ಶಂಕರನಾರಾಯಣ : ಬೆಳ್ವೆ ಸಮೀಪದ ಗುಮ್ಮಲ ಡ್ಯಾಂಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ಮೃತರನ್ನು ಸ್ಥಳೀಯ ನಿವಾಸಿಗಳಾದ ಶ್ರೀಶ(13) ಹಾಗೂ ಜಯಂತ್ (19) ಎಂದು ಗುರುತಿಸಲಾಗಿದೆ.
ಒಟ್ಟು ನಾಲ್ಕು ಮಂದಿ ಬಾಲಕರು ರಜೆಯ ಹಿನ್ನೆಲೆಯಲ್ಲಿ ಮನೆ ಸಮೀಪದ ಡ್ಯಾಂಗೆ ಈಜಲು ಹೋಗಿದ್ದರು. ಈ ವೇಳೆ ಶ್ರೀಶ ಹಾಗೂ ಜಯಂತ್ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

