ಮಲ್ಪೆ : ಚಂಡಮಾರುತ ಪ್ರಭಾವದಿಂದ ಭಾರೀ ಮಳೆಗೆ ಮಲ್ಪೆಯ ಸಿಟಿ ಸೆಂಟರ್ ಬಿಲ್ಡಿಂಗ್ನ ಕೆಳಮಹಡಿಗೆ ನೀರು ನುಗ್ಗಿದ್ದು ಅಂಗಡಿಯವರು ಪರದಾಡಿದ ಪ್ರಸಂಗ ನಡೆಯಿತು.

ವರ್ಷಂಪ್ರತಿ ತೆರಿಗೆ ಪಡೆಯುವ ನಗರ ಸಭೆ, ಮಳೆ ನೀರು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ನಗರಸಭೆಯವರು ಮಳೆ ನೀರು ಹೋಗುವ ಪೈಪ್ ಲೈನ್ ಹಾಗೂ ಚರಂಡಿಯನ್ನು ಬಂದ್ ಮಾಡಿ ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಳೆ ನೀರು ಕಟ್ಟಡದ ನೆಲ ಮಹಡಿಯಲ್ಲಿರುವ ಅಂಗಡಿಗಳ ಒಳಗೆ ನುಗ್ಗಿದ್ದರಿಂದ ಅಂಗಡಿಯವರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಒಂದು ವೇಳೆ ಮಳೆ ಹೀಗೇ ಮುಂದುವರೆದರೆ ಪೂರ್ತಿ ಕಟ್ಟಡಕ್ಕೆ ಹಾನಿಯಾಗಿ ಜೀವ ಹೋಗುವ ಸಂಭವವಿದೆ. ನಗರಸಭೆ ಆದಷ್ಟು ಬೇಗ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅಂಗಡಿಯವರು ಒತ್ತಾಯ ಮಾಡಿದ್ದಾರೆ.

