ಉಡುಪಿ : ತಿರ್ಥಹಳ್ಳೀಯ ನ್ಯಾಶನಲ್ ಸ್ಮ್ಯಾಶರ್ಸ್ ತಂಡವು ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಮಲ್ಪೆ ಇವರ ವತಿಯಿಂದ ಉಡುಪಿ ಅಜ್ಜರಕಾಡು ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟದ ಚಾಂಪಿಯನ್ಶಿಪ್ ತನ್ನದಾಗಿಸಿಕೊಂಡಿತು. ಮುಲ್ಶಿ ಕೋಸ್ಟಲ್ ಸ್ಮ್ಯಾಶರ್ಸ್ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ರ್ಯಾಂಕಿಂಗ್ ಆಟಗಾರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಬ್ಯಾಂಡ್ಮಿಂಟನ್ ಆಟಗಾರರು ಭಾಗವಹಿಸಿದ್ದ ಪಂದ್ಯಾಟದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಒಟ್ಟು 10 ತಂಡಗಳಲ್ಲಿ 150ಕ್ಕೂ ಅಧಿಕ ಆಟಗಾರರರು ಭಾಗವಹಿಸಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಮಲ್ಪೆ ಇದರ ಅಧ್ಯಕ್ಷರಾದ ಕೇಶವ ಕೊಟ್ಯಾನ್, ಉದ್ಯಮಿ ವಿನೀತ್ ಅಮೀನ್, ಸುಧೀರ್ ಶೆಟ್ಟಿ, ಅಭಿಜಿತ್ ಕೋಟ್ಯಾನ್, ಅಕ್ಷಯ್ ಶೇಠ್, ಅಭಿನಂದನ್ ಕೋಟ್ಯಾನ್, ಲಾಲ್ ಸಚಿನ್, ರಾಹುಲ್ ಶೆಟ್ಟಿ, ಆಕೃತಿ ಪೂಜಾರಿ, ಮನೀಶ್ ಪೂಜಾರಿ, ದೀಕ್ಷಿತ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.