ಮಂಗಳೂರು : ಬಂದರಿನ ದಕ್ಷಿಣ ಮೀನುಗಾರಿಕೆ ದಕ್ಕೆಯ ನೀರಿನ ಟ್ಯಾಂಕ್ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್ ಕಳವಾಗಿದೆ.
ಮೀನು ಅನ್ಲೋಡಿಂಗ್ ಕೆಲಸ ಮಾಡುವ ಮಂಜುನಾಥ ಗಾಲಪ್ಪನವರ್ ಎಂಬವರು ತಮ್ಮ ಸುಜುಕಿ ಆ್ಯಕ್ಸೆಸ್ ಸ್ಕೂಟರ್ ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು, ವಾಪಸ್ ಬಂದು ನೋಡುವಾಗ ಸ್ಕೂಟರ್ ಪಾರ್ಕ್ ಮಾಡಿದ ಸ್ಥಳದಲ್ಲಿ ಇರಲಿಲ್ಲ.
ಕಳವಾದ ಸ್ಕೂಟರ್ ಮೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.