ಉಡುಪಿ : ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ ಸಭೆಯ ಕಸ ಸಂಗ್ರಹಣೆ ಹಾಗೂ ಸಾಗಾಣಿಕೆ ವಾಹನಗಳ ಪೂಜೆ ಇರುವುದರಿಂದ ಸದರಿ ದಿನದಂದು ನಗರಸಭಾ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Public Notice
ಮಂಗಳೂರು : ಬಂಟ್ವಾಳದ ತುಂಬೆಯಿಂದ ಬೆಂದೂರ್ವೆಲ್ಗೆ ಬರುವ ಕುಡಿಯುವ ನೀರಿನ ಕೊಳವೆಗೆ ಪಡೀಲ್ ಬಳಿ ಹಾನಿಯುಂಟಾದ ಪರಿಣಾಮ ಮಂಗಳೂರು ನಗರದ ಶೇಕಡ 60 ಭಾಗಗಳಿಗೆ ನೀರಿನ ಸರಬರಾಜಿನಲ್ಲಿ ಸಮಸ್ಯೆಯುಂಟಾಗಿದೆ.
ಗೇಲ್ ಕಂಪೆನಿಯು ಕಾಮಗಾರಿ ಮಂಗಳವಾರ ರಾತ್ರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೊಳವೆಗೆ ಹಾನಿಯುಂಟಾಗಿತ್ತು. ಮಂಗಳವಾರ ರಾತ್ರಿಯಿಂದಲೇ ನೀರಿನ ಸರಬರಾಜಿಗೆ ಸಮಸ್ಯೆ ಎದುರಾಗಿದೆ. ಇದರಿಂದ ನಗರಾದಾದ್ಯಂತ ಜನರು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಮಂಗಳವಾರ ರಾತ್ರಿ ಕೊಳವೆಗೆ ಹಾನಿಯಾಗಿದ್ದು, ಇದನ್ನು ಸರಿಪಡಿಸಲು ಮಂಗಳೂರು ಮಹಾನಗರ ಪಾಲಿಕೆ ನಿರಂತರ ಶ್ರಮ ವಹಿಸಲಾಗಿದೆ. ಇಂದು ರಾತ್ರಿಯೊಳಗೆ ಕೆಲಸ ಪೂರ್ಣಗೊಳಿಸುವ ಸಾಧ್ಯತೆಯಿದೆ. ನಾಳೆಯಿಂದ ನೀರು ಸರಬರಾಜು ಆಗುವ ಸಾಧ್ಯತೆಯಿದೆ.
ಉಡುಪಿ : ಜಿಲ್ಲೆಯ ವಿವಿಧ ಭಾಗಗಳಿಗೆ ಪರವಾನಿಗೆ ಹೊಂದಿ ಈಗಾಗಲೇ ಸಂಚರಿಸುತ್ತಿದ್ದ ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದಲ್ಲಿ ಅಥವಾ ಟ್ರಿಪ್ಗಳನ್ನು ಕಡಿತಗೊಳಿಸಿದ್ದಲ್ಲಿ ಸದರಿ ಬಸ್ಸುಗಳ ನೋಂದಣಿ ಸಂಖ್ಯೆ ಲಭ್ಯವಿದ್ದಲ್ಲಿ, ಸಾರ್ವಜನಿಕರು ನೋಂದಣಿ ಸಂಖ್ಯೆ ಮತ್ತು ಬಸ್ಸಿನ ಹೆಸರು ನಮೂದಿಸಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಲಿಖಿತವಾಗಿ ದೂರನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2575137 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.