ಉಡುಪಿ : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ 2024-25 ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಯೋಗಾಸನ ತಂಡವನ್ನು ಪ್ರತಿನಿಧಿಸಿದ ನಿರೀಕ್ಷಾ ಮತ್ತು ತನ್ವಿತಾ (ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಕುಂದಾಪುರ) ಪ್ರಥಮ ಸ್ಥಾನ ಹಾಗೂ ರಿಥಮಿಕ್ ಯೋಗದಲ್ಲಿ ತನುಶ್ರೀ ( ಸಂತ ಸಿಸಿಲಿ ಪ. ಪೂ ಕಾಲೇಜು ಉಡುಪಿ) ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
Tag:
Yoga Champions
ಅಂತರ್ ರಾಜ್ಯ ಯೋಗಾಸನ ಸ್ಪರ್ಧೆ : ಸುಷ್ಮಾ ಎರ್ಲಪಾಡಿ ಮತ್ತು ಅನನ್ಯ ಹೆರ್ಮುಂಡೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
by NewsDesk
written by NewsDesk
ಕಾರ್ಕಳ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜು. 14ರಂದು ಎಸ್.ಜಿ.ಎಸ್. ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಡೆದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಯರ್ಲಪಾಡಿ ಗ್ರಾಮದ ಸುಷ್ಮಾ ತೆಂಡುಲ್ಕರ್ ಹಾಗೂ ಹೆರ್ಮುಂಡೆ ಗ್ರಾಮದ ಅನನ್ಯ ಉತ್ತಮ 10 ಯೋಗಪಟುಗಳಲ್ಲಿ ಆಯ್ಕೆಯಾಗಿರುತ್ತಾರೆ. ಈ ಮೂಲಕ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಯೋಗ ಗುರುಗಳಾದ ಕೆ. ನರೇಂದ್ರ ಕಾಮತ್ ಮತ್ತು ಅಶೋಕ್ ಅವರಿಂದ ಯೋಗ ತರಬೇತಿ ಪಡೆದಿರುತ್ತಾರೆ.