ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಗಳೂರು ವತಿಯಿಂದ ನಡೆದ ಬಂಟ ಕ್ರೀಡೋತ್ಸವ- 2024 ದಲ್ಲಿ, ತ್ರೋಬಾಲ್ ಪಂದ್ಯಾಟದಲ್ಲಿ ಕಾರ್ಕಳ ಬಂಟರ ಸಂಘ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
Throwball Champions
ತ್ರೋಬಾಲ್ ಪಂದ್ಯಾಟದಲ್ಲಿ ಪಾಜಕ ಆನಂದತೀರ್ಥ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ
ಉಡುಪಿ : ಉಡುಪಿ ಜಿಲ್ಲಾ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲಾ ಸಂಘಟನೆಯ (ಐಕ್ಸ್) (ಆಲ್ ಇಂಡಿಯಾ ಕೌನ್ಸಿಲ್ ಆಫ್ ಸ್ಪೋಟ್ಸ್) ವತಿಯಿಂದ ಉಡುಪಿಯ ಸೇಂಟ್ ಸಿಸಿಲಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ಪಾಜಕ ಅನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದು, 17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ, 14 ವರ್ಷ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ, ಹಾಗೂ ಇದೇ ವಿಭಾಗದ ಬಾಲಕೀಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಜಾಂಪಿಯನ್ ಸ್ಥಾನ ಪಡೆದಿರುತ್ತಾರೆ.
17 ವರ್ಷ ವಯೋಮಾನದಲ್ಲಿ ಬೆಸ್ಟ್ ರಿಸೀವರ್ ಆಗಿ ಸಂಗಮೇಶ್, ಬೆಸ್ಟ್ ಸರ್ವರ್ ಆಗಿ ಅನಿರುದ್ಧ ಜೋಷಿ, 14 ವರ್ಷದ ವಯೋಮಾನದಲ್ಲಿ ಬಾಲಕರ ವಿಭಾಗದಲ್ಲಿ ಆಲ್ರೌಂಡರ್ ಆಗಿ ಅನೀಶ್, ಬಾಲಕೀಯರ ವಿಭಾಗದಲ್ಲಿ ಧನುಶ್ರೀ ವಯಕ್ತಿಕ ಪ್ರಶಸ್ತಿ ಪಡದರು.
ಉಡುಪಿ ಜಿಲ್ಲೆಯ ಸುಮಾರು 20 ಶಾಲೆಗಳು ಪಾಲ್ಗೊಂಡಿದ್ದ ಈ ಕ್ರೀಡಾ ಕೂಟದಲ್ಲಿ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ, ಕಲ್ಮೇಶ್, ಸುಮನಾ, ಸಚಿನ್, ಮಮತಾ, ದುರ್ಗಪ್ಪ ಹಾಗೂ ವಿದ್ಯಾಲಯ ಪ್ರಾಂಶುಪಾಲೆ ಡಾ. ಗೀತಾ ಶಶಿದರ್ ಹಾಗೂ ಕ್ರೀಡೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ.
ಬೆಳ್ಮಣ್ ವೃತ್ತ ಮಟ್ಟದ ಬಾಲಕಿಯರ ತ್ರೋಬಾಲ್ ಪಂದ್ಯಾಟ : ಕಲಂಬಾಡಿ ಪದವು ಶಾಲಾ ತಂಡಕ್ಕೆ ಪ್ರಥಮ ಸ್ಥಾನ
ಕಾರ್ಕಳ : ಬೆಳ್ಮಣ್ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಕಲಂಬಾಡಿ ಪದವು ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದಿದೆ.
ಟ್ರೋಫಿಯೊಂದಿಗೆ ಆಗಮಿಸಿದ ಶಾಲಾ ವಿದ್ಯಾರ್ಥಿನಿಯರ ತಂಡವನ್ನು ಎಸ್ಡಿಎಂಸಿ ಅಧ್ಯಕ್ಷೆ ಸಂಗೀತ ಆಚಾರ್ಯ, ಉಪಾಧ್ಯಕ್ಷರಾದ ಜಯಂತ್ ನಾಯಕ್, ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ದಯಾನಂದ ನಾಯಕ್, ಉಪಾಧ್ಯಕ್ಷರಾದ ಆಶಾಮೂಲ್ಯ, ಎಸ್ಡಿಎಂಸಿ ಸದಸ್ಯರಾದ ರಾಜೇಶ್ ಆಚಾರ್ಯ, ದಿನೇಶ್ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಬಿ ಸ್ವಾಗತಿಸಿ ಅಭಿನಂದಿಸಿದರು.
ಶಿಕ್ಷಕರಾದ ವಿಜಯಲಕ್ಷ್ಮಿ ಸ್ವಾಗತಿಸಿದರು. ನಮಿತಾ ಕಾರ್ಯಕ್ರಮ ನಿರೂಪಿಸಿದರು. ಆಶಾ ವಂದಿಸಿದರು.