ಉಡುಪಿ : ದಸರಾ ಹಬ್ಬದ ಸಂದರ್ಭ ಬೆಂಗಳೂರಿನಿಂದ ಕರಾವಳಿಯ ಊರಿಗೆ ಬರಲು ಟಿಕೆಟ್ ಸಿಗದೇ ಸಮಸ್ಯೆಗೆ ಸಿಲುಕಿದ್ದ ನಾಗರಿಕರಿಗೆ ಶುಭ ಸುದ್ದಿ ಬಂದಿದೆ.
ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರ ನೆರವಿಗೆ ವಿಶೇಷ ರೈಲು ಓಡಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಮನವಿಯಂತೆ ನೈಋತ್ಯ ರೈಲ್ವೇ ಅಕ್ಟೋಬರ್ 10 ಹಾಗೂ ಅಕ್ಟೋಬರ್ 12ರಂದು ವಿಶೇಷ ರೈಲುಗಳನ್ನು ಹೊರಡಿಸುವುದಾಗಿ ಪ್ರಕಟಿಸಿದೆ.
ಕುಂದಾಪುರ ರೈಲು ಹಿತರಕ್ಷಣ ಸಮಿತಿಯ ಗಣೇಶ್ ಪುತ್ರನ್ ಅವರು ಬಸ್ ಮತ್ತು ಈಗಿರುವ ರೈಲುಗಳ ಟಿಕೆಟ್ ಸಂಪೂರ್ಣ ಖಾಲಿಯಾದ ಬಗ್ಗೆ ಸಂಸದರ ಗಮನ ಸೆಳೆದಿದ್ದರು. ಬಸ್ ಟಿಕೆಟ್ ದರ ಏರಿಕೆಯೂ ಆಗಿದೆ. ಇದಕ್ಕೆ ತತ್ಕ್ಷಣವೇ ಸ್ಪಂದಿಸಿದ ಸಂಸದರು ರೈಲ್ವೇ ಇಲಾಖೆಗೆ ನವರಾತ್ರಿ ವಿಶೇಷ ರೈಲುಗಳ ಪ್ರಯಾಣಕ್ಕೆ ಸೂಚನೆ ನೀಡಿದ್ದರು.
ಮೈಸೂರಿನಿಂದ ಮೆಜೆಸ್ಟಿಕ್ ಮಾರ್ಗವಾಗಿ ಒಂದು ರೈಲು ಮತ್ತೊಂದು ರೈಲು ಯಶವಂತಪುರದಿಂದ ಹೊರಡಲಿದೆ. ಈ ಬಗ್ಗೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟನೆ ನೀಡಿದ್ದಾರೆ.