ಉಡುಪಿ : ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿರುವ ಮಾಜಿ ಶಾಸಕರು ಕೆಲ ಹಿಂದೂ ವಿರೋಧಿ ಶಕ್ತಿಗಳ ಆಟಕ್ಕೆ ಗೊಂಬೆಯಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಖಂಡ ಹಿಂದೂರಾಷ್ಟ್ರದ ಕಲ್ಪನೆಗೆ ಮಗ್ಗಲ ಮುಳ್ಳಾಗಿರುವ ಗೋ ಭಕ್ಷಕರನ್ನು ದೇವಸ್ಥಾನದ ಪ್ರಾಂಗಣದೊಳಕ್ಕೆ ಕರೆಸಿ ದೇವಸ್ಥಾನದ ಪಾವಿತ್ರ್ಯ ತೆಯನ್ನು ಅಶುದ್ದಿ ಗೊಳಿಸಿರುವಿರಿ. ಹಿಂದೂ ಸಮಾಜದ ಬೆಂಬಲದಿಂದಲೇ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ ತಾವು ಅಧಿಕಾರದಲಿದ್ದಾಗ ಹಿಂದೂ ಫೈರ್ ಬ್ರಾಂಡ್ ತರ ನಡೆದುಕೊಳ್ಳುತ್ತಿದ್ದ ತಾವು ಇತ್ತೀಚಿನ ದಿನಗಳ ನಿಮ್ಮ ಕಾರ್ಯವೈಖರಿ ಅನುಮಾನ ಹುಟ್ಟಿಸುವಂತಿದೆ. ಇನ್ನಾದರೂ ಬುದ್ಧಿಕಲಿತು ವೆಂಕಟರಮಣನ ಶಾಪಕ್ಕೆ ತುತ್ತಾಗದೆ ದೇವಸ್ಥಾನ ಶುದ್ಧೀಕರಿಸಿ ಹಿಂದೂ ಸಮಾಜದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಿ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಪೂಜಾರಿ ಆಗ್ರಹಿಸಿದ್ದಾರೆ.
Religious Politics
ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ : ಹರಿಪ್ರಕಾಶ್ ಕೋಣೆಮನೆ
ಉಡುಪಿ : ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬರೇ ಮುಖವಾಡ ಮಾತ್ರ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ವಾಗ್ಧಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲುತೂರಾಟ, ಪೆಟ್ರೋಲ್ ಬಾಂಬ್ ಎಸೆದು ಹಿಂದೂಗಳ ಅಂಗಡಿಗಳನ್ನು ಭಸ್ಮ ಮಾಡಲಾಗಿದೆ. ಗೃಹ ಸಚಿವರು ಈ ಘಟನೆಯನ್ನು ಅಕಸ್ಮಿಕ ಎಂದು ಹೇಳಿದ್ದಾರೆ. ಇದು ಅತ್ಯಂತ ಹೇಡಿತನ ಹಾಗೂ ನಾಚಿಕೆಗೇಡಿನ ಹೇಳಿಕೆ. ಮೆರವಣಿಗೆಯ ವೇಲೆ ಒಬ್ಬನೇ ಒಬ್ಬ ಪೊಲೀಸ್ ಪೇದೆ ಇರಲಿಲ್ಲ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಘಟನೆ ನಡೆದರೂ ಸಹ ಬಂದೋಬಸ್ತ್ ಮಾಡಿರಲಿಲ್ಲ, ಯಾವ ಸ್ಥಳದಿಂದ ಮೆರವಣಿಗೆ ಹೋಗಬೇಕೆಂದು ಪೊಲೀಸರ ಬದಲಾಗಿ ಜಿಹಾದಿಗಳು ನಿರ್ಧರಿಸುವ ಮಟ್ಟಿಗೆ ಈ ಸರಕಾರ ಅಧೋಗತಿಗೆ ತಲುಪಿದೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ ಮುಖವಾಡ ಮಾತ್ರ, ಸರಕಾರವನ್ನು ಜಿಹಾದಿಗಳು ಹಾಗೂ ಮತೀಯವಾದಿಗಳು ನಡೆಸುತ್ತಿದ್ದಾರೆ. ಅಂಗಡಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ವಿದೇಶದಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ನೆಹರೂ-ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ನ ಮಾನಸಿಕತೆ ಇವತ್ತು ಎಲ್ಲರ ಮುಂದೆ ಬೆತ್ತಲಾಗಿದೆ. ಮೀಸಲಾತಿ ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಅದ್ದರಿಂದ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ, ಜನಾಂದೋಲನ ರೂಪಿಸಲಿದೆ ಎಂದರು.
ರಾಜಕೀಯ ಕಾರಣಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ದಿಕ್ಕು ತಪ್ಪುತ್ತಿದೆ : ಪರಶುರಾಮ ಥೀಂ ಪಾರ್ಕ್ ವಿವಾದವನ್ನು ಹಿಂದುತ್ವ, ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ : ಸುನಿಲ್.ಕೆ.ಆರ್
ಪರಶುರಾಮ ಥೀಂ ಪಾರ್ಕ್ನ ಕುರಿತು ಕಳೆದ ಒಂದೂವರೆ ವರ್ಷದಲ್ಲಿ ತನಿಖೆ ನಡೆಸಿದರು ಸತ್ಯ ಬಹಿರಂಗ ಪಡಿಸಲು ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ದೃಷ್ಟಿಯಿಂದ ರೂಪುಗೊಂಡಿರುವಂತಹ ಪರಶುರಾಮ ಥೀಮ್ ಪಾರ್ಕನ್ನು ಹಿಂದುತ್ವದ ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ. ಪರಶುರಾಮ ಥೀಮ್ ಪಾರ್ಕ್ ಮೂಲಕ ಬೈಲೂರು ಪ್ರವಾಸಿ ತಾಣವಾಗಿ ಪ್ರಸಿದ್ಧಿ ತಂದು ಕಾರ್ಕಳಕ್ಕೆ ಒಂದು ಮುಕುಟಪ್ರಾಯವಾಗಬೇಕಿತ್ತು. ಅತ್ಯಂತ ಸುಂದರ ಪರಿಸರದಲ್ಲಿ ಥೀಮ್ ಪಾರ್ಕ್ ನಿರ್ಮಾಣದೊಂದಿಗೆ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸಬೇಕಿತ್ತು.
ಆದರೆ, ರಾಜಕೀಯ ಕಾರಣಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ದಿಕ್ಕು ತಪ್ಪುತ್ತಿದೆ ಸ್ಥಗಿತಗೊಂಡ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ಆದಷ್ಟು ಶೀಘ್ರಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿ ಕಾರ್ಕಳದ ಗರಿಮೆಯನ್ನ ನಾಡಿನಾದ್ಯಂತ ಪಸರಿಸೋಣ ಎಂದು ವಿಶ್ವಹಿಂದೂ ಪರಿಷದ್ ಪ್ರಮುಖರಾದ ಸುನಿಲ್ ಕೆ ಆರ್ ತಿಳಿಸಿದ್ದಾರೆ.