ಉಡುಪಿ : ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಪಶು ಚಿಕಿತ್ಸಾಲಯ ಮಲ್ಪೆ/ಜಿಲ್ಲಾ ಪಂಚಾಯತ್ ಉಡುಪಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಡುಪಿ ಯುವಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ (ರಿ.) ಕೊಡವೂರು, ಲಯನ್ಸ್ & ಲಿಯೂ ಕ್ಲಬ್ ಪರ್ಕಳ ಹಾಗೂ ಗಣೇಶೋತ್ಸವ ಸಮಿತಿ ಕೊಡುವೂರು ಇವರ ಜಂಟಿ ಆಶ್ರಯದಲ್ಲಿ ಕೊಡವೂರಿನಲ್ಲಿ 6 ನೇ ಬಾರಿಗೆ ಸಾಕು / ಬೀದಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಅ.06 ರಂದು ಸ್ಥಳ ಕೊಡವೂರು ಶಾಲಾ ವಠಾರದಲ್ಲಿ ಸಮಯ ಬೆಳಿಗ್ಗೆ 9.30 ರಿಂದ 11-30 ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 8660984279 ನ್ನು ಸಂಪರ್ಕಿಸಬಹುದು.
Tag:
Rabies Prevention
ಉಡುಪಿ : ಹುಚ್ಚು ನಾಯಿಯೊಂದು ಎಂಟು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಉಡುಪಿ ನಗರದ ಮಾರುತಿ ವೀಥಿಕಾದಲ್ಲಿ ಸಂಭವಿಸಿದೆ.
ಈ ನಾಯಿಯು ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕಿದವರೆಲ್ಲರಿಗೂ ಕಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಕೆಲವರ ಕಾಲಿನ ಮಾಂಸ ಕೂಡ ಕಚ್ಚಿ ತಿಂದಿದೆ. ಗಾಯಗೊಂಡ ಎಲ್ಲರೂ ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸ್ಥಳೀಯವಲ್ಲದ ಎಲ್ಲಿಂದಲೋ ಬಂದ ಈ ನಾಯಿಗೆ ಹುಚ್ಚು ಹಿಡಿದಿರುವುದನ್ನು ಸ್ಥಳೀಯರು ಗಮನಿಸಿದರು. ಹಲವು ಮಂದಿಗೆ ಕಚ್ಚಿ ತೀರಾ ಸುಸ್ತಾದ ಈ ನಾಯಿಯು ಉಡುಪಿಯ ನಾರ್ತ್ ಶಾಲೆಯ ಆವರಣದಲ್ಲಿ ಬಂದು ಬಿದ್ದಿರುವುದನ್ನು ಸಾರ್ವಜನಿಕರು ನೋಡಿದ್ದಾರೆ. ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಪ್ರಾಣಿದಯಾ ಸಂಘದವರಿಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಹಾಗೂ ಪ್ರಾಣಿದಯಾ ಸಂಘದ ಮಂಜುಳಾ ಪರಿಶೀಲನೆ ನಡೆಸಿದರು. ಪಶು ವೈದ್ಯರನ್ನು ಕರೆಸಿ ನಾಯಿಗೆ ಚಚ್ಚುಮದ್ದು ನೀಡಲಾಯಿತು.