ಉಡುಪಿ : ನಗರ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಮೋಟಾರ್ ಸೈಕಲ್ನ್ನು ಜಪ್ತಿ ಮಾಡಿ, ದಂಡವನ್ನು ವಿಧಿಸಿ ಮೋಟಾರ್ ಸೈಕಲ್ಲಿನ ಸೈಲೆನ್ಸರನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಶೋಕಿಗಾಗಿ ಕರ್ಕಶ ಸೈಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ.
