ಪುತ್ತೂರು : ಬಜರಂಗದಳದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿ ಸಚಿನ್ ಕೆಯ್ಯೂರು (27) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಸಚಿನ್ ಕೊಯ್ಯೂರು ಘಟಕದ ಸುರಕ್ಷಾ ಪ್ರಮುಖ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು.
ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾಗಿರುವ ಸಚಿನ್ ಕೆಯ್ಯೂರು ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಶಾಲು ಬಿಗಿದು ನೇಣು ಹಾಕಿಕೊಂಡಿದ್ದಾರೆ.
ಬಿಸಿಎ ಪದವಿ ಪೂರ್ಣಗೊಳಿಸಿದ್ದ ಸಚಿನ್ ಉದ್ಯೋಗದ ಹುಡುಕಾಟದಲ್ಲಿದ್ದರು. ಅತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.