ಮಣಿಪಾಲ : ಕೆಳಪರ್ಕಳದ ಬಳಿ ಎರಡು ಕಾರುಗಳು ಪರಸ್ಪರ ಢಿಕ್ಕಿಯಾಗಿ ನಗರಸಭೆಯ ನೀರಿನ ರೇಚಕದ ಬಳಿ ಇರುವ ಟ್ರಾನ್ಸ್ಫಾರ್ಮರ್ಗೆ ತಾಗಿ ನಿಂತ ಘಟನೆ ಮಂಗಳವಾರ ಸಂಭವಿಸಿದೆ.

ಒಂದು ಕಾರು ರೇಚಕದ ಪಕ್ಕದ ರಸ್ತೆಯಿಂದ ಬರುತ್ತಿದ್ದರೆ ಮತ್ತೊಂದು ಕಾರು ಮುಖ್ಯ ರಸ್ತೆಯಲ್ಲಿ ಬರುತ್ತಿತ್ತು ಎನ್ನಲಾಗಿದೆ. ಘಟನೆಯಿಂದಾಗಿ ಎರಡೂ ಕಾರುಗಳು ಜಖಂಗೊಂಡಿದ್ದು ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಭಾಗದಲ್ಲಿ ಈಗಾಗಲೇ ಹಲವಾರು ವಾಹನಗಳು ಢಿಕ್ಕಿಯಾಗಿ ಪಲ್ಟಿಯಾದ ಹಲವಾರು ಘಟನೆಗಳು ನಡೆದಿವೆ. ಅರ್ಧದಲ್ಲೇ ನಿಲ್ಲಿಸಿದ ಕಾಮಗಾರಿಯಿಂದಾಗಿ ಇಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಈ ಭಾಗದಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಕೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.