ಮಂಗಳೂರು : ‘ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರಃ ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧಕ್ಕಾಗಿ ವಾಣಿಜ್ಯ ವಿಭಾಗದ ಸಂಶೋಧಕ ರಾಘವೇಂದ್ರ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಆಫ್ ಫಿಲಾಸಫಿ (ಪಿಎಚ್ಡಿ) ಪದವಿ ನೀಡಿದೆ. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ನಿವೃತ್ತ ಸಹ ಪ್ರಾಧ್ಯಾಪಕ ಉದಯಕುಮಾರ್ ಎಂ.ಎ, ಸಂಶೋಧಕರಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ.
Research Success
ಉಡುಪಿ : ಮಾಹೆಯಲ್ಲಿ ಮೆಟೀರಿಯಲ್ ಸೈನ್ಸ್ ವಾಹಿನಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪಿ.ಎಚ್.ಡಿ. ಅಧ್ಯಯನ ನಡೆಸಿದ ಬೆಳ್ಮಣ್ಣಿನ ಸೌರಭ್ ತಂತ್ರಿ ಡಾಕ್ಟರೇಟ್ ಪದವಿಗೆ ಭಾಜರಾಗಿದ್ದಾರೆ.
ಬೆಳ್ಮಣ್ಣಿನ ನಡಿಗುತ್ತು ತಂತ್ರಿ ಕುಟುಂಬದ ಸತೀಶ್ ತಂತ್ರಿ ಹಾಗೂ ಲಕ್ಷ್ಮಿ ತಂತ್ರಿಯವರ ಪುತ್ರರಾಗಿರುವ ಇವರು ಬಂಟಕಲ್ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್. ಪದವಿ ಪಡೆದು ಮಾಹೆಯಲ್ಲಿ ಎಂ.ಟೆಕ್. ಪಡೆದ ನಂತರ ಪಿ.ಎಚ್.ಡಿ. ಅಧ್ಯಯನವನ್ನು ನಡೆಸುತ್ತಿದ್ದರು.
ಸಿಂಥೆಸಿಸ್ ಅಂಡ್ ಕ್ಯಾರಕ್ಟರೈಸೇಫನ್ ಆಫ್ ಮೋಡಿಫೈಡ್ ಟಿ೬-ಎಎ೭೦೭೫ ಮ್ಯಾಟಿಕ್ಸ್ ಬೇಸಡ್ ಗ್ರಾನೈಟ್ ಪೌಡರ್ ಅಂಡ್ ಸಿಲಿಕಾನ್ ನೈಟ್ರೆಂಡ್ ಪರ್ಟಿಕ್ಯುಲೇಟ್ಸ್ ರೀ ಇನ್ಪ್ಲೋರ್ಸ್ಡ್ ಕಾಂಪೋಸಿಟ್ಸ್ ಎಂಬ ವಿಷಯದ ಕುರಿತು ಡಾ. ಶಿವಪ್ರಕಾಶ್ ವೈ.ಎಂ. ಅವರ ಮಾರ್ಗದರ್ಶನದಲ್ಲಿ ಡಾ. ಗುರುಮೂರ್ತಿ ಬಿ.ಎಂ. ಅವರು ರಿಸರ್ಚ್ ಕೋ ಗೈಡ್ ಆಗಿದ್ದು ಡಾ. ಸೌರಭ್ ತಂತ್ರಿಯವರು ಅಧ್ಯಯನ ನಡೆಸಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಮಾಹೆಗೆ ಸಲ್ಲಿಸಿದರು.
ಉಡುಪಿ : ಕೊಡವೂರು ನಿವಾಸಿಯಾದ ಪೂಜಾ ಗೋಪಾಲ್ ಪೂಜಾರಿಯವರು ಡಿಪಾರ್ಟ್ಮೆಂಟ್ ಆಫ್ ಫಾರ್ಮಸಿ ಪ್ರಾಕ್ಟೀಸ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್, ಮಾಹೆ ಮಾಣಿಪಾಲದ ಸಹ ಪ್ರಾಧ್ಯಾಪಕರಾದ ಡಾ. ಗಿರೀಶ್ ತುಂಗ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವಲಪ್ಮೆಂಟ್ ಆಫ್ ಸ್ಟ್ರಾಟೆಜಿ ಟು ಇಂಪ್ರೂವ್ ದಿ ರೇಟ್ ಆಫ್ ಮೆಟಾಬಾಲಿಕ್ ಮಾನಿಟರಿಂಗ್ ಪೇಶೆಂಟ್ಸ್ ಆನ್ ಆಂಟಿಸೈಕೋಟಿಕ್ ಮೆಡಿಕೇಷನ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರಧಾನ ಮಾಡಿದೆ.
ಪೂಜಾ ಗೋಪಾಲ್ ಪೂಜಾರಿ ಲಲಿತಾ ಹಾಗು ಗೋಪಾಲ್ ಪೂಜಾರಿ ಇವರ ಪುತ್ರಿ.
ಉಡುಪಿ : ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವಾರಿಜ ಅವರು ಮಂಡಿಸಿದ ಜಾಬ್ ಅಟ್ಟಿಟ್ಯೂಡ್ ಅಮಾಂಗ್ ಔಟ್ಸೋರ್ಸ್ಡ್ ಎಂಪ್ಲಾಯಿಸ್ ಇನ್ ಗವರ್ನಮೆಂಟ್ ಡಿಪಾರ್ಟ್ಮೆಂಟ್ – ಆ ಸ್ಟಡಿ ವಿಥ್ ರಿಫೆರೆನ್ಸ್ ಟು ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಂಗಳೂರು ವಿ. ವಿ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಇವರು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರಿನ ನಿವೃತ್ತ ಪ್ರಾಂಶುಪಾಲೆ ಡಾ. ಅನಸೂಯ ರೈ ರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ.