ಉಡುಪಿ : ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳಾ ಪ್ರಯಾಣಿಕರನ್ನು ತನ್ನ ಸಮಯಪ್ರಜ್ಞೆಯಿಂದ ತಕ್ಷಣ ರಕ್ಷಿಸಿದ RPF ಮಹಿಳಾ ಸಿಬ್ಬಂದಿ ಅಪರ್ಣಾರವರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ರವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು. ತುರ್ತು ಸಂದರ್ಭದಲ್ಲಿ ಸಮಯೋಚಿತ ಕಾರ್ಯದ ಮೂಲಕ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಅಪರ್ಣಾರವರಿಗೆ ಅಭಿನಂದನೆ ಸಲ್ಲಿಸಿದರು.
Railway Station
ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ: ಆರ್ಪಿಎಫ್ನ ಮಹಿಳಾ ಸಿಬ್ಬಂದಿಯಿಂದ ರಕ್ಷಣೆ
ಉಡುಪಿ : ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ಆರ್ಪಿಎಫ್ ಮಹಿಳಾ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.
ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮಂಗಳೂರು ಮಡ್ಗಾಂವ್ ಪ್ಯಾಸೆಂಜರ್ ರೈಲು ಹತ್ತುವ ವೇಳೆ ಮಹಿಳೆ ಆಯತಪ್ಪಿ ಬಿದ್ದಿದ್ದರು. ತಕ್ಷಣವೇ ಸಮಯೋಚಿತ ಕಾರ್ಯಾಚರಣೆ ನಡೆಸಿದ ಆರ್ಪಿಎಫ್ ಸಿಬ್ಬಂದಿ ಅರ್ಪಣಾ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ರೈಲ್ವೆ ಮಹಿಳಾ ಪ್ಯಾಸೆಂಜರ್ ಅಪಾಯದಿಂದ ಪಾರಾಗಿದ್ದಾರೆ.
ಆರ್ಪಿಎಫ್ ಸಿಬ್ಬಂದಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಂಗಳೂರು : ಸಂಚಾರಲ್ಲಿದ್ದ ರೈಲು ಹತ್ತಲು ಯತ್ನಿಸಿ ಎಡವಿ ಬಿದ್ದ ಯುವಕನನ್ನು ರೈಲ್ವೇ ಪೊಲೀಸ್ ಒಬ್ಬರು ರಕ್ಷಿಸಿರುವ ಘಟನೆ ಮಂಗಳೂರಿನ ಪಡೀಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರೈಲು ಇನ್ನೇನು ಚಲಿಸಿತ್ತು. ವೇಗವೂ ಹೆಚ್ಚಿದೆ. ಆಗ ಓಡೋಡಿಕೊಂಡು ಬಂದ ಯುವಕನೋರ್ವನು ರೈಲು ಹತ್ತಲು ಯತ್ನಿಸಿದ್ದಾನೆ. ಆಗ ರೈಲಿನ ಬಾಗಿಲಿನ ಸರಳು ಆತನ ಹಿಡಿತಕ್ಕೆ ಸಿಗದೆ ಎಡವಿ ಬಿದ್ದಿದ್ದಾನೆ. ಈ ವೇಳೆ ಆತ ರೈಲು ಹಾಗೂ ಪ್ಲ್ಯಾಟ್ಫಾರ್ಮ್ ಎಡೆಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದಾನೆ. ಆಗ ಅಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಾಘವನ್ ಇದನ್ನು ಗಮನಿಸಿದ್ದಾರೆ.
ತಕ್ಷಣ ಧಾವಿಸಿದ ಅವರು ಯುವಕನನ್ನು ಎಳೆದು ರಕ್ಷಿಸಿದ್ದಾರೆ. ಕ್ಷಣ ಮಾತ್ರದಲ್ಲಿ ಈ ಘಟನೆ ನಡೆದುಹೋಗಿದೆ. ಯುವಕ ಭಾರೀ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾನೆ. ಈ ದೃಶ್ಯ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.