾಣಪತ್ರ ನೀಡುತ್ತಿದ್ದಾರೆ ಎಂಬ ಬಗ್ಗೆ ತರಬೇತಿ ಸಂಸ್ಥೆಗಳ ಮುಖ್ಯಸ್ಥರು ಸಂಸದರ ಗಮನಸೆಳೆದರು. ಮುಖಚಹರೆ ಗುರುತಿಸುವ ತಂತ್ರಜ್ಞಾ‌ನವನ್ನು ಎನ್ಎಸ್ಡಿಎ ಜಾಲತಾಣದಲ್ಲಿ ಅಳವಡಿಸಲಾಗುತ್ತದೆ ಆ ಬಳಿಕ ಈ ಸಮಸ್ಯೆ ಪರಿಹಾರವಾಗಲಿದೆ. ಆದರೆ ಐದು ದಿನಗಳ ತರಬೇತಿಗೆ ಕಡ್ಡಾಯವಾಗಿ ಬಂದವರಿಗೆ ಮಾತ್ರ ಪ್ರಮಾಣಪತ್ರ ವಿತರಣೆಯಾಗಬೇಕು ಎನ್ನುವ ವಿಚಾರದ ಬಗ್ಗೆ ಚರ್ಚಿಸಲಾಯಿತು. ತರಬೇತಿ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸಿದ ಸಂಸದರು ಈ ಸಮಸ್ಯೆಗಳ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದರು.

ತರಬೇತಿ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸಿದ ಸಂಸದರು ಈ ಸಮಸ್ಯೆಗಳ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದರು. ಬಳಿಕ ಸಂಬಂದಪಟ್ಟವರೊಂದಿಗೆ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಳೆದ ಬಾರಿ 275 ವಿಶ್ವಕರ್ಮ ಯೋಜನೆಯ ಟೂಲ್ಕಿಟ್ ವಿತರಣೆಯಾಗಿದೆ. ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಈ ಬಾರಿ 144 ಟೂಲ್ಕಿಟ್ ವಿತರಣೆಗೆ ಬಂದಿದೆ. ಇದನ್ನು ಸರಳ ಸಮಾರಂಭ ಮಾಡಿ ಸ್ಥಳೀಯ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ವಿತರಣೆ ಮಾಡುವಂತೆ ನಿರ್ಧರಿಸಲಾಯಿತು. ತರಬೇತಿ ಸಂಸ್ಥೆಗಳಿಗೆ ಹಣಪಾವತಿ ವಿಳಂಬದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಪಿಎಂಇಜಿಪಿ ಯೋಜನೆಯ ಸಮಸ್ಯೆಗಳನ್ನು ಚರ್ಚಿಸಿದ ಸಂಸದರು, 438 ಅರ್ಜಿಗಳ ಕ್ಲೈಂ ಆಗಿದೆ. 97 ಮಂದಿಗೆ ಮಾರ್ಜಿನ್ ಹಣ ಬಂದಿದೆ. 15.72 ಕೋಟಿ ರೂ. ಗಳ ಸಬ್ಸಿಡಿ ಮಂಜೂರಾಗಿದ್ದು, 2.95 ಕೋ. ರೂ ಹಣ ಬಂದಿದೆ. ಸುಮಾರು 13 ಕೋಟಿ ರೂ ಮಾರ್ಜಿನ್ ಹಣ ಬಾರದೇ ಇರುವುದರಿಂದ ಬ್ಯಾಂಕ್ಗಳು ಬಡ್ಡಿಯನ್ನು ಹಾಕುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು. 2021-22ನೇ ಸಾಲಿನಲ್ಲಿ ಆದೇಶವಾಗಿರುವ ಯೋಜನೆಗಳ ಥರ್ಡ್ಪಾರ್ಟಿ ಸರ್ವೆ ಸರಿಯಾಗಿ ಆಗಿಲ್ಲದೆ ಇರುವುದರಿಂದ ಹಣಬಿಡುಗಡೆಗೆ ತೊಡಕಾಗುತ್ತಿದೆ. ಈಗ ಅಂಚೆ ಇಲಾಖೆಗೆ ಈ ಜವಬ್ದಾರಿಯನ್ನು ನೀಡಲಾಗಿದೆ. ಈಗ ಅವರು ಅದನ್ನು ನಿರ್ವಹಣೆ ಮಾಡುತ್ತಿದ್ದಾರೆ. ಥರ್ಡ್ ಪಾರ್ಟಿ ಸರ್ವೆ ಬಳಿಕವೂ ಕೆಲವೊಂದು ಇಲಾಖೆಯಲ್ಲಿ ಮತ್ತೊಮ್ಮೆ ಸರ್ವೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸುತ್ತೇನೆ ಎಂದು ಸಂಸದರು ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಹಾಯಕ ನಿರ್ದೇಶಕ ಸೀತಾರಾಮ್ ಶೆಟ್ಟಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್, ಲೀಡ್ ಬ್ಯಾಂಕ್ನ ಪ್ರಬಂಧಕ ಹರೀಶ್ ಮೊದಲಾದವರು ಇದ್ದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb