ಮಂಗಳೂರು : ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆ ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಾಜಪೇಯಿ ಅವರ ಜೀವನ ಸಂಸ್ಕರಣೆಯನ್ನು ನೆನೆಯುತ್ತಾ ಅಟಲ್ ಜಿ ಅವರು ಪ್ರಧಾನಿ ಆಗಿದ್ದ ಸಂಧರ್ಭದಲ್ಲಿ ತಾನು ಎನ್.ಸಿ.ಸಿ. ಯ ಕೆಡಿಟ್ ಆಗಿದ್ದಾಗ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಆಗ ಎರಡು ಮೂರು ನಿಮಿಷಗಳ ಕಾಲ ಅವರನ್ನು ಹತ್ತಿರದಿಂದ ಕಾಣುವ ಸುಸಂಧಂರ್ಭ ಒದಗಿಬಂದಿತ್ತು. ಆಗಲೇ ಅವರ ಆ ವರ್ಚಸ್ಸು ನನ್ನ ಮೇಲೆ ಅಗಾಧ ಪ್ರಭಾವವನ್ನು ಬೀರಿತ್ತು. ದೇಶಕ್ಕಾಗಿ ನಾನು ಸೇವೆ ಮಾಡಬೇಕೆಂಬ ಹಂಬಲ ಮೂಡಿತ್ತು ಎಂದು ಆ ಕ್ಷಣಗಳನ್ನು ಕಣ್ತುಂಬಿಕೊಂಡು ನೆನೆದರು.
ಹಾಗೇಯೇ ಬಿಜೆಪಿಯ ಹಿರಿಯರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮೋನಪ್ಪ ಭಂಡಾರಿಯವರು ಮಾತನಾಡುತ್ತಾ ವಾಜಪೇಯಿ ಅವರು ಅಜಾತಶತ್ರು ಆಗಿದ್ದರು ವಿರೋಧಿಗಳು ಕೂಡಾ ಅಟಲ್ ಅವರನ್ನು ಒಪ್ಪಿಕೊಳ್ಳುತ್ತಿದ್ದರು. ಅತೀ ಕಿರಿಯ ಸದಸ್ಯರಾಗಿ ಮೊದಲು ಸಂಸತ್ತು ಪ್ರವೇಶಿಸಿದ ಅಟಲ್ ಅವರ ಮಾತುಗಳನ್ನು ಕೇಳಿದ ಅಂದಿನ ಪ್ರಧಾನಿ ನೆಹರೂರವರು ಅಟಲ್ಜಿ ಮುಂದೊಂದು ದಿನ ಭಾರತದ ಪ್ರಧಾನಿ ಆಗುತ್ತಾರೆ ನೋಡಿ ಎಂದು ಭವಿಷ್ಯ ನುಡಿದ್ದಿದ್ದರು. ಪ್ರಧಾನಿಯಾದ ಸಂಧರ್ಭದಲ್ಲಿ ಫೋಖರಣ್ ಅಣು ಬಾಂಬ್ ಪರೀಕ್ಷೆ, ಕಾರ್ಗಿಲ್ ಯುದ್ಧವನ್ನು ನಿಭಾಯಿಸಿ ಜಯಿಸಿದ ಬಗೆ, ಜಗತ್ತಿನ ಅನೇಕ ದೇಶಗಳ ಆರ್ಥಿಕ ನಿರ್ಬಂಧಗಳನ್ನು ನಿಭಾಯಿಸಿದ್ದು. ಟೆಲಿಕಾಂ ಕ್ಷೇತ್ರದಲ್ಲಿ ಇರಬಹುದು, ಸುವರ್ಣ ಚತುಷ್ಪಥ ರಸ್ತೆ, ಸರ್ವ ಶಿಕ್ಷಾ ಅಭಿಯಾನ ಇಂತಹ ಅನೇಕ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಅಗಣಿತ ಸಾಧನೆಗಳನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿಯಾದ ಪ್ರೇಮಾನಂದ ಶೆಟ್ಟಿಯವರು, ಉಪಾಧ್ಯಕ್ಷೆ ಶ್ರೀಮತಿ ಪೂಜಾ ಪೈ, ಮನಪಾ ಸದಸ್ಯರಾದ ಕಿರಣ್ ಕೋಡಿಕಲ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಅರುಣ್ ಜಿ. ಶೇಟ್, ಸಂದ್ಯಾ ವೆಂಕಟೇಶ್, ಶಾಹನಾಜ್, ಮುರಳೀ ಎಚ್.ಎಚ್., ಗುರುಚರಣ್, ಪ್ರದೀಪ್, ಅವಿನಾಶ್, ಘನಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.