ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯವರು, ಮಂಗಳ ಜ್ಯೋತಿ ಸಮಗ್ರ ಪ್ರೌಢಶಾಲೆ ವಾಮಂಜೂರು ಇಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರೌಢಶಾಲಾ 17ರ ವಯೋಮಾನದ ಬಾಲಕಿಯರ ವಿಭಾಗದ 34 ಕೆಜಿ ದೇಹ ತೂಕದ ಕರಾಟೆ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಕಟೀಲು ಇಲ್ಲಿನ ವಿದ್ಯಾರ್ಥಿನಿ ಸಮೃದ್ಧಿ ಎ ಶೆಟ್ಟಿ ಇವರು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಮೃದ್ಧಿ ಎ ಶೆಟ್ಟಿ ಮೂರು ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಒಂದು ವರ್ಷ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿರುವ ಕಟೀಲಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾಳೆ.