ಉಡುಪಿ : ಉಡುಪಿಯಲ್ಲಿ ರಾಘವೇಂದ್ರ ಮಠದ ಯಾತ್ರಿಕರ ವಸತಿ ನಿಲಯದ ಶಂಕುಸ್ಥಾಪನೆಗಾಗಿ ಆಗಮಿಸಿದ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರನ್ನು ಕೃಷ್ಣಮಠದಲ್ಲಿ ಸಾಂಪ್ರದಾಯಿಕವಾಗಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿಲಾಯಿತು. ಮಂತ್ರಾಲಯ ಶ್ರೀಗಳು ಕೃಷ್ಣನ ದರ್ಶನ ಪಡೆದರು.
ಈ ಸಂದರ್ಭ ಗೀತಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರಾಲಯ ಶ್ರೀಗಳಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಮತ್ತು ಕಿರಿಯಪಟ್ಟ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಸಾಂಪ್ರದಾಯಿಕ ಗಂಧೋಪಚಾರ ಮಾಲಿಕೆ ಮಂಗಳಾರತಿ ಮಾಡಿ ಮಠದ ಗೌರವ ಸಲ್ಲಿಸಿದರು. ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಬಳಿಕ ಮಂತ್ರಾಲಯ ಮಠದ ವತಿಯಿಂದ ಉಡುಪಿ ರಥಬೀದಿ ಪರಿಸರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯಾತ್ರಿಕರ ನೂತನ ವಸತಿ ನಿಲಯಕ್ಕೆ ಮಂತ್ರಾಲಯ ಶ್ರೀಪಾದರ ಅಪೇಕ್ಷೆಯಂತೆ ಪರ್ಯಾಯ ಪುತ್ತಿಗೆ ಹಿರಿಯ ಶ್ರೀಪಾದರು ತಮ್ಮ ಶಿಷ್ಯರೊಂದಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.