ಉಡುಪಿ : ಜಿಲ್ಲೆಯಲ್ಲಿ ಸೋಮವಾರ ಸಂಜೆ ದಿಢೀರ್ ಸುರಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 26 ಮನೆಗಳು ಭಾಗಶಃ ಹಾನಿಯಾಗಿದ್ದು 15.76 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಮೆಸ್ಕಾಂಗೆ ಸರಿ ಸುಮಾರು 53 ಲಕ್ಷ ಹಾಗೂ 15 ಸಾವಿರ ಬೆಳೆ ಹಾನಿಯಾಗಿದೆ.
ಕಾರ್ಕಳದಲ್ಲಿ 14.3 ಮಿ.ಮೀ, ಉಡುಪಿಯಲ್ಲಿ 4.6 ಮಿ.ಮೀ, ಬೈಂದೂರಿನಲ್ಲಿ 0.9ಮಿ.ಮೀ, ಕಾಪು, ಬ್ರಹ್ಮಾವರದಲ್ಲಿ ತಲಾ 6.8ಮಿ.ಮೀ, ಹೆಬ್ರಿಯಲ್ಲಿ 12.8 ಮಿ.ಮೀ. ಹಾಗೂ ಕುಂದಾಪುರದಲ್ಲಿ 1.7 ಮಿ.ಮೀ ಮಳೆಯಾಗಿದೆ.
ಉಡುಪಿ ತಾಲೂಕಿನ 2 ಮನೆಗೆ ಪೂರ್ಣ ಹಾನಿಯಾಗಿದ್ದು 9 ಮನೆಗೆ ಭಾಗಶಃ ಹಾನಿಯಾಗಿದೆ. ಪೂರ್ಣ ಹಾನಿಯಾದ 2 ಮನೆಗೆ ತಲಾ 5 ಲಕ್ಷ, ಭಾಗಶಃ ಹಾನಿಯಾದ 9 ಮನೆಗಳಲ್ಲಿ 7 ಮನೆಗೆ ತಲಾ 15 ಸಾವಿರ, ಒಂದು ಮನೆಗೆ 45 ಸಾವಿರ ಹಾಗೂ ಇನ್ನೊಂದು ಮನೆಗೆ 10 ಸಾವಿರ ನಷ್ಟ ಆಗಿರುವ ಬಗ್ಗೆ ಅಂದಾಜಿಸಲಾಗಿದೆ.
ಕುಂದಾಪುರ ತಾಲೂಕಿನ 6 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 5 ಮನೆಗೆ ತಲಾ 10 ಸಾವಿರ ಹಾಗೂ ಒಂದು ಮನೆಗೆ 15 ಸಾವಿರ ಹಾನಿ ಅಂದಾಜಿಸಲಾಗಿದೆ. ಕಾಪು ತಾಲೂಕಿನ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಇದರಲ್ಲಿ ಒಂದು ಮನೆಗೆ 1 ಲಕ್ಷ, 2 ಮನೆಗೆ ತಲಾ 30 ಸಾವಿರ, ಒಂದು ಮನೆಗೆ 35 ಸಾವಿರ ಹಾಗೂ ಇನ್ನೊಂದು ಮನೆಗೆ 25 ಸಾವಿರ ನಷ್ಟ ಅಂದಾಜಿಸಲಾಗಿದೆ. ಬ್ರಹ್ಮಾವರ ತಾಲೂಕಿನ ಒಂದು ಮನೆಗೆ ಭಾಗಶಃ ಹಾನಿಯಾಗಿದ್ದು 25 ಸಾವಿರ, ಬೈಂದೂರು ತಾಲೂಕಿನ ಒಂದು ಮನೆಯ ಗೋಡೆ ಒಡೆದು ವಿದ್ಯುತ್ ಉಪಕರಣ ಹಾಳಾಗಿರುವುದಕ್ಕೆ 8 ಸಾವಿರ ನಷ್ಟ ಅಂದಾಜಿಸಲಾಗಿದೆ.
ಕಾರ್ಕಳ ತಾಲೂಕಿನ 4 ಮನೆಗೆ ಭಾಗಶಃ ಹಾನಿಯಾಗಿದ್ದು ಒಂದು ಮನೆಗೆ 48 ಸಾವಿರ, ಇನ್ನೊಂದು ಮನೆಗೆ 30 ಸಾವಿರ, ಮತ್ತೊಂದು ಇನ್ನೊಂದು ಮನೆಗೆ 10 ಸಾವಿರ ಹಾಗೂ ಇನ್ನೊಂದು ಮನೆಗೆ 5 ಸಾವಿರ ನಷ್ಟ ಆಗಿರುವುದಾಗಿ ಅಂದಾಜಿಸಲಾಗಿದೆ. ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಕೃಷಿ ತೋಟಕ್ಕೆ ಮಳೆಯಿಂದ 15 ಸಾವಿರ ರೂ.ಗಳ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.