ಬೈಂದೂರು : ಇಲ್ಲಿನ ಒತ್ತಿನೆಣೆ ತಿರುವಿನಲ್ಲಿ ಸಿಮೆಂಟ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಝಾರ್ಖಂಡ್ ಮೂಲದ ಚಾಲಕ ದಾಮೋದರ ಯಾದವ್ (55) ಮೃತಪಟ್ಟವರು.
ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
