ಉಡುಪಿ : ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆಯಾದ ವಿದ್ಯೋದಯ ಪ.ಪೂ. ಕಾಲೇಜಿನಲ್ಲಿ 2024-25ನೇ ಸಾಲಿನ ದ್ವಿ.ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸಿದ 7 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.

ಸಾಧನೆಗೈದ ವಿಜ್ಞಾನ ವಿಭಾಗದ ಶಾಂತಾ, ಈಶಾ, ಅನನ್ಯಾ ಸದಾಶಿವ ಶೆಟ್ಟಿಗಾರ್ (591 ಅಂಕಗಳೊಂದಿಗೆ 9ನೇ ಸ್ಥಾನ), 590 ಅಂಕಗಳೊಂದಿಗೆ 10ನೇ ರ್‍ಯಾಂಕ್ ಗಳಿಸಿದ ಗೌರಿ ಹಾಗೂ ವಾಣಿಜ್ಯ ವಿಭಾಗದಲ್ಲಿ 595 ಅಂಕಗಳೊಂದಿಗೆ 5ನೇ ಸ್ಥಾನ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪ್ರಣವಿ ಎಚ್. ಸುವರ್ಣ, 593 ಅಂಕಗಳೊಂದಿಗೆ 7ನೇ ಸ್ಥಾನ ಗಳಿಸಿದ ಮಹಮ್ಮದ್ ರಿಜಾನ್, 590 ಅಂಕಗಳೊಂದಿಗೆ 10ನೇ ಸ್ಥಾನ ಗಳಿಸಿದ ಆರುಷಿ ದಿನಕರ್ ಮೂಲ್ಕಿ, ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಕ ವಿಜ್ಞಾನ ವಿಷಯಗಳಲ್ಲಿ 100 ಅಂಕ ಗಳಿಸಿದ ದಿಶಾ ಡಿ. ಶೆಟ್ಟಿ ಅವರನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್. ನಾಗರಾಜ ಬಲ್ಲಾಳ್, ಕಾರ್ಯದರ್ಶಿ ಕೆ. ಗಣೇಶ್ ರಾವ್, ಕೋಶಾಧಿಕಾರಿ ಯು. ಪದ್ಮರಾಜ ಆಚಾರ್ಯ ಶುಭ ಹಾರೈಸಿದರು.
ಪ್ರಾಂಶುಪಾಲ ಸಂದೀಪ್ ಕುಮಾರ್ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು. ಪೋಷಕರು ಉಪಸ್ಥಿತರಿದ್ದರು.