ಮಲೈ : ಕೊಡವೂರು ಗ್ರಾಮದ ಪಾಳೆಕಟ್ಟೆಯ ನಿವಾಸಿ ಪ್ರಸಾದ್(40) ಅವರ ಮೃತದೇಹವು ಮನೆಯ ನೀರು ತುಂಬಿಸಿಟ್ಟ ಪ್ಲಾಸ್ಟಿಕ್ ಡ್ರಮ್ ನೊಳಗೆ ಸೊಂಟದಿಂದ ಮೇಲ್ಬಾಗ ಹೊರಗೆ ಚಾಚಿಕೊಂಡು ಮೇಲ್ಮುಖವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಕುತ್ತಿಗೆ ಮತ್ತು ಮುಖದಿಂದ ರಕ್ತ ಸೋರುತ್ತಿದ್ದು ಮುಖ ಊದಿಕೊಂಡಿದೆ. ಇವರಿಗೆ ವಿಪರೀತ ಮದ್ಯಪಾನ ಮಾಡುವ ಚಟವಿತ್ತೆನ್ನಲಾಗಿದೆ. ಎರಡು ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಅವರ ಮೃತದೇಹ ಕಂಡುಬಂದಿರುವ ಸ್ಥಿತಿ ಹಲವು ಅನುಮಾನಗಳಿಗೆ ಎಡೆಮಾಡಿದ್ದು ಮಲ್ಪೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

