ಉಡುಪಿ : ಭಾದ್ರಪದದ ಹುಣ್ಣಿಮೆ ಈ ವರ್ಷದ ಸುಂದರ ಹುಣ್ಣಿಮೆ. ಇಂದೇ ಸೂಪರ್ಮೂನ್. ಈ ವರ್ಷದ ನಾಲ್ಕು ಸೂಪರ್ ಮೂನ್ ಹುಣ್ಣಿಮೆಗಳಲ್ಲಿ ಈ ತಿಂಗಳಿನ ಸೂಪರ್ಮೂನ್ ಹುಣ್ಣಿಮೆ ಭವ್ಯವಾದುದು. ಏಕೆಂದರೆ ಈ ಬಾರಿ, ಚಂದ್ರ ಭೂಮಿಗೆ ಅತೀ ಸಮೀಪ 3ಲಕ್ಷದ 57 ಸಾವಿರದ 485 ಕಿಮೀಗೆ ಬಂದು ದೊಡ್ಡದಾಗಿ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುವನು. ಇದು ಈ ವರ್ಷದಲ್ಲೇ ಅತೀ ಸಮೀಪ ದೂರ. ಹಾಗಾಗಿ ಮಂಗಳವಾರ ರಾತ್ರಿ ಹುಣ್ಣಿಮೆ ಬೆಳ್ಳಂಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಬಹುದು ಎಂದು ಉಡುಪಿಯ ವಿಜ್ಞಾನಿ ಡಾ ಎ ಪಿ ಭಟ್ ಮಾಹಿತಿ ನೀಡಿದ್ದಾರೆ.
Tag:
Science
ವಿಜ್ಞಾನ ವಿಚಾರಗೋಷ್ಠಿ : ಸಾಣೂರು ಪ್ರೌಢಶಾಲೆಯ ಕಾರ್ತಿಕ್ ರಾಜ್ಯಮಟ್ಟಕ್ಕೆ ಆಯ್ಕೆ
by NewsDesk
written by NewsDesk
ಕಾರ್ಕಳ : ಕಮಲ ಬಾಯಿ ಪ್ರೌಢಶಾಲೆ ಕಡಿಯಾಳಿ ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಕಾರ್ಕಳ ಸಾಣೂರು ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.
ಶಾಲೆಯ ವಿಜ್ಞಾನ ಶಿಕ್ಷಕಿ ಅನಿತಾ ರೀಟಾ ಇವರಿಗೆ ಮಾರ್ಗದರ್ಶನ ನೀಡಿರುತ್ತಾರೆ.