ಉಡುಪಿ : ಉಡುಪಿ ಜಿಲ್ಲೆ ಒಂದು ಉತ್ತಮ ಪ್ರವಾಸಿ ಕೇಂದ್ರವಾಗಿದ್ದು, ಇಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅವರ ಸುರಕ್ಷತೆಗಾಗಿ ಸರಕಾರದಿಂದ ತಿಳಿಸಲಾದ ಸೂಚನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮಾರ್ಚ್ 20ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಹೋಮ್ಸ್ಟೇ, ರೆಸಾರ್ಟ್ಸ್, ಹೌಸ್ಬೋಟ್, ಪ್ರವಾಸಿ ಬೋಟ್, ಕಯಾಕ್ (ನೊಂದಾಯಿತ ಹಾಗೂ ನೊಂದಣಿಗೊಳ್ಳದ) ಮಾಲಕರ ಸಭೆಯೊಂದನ್ನು ಕರೆಯಲಾಗಿದೆ.
ಈ ಸಭೆಗೆ ಎಲ್ಲಾ ಹೋಮ್ಸ್ಟೇ, ರೆಸಾರ್ಟ್ಸ್, ಹೌಸ್ ಬೋಟ್, ಪ್ರವಾಸಿ ಬೋಟ್, ಕಯಾಕ್ ಮಾಲಕರು ತಪ್ಪದೇ ಹಾಜರಾಗುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.