ಕೋಟ : ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇದರ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಶ್ರೀ ಗುರುನರಸಿಂಹ ದೇವಸ್ಥಾನ ಜ್ಞಾನಮಂದಿರ, ಸಾಲಿಗ್ರಾಮದಲ್ಲಿ ಜರಗಿತು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ. ಎಸ್. ಕಾರಂತ ಶುಭಾಶಂಸನೆಗೈದು ಮಾತಾನಾಡಿ ಸಮಾಜದ ಓರೆಕೋರೆಗಳನ್ನು ತಿದ್ದಲು ಸಂಘಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ವಿಪ್ರ ವಲಯ ಸಾಲಿಗ್ರಾಮ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೇ ವೇಳೆ ರಂಗ ಕಲಾವಿದೆ ಸುಧಾ ಮಣೂರು ಇವರಿಗೆ ಗೌರವ ಸನ್ಮಾನ ನೀಡಲಾಯಿತು. ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ 2024 ಪುರಸ್ಕೃತೆ ಜಾಹ್ನವಿ ಹೇರ್ಳೆ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಧಾರ್ಮಿಕ ಸಂಘಟನೆಯಾದ ಶ್ರೀ ಮಹಾವಿಷ್ಣು ಭಜನಾ ಸಂಘ, ಪಾರಂಪಳ್ಳಿ ಇವರನ್ನು ಗುರುತಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇದರ ಅಧ್ಯಕ್ಷೆ ವನಿತಾ ಉಪಾಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಕೆ.ಅನಂತ ಪದ್ಮನಾಭ ಐತಾಳ್, ಬ್ರಹ್ಮಾವರ ತಾಲೂಕು ಮಹಿಳಾ ವಲಯದ ಅಧ್ಯಕ್ಷೆ ಮಂಜುಳ ಅಡಿಗ, ಉಪಸ್ಥಿತರಿದ್ದರು. ಕಾರ್ಯಕ್ರಮದ ವರದಿಯನ್ನು ಸುಜಾತ ಬಾಯರಿ ವಾಚಿಸಿದರು. ಸನ್ಮಾನ ಪತ್ರವನ್ನು ಡಾ.ಸವಿತಾ ಉಪಾಧ್ಯಾಯ, ಶುಭ ಅಡಿಗ ವಾಚಿಸಿದರು. ಸ್ಮಿತಾ ರಾಣಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸುಪ್ರೀತಾ ಪುರಾಣಿಕ ನಿರೂಪಿಸಿದರು. ಶಿವ ಪ್ರಭಾ ಅನ್ನೇ ವಂದಿಸಿದರು.
